ಕಟ್ಟೆ ಫ್ರೆಂಡ್ಸ್ ಡಿವೈನ್ ಪಾರ್ಕ್, ಸಾಲಿಗ್ರಾಮ ಇವರ ಆಶ್ರಯದಲ್ಲಿ ಡಿಸೆಂಬರ್ 7 ಹಾಗೂ 8 ರಂದು HPL-2019 ಪಂದ್ಯಾಕೂಟ ಸಾಲಿಗ್ರಾಮದ ಹಾಳುಕೋಟೆ ಮೈದಾನದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆಯಲಿದೆ.
7 ಶನಿವಾರದಂದು ಸ್ವಜಾತಿ ಬಾಂಧವರ ತಂಡಗಳು ಸೆಣಸಾಡಲಿದ್ದು, 8 ರವಿವಾರದಂದು ಸ್ಥಳೀಯ 6 ಫ್ರಾಂಚೈಸಿಗಳು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಹಣಾಹಣಿಗಿಳಿಯಲಿದೆ. ವಿಜೇತ ತಂಡ 25,001 ನಗದು ಹಾಗೂ ರನ್ನರ್ಸ್ ತಂಡ 20,001 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಈಗಾಗಲೇ ಸ್ವಜಾತಿ ಬಾಂಧವರ 10 ತಂಡಗಳು ಹಾಗೂ ಸ್ಥಳೀಯ 6 ಫ್ರಾಂಚೈಸಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಪ್ರವೇಶ ಪ್ರಕ್ರಿಯೆ ಮುಗಿದಿರುತ್ತದೆಯೆಂದು ಪಂದ್ಯಾಕೂಟ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್.ಕೆ.ಆಚಾರ್ಯ ಕೋಟ