ಹಾಸನ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಸನದ ವಿಜ್ಞಾನ ಕಾಲೇಜಿನ ಹಸಿರು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಡಿಸೆಂಬರ್ 14 ಹಾಗೂ 15 ರಂದು ಆಯೋಜಿಸಿದ್ದ ಟೆನ್ನಿಸ್ ಬಾಲ್ ಪಂದ್ಯಾವಳಿಯನ್ನು ಹಾಸನಾಂಬಾ ಫ್ರೆಂಡ್ಸ್ ಜಯಿಸಿದೆ.
ಫೈನಲ್ ನಲ್ಲಿ ಹಾಸನಾಂಬಾ ಫ್ರೆಂಡ್ಸ್ ತಂಡ ಲೈಲಾಪುರ ಚಂದ್ರೇಗೌಡರ ಸಾರಥ್ಯದ SMCC ಸ್ನೇಹಪ್ರಿಯ ಲೈಲಾಪುರದ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿಯಾಗಿ 40 ಸಾವಿರ ನಗದು,ರನ್ನರ್ಸ್ ತಂಡ 20 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು. 3 ನೇ ಸ್ಥಾನವನ್ನು ಪೆಂಟಗನ್ ಹಾಸನ,4 ನೇ ಸ್ಥಾನವನ್ನು ಹಾಸನಾಂಬಾ ಹಾಸನ ಪಡೆಯಿತು.
ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಡೇವಿಡ್ ,ಬೆಸ್ಟ್ ಬೌಲರ್ SMCC ಸ್ನೇಹಪ್ರಿಯಾದ ರಕ್ಷಿತ್ ಪಾಲಾಯಿತು. 2 ದಿನಗಳ ಕಾಲ ನಡೆದ ಈ ಪಂದ್ಯಾವಳಿಯ ಉಸ್ತುವಾರಿಯನ್ನು ಹಾಸನಾಂಬಾ ತಂಡದ ಸವ್ಯಸಾಚಿ ಆಟಗಾರ ರಾಕಿ ವಹಿಸಿದ್ದರು.
ಆರ್.ಕೆ.ಆಚಾರ್ಯ ಕೋಟ