ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದ ಗುಜರಾತ್ ತಂಡ 5 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು.
ಮುಂಬಯಿ,ನಾಗಪುರ,ವಿದರ್ಭ ಸಹಿತ ರಾಷ್ಟ್ರದ ನಾನಾಭಾಗಗಳಿಂದ ಪ್ರತಿಷ್ಠಿತ ತಂಡಗಳು ಹಣಾಹಣಿಗಿಳಿದಿದ್ದವು.
ಚಾಂಪಿಯನ್ ಗುಜರಾತ್ ತಂಡದಲ್ಲಿ ಕರ್ನಾಟಕದ ಪ್ರತಿಷ್ಠಿತ ತಂಡದ ಮೂವರು ಆಟಗಾರರಲ್ಲಿ ಡ್ಯಾಶಿಂಗ್ ಆಲ್ ರೌಂಡರ್ ಫ್ರೆಂಡ್ಸ್ ನ ಸಾಗರ್ ಭಂಡಾರಿ ಫೈನಲ್ ನಲ್ಲಿ ಅಮೂಲ್ಯ 21 ರನ್ ಗಳಿಸಿದರೆ, ಜೈ ಕರ್ನಾಟಕದ ಸ್ಪೀಡ್ ಸ್ಟಾರ್ ಮಾರ್ಕ್ ಮಹೇಶ್ 2 ಓವರ್ ನಲ್ಲಿ 1 ಮೇಡನ್ ಸಹಿತ 2 ವಿಕೆಟ್ ಹಾಗೂ ಮೈಟಿಯ ಸ್ಪಿನ್ ಗಾರುಡಿಗ ಈಲು 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆರ್.ಕೆ.ಆಚಾರ್ಯ ಕೋಟ