Categories
ಕ್ರಿಕೆಟ್

ಮಂಗಳೂರಿನ ಕ್ರಿಕೆಟ್ ಕಾಶಿಯಲ್ಲಿ ಜಿ .ಎಸ್. ಬಿ ಹರಾಜು ಆಧಾರಿತ ಯುನೈಟೆಡ್ ಕ್ರಿಕೆಟ್ ಲೀಗ್

ಮಂಗಳೂರಿನ ಜಿ .ಎಸ್. ಬಿ ಕ್ರೀಡಾಪ್ರೇಮಿಗಳಿಗೆ ಇಲ್ಲೊಂದು ಹೊಸ ಸುದ್ದಿ. ಆತ್ಮೀಯರೇ ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ನಾಲ್ಕನೇ ಋತುವಿನ ಅಂಡರ್ ಆರ್ಮ್ ಕ್ರಿಕೆಟ್‌  “ಯುನೈಟೆಡ್ ಕ್ರಿಕೆಟ್ ಲೀಗ್” ಶೀರ್ಷಿಕೆಯಡಿಯಲ್ಲಿ ನಡೆಯಲಿದೆ. ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಉತ್ಸಾಹಭರಿತ ಕ್ರಿಕೆಟ್ ಪ್ರೇಮಿಗಳ ಕುಟುಂಬವಾಗಿದ್ದು, ಯುವಕರನ್ನು ಪ್ರೇರೇಪಿಸಲು, ಕ್ರಿಕೆಟ್‌ನ ಅದ್ಭುತ ಮತ್ತು ಜನಪ್ರಿಯ ಕ್ರೀಡೆಯನ್ನು ಅನ್ವೇಷಿಸಲು ಒಟ್ಟುಗೂಡಿದ ಒಂದು ಸಂಸ್ಥೆ.  ಕರ್ನಾಟಕದ ದಕ್ಷಿಣ ಕರಾವಳಿ ಬೆಲ್ಟ್‌ಗೆ ವಿಶಿಷ್ಟವಾದ ಅಂಡರ್ ಆರ್ಮ್ ಕ್ರಿಕೆಟ್‌ನ ಸಾಂಪ್ರದಾಯಿಕ ಆಟವನ್ನು ಉತ್ತೇಜಿಸಲು ಪ್ರತಿ ವರ್ಷ ಕ್ರಿಕೆಟ್ ಆಯೋಜಿಸುತ್ತಾ  ಇರುವ ಇವರು ಇದೇ ಬರುವ ಮಾರ್ಚ್ 25, 26 ರಂದು ಮಂಗಳೂರು ಉರ್ವಾ ಮೈದಾನದಲ್ಲಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದಾರೆ.
ಟೀಮ್ ಕೊಡಿಯಾಲ್ ಯುನೈಟೆಡ್ ನ ಸಮಾನ ಮನಸ್ಕ ಕ್ರೀಡಾಪ್ರೇಮಿಗಳು ಯುನೈಟೆಡ್ ಕ್ರಿಕೆಟ್ ಲೀಗ್  (ಯುಸಿಎಲ್)-2023 ರಚಿಸಿದ್ದಾರೆ. ಈ   ಕ್ರಿಕೆಟ್ ಪಂದ್ಯಾವಳಿ ಸುತ್ತಲಿನ ಪ್ರದೇಶದಲ್ಲಿ ಕುತೂಹಲ ಮೂಡಿಸಿದೆ.  ಮಂಗಳೂರು ಹಾಗೂ ಸುತ್ತಮುತ್ತಲಿನ  ಪ್ರದೇಶದ ಜಿ .ಎಸ್. ಬಿ ಯುವಕರಲ್ಲಿ ಒಗ್ಗಟ್ಟು ತರಲು ಯುಸಿಎಲ್‌ 2023 ರಚಿಸಲಾಗಿದೆ, ಜಿ .ಎಸ್. ಬಿ ಗಳಲ್ಲೂ  ಪ್ರತಿಭಾವಂತ ಕ್ರಿಕೆಟ್ ಆಟಗಾರರು ಇದ್ದಾರೆ. ಈ ಪ್ರದೇಶದ ಜಿ .ಎಸ್. ಬಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಐಪಿಎಲ್ ಮಾದರಿಯಲ್ಲಿ ‘ಯುನೈಟೆಡ್ ಕ್ರಿಕೆಟ್ ಲೀಗ್-2023’ಕ್ಕೆ ಆಟಗಾರರನ್ನು ಖರೀದಿ ಮಾಡಲಾಗಿದೆ. ಈ ರೀತಿಯ ಬಿಡ್ಡಿಂಗ್‌ನಿಂದ ಉತ್ತಮವಾಗಿ ಆಟವಾಡಲು ಪ್ರೋತ್ಸಾಹ ಸಿಗುತ್ತದೆ. ಇದರಿಂದ ಯುವಕರಲ್ಲಿ ಆಟದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದೆ.   ಪಂದ್ಯಾವಳಿಯ ಹರಾಜು ಪ್ರಕ್ರಿಯೆ  ಕಳೆದ ಭಾನುವಾರ ಗೋಪಾಲಕೃಷ್ಣ ಭಟ್ ಮಂಗಳೂರು (ಗೋಪಿ ಭಟ್ ಮಾಮ್ )  ನಡೆಸಿಕೊಟ್ಟರು.
ಮಂಗಳೂರಿನ ಅತ್ಯುತ್ತಮ ಮೈದಾನಗಳಲ್ಲಿ ಒಂದಾದ ಉರ್ವಾ ಕ್ರಿಕೆಟ್ ಮೈದಾನದಲ್ಲಿ ಈ ಟೂರ್ನಮೆಂಟ್ ಆಯೋಜಿಸಲಾಗಿದೆ. ಕರ್ನಾಟಕ ಮತ್ತು ಕೇರಳದಾದ್ಯಂತ 10 ಫ್ರಾಂಚೈಸಿ ತಂಡಗಳು ಮತ್ತು ಒಟ್ಟು 150+ ಆಟಗಾರರು ಭಾಗವಹಿಸುತ್ತಾರೆ.
ಯುನೈಟೆಡ್ ಕ್ರಿಕೆಟ್ ಲೀಗ್ ಕ್ರಿಕೆಟ್ ಟೂರ್ನಿ – ಯಾವ ಹೀರೋ ಯಾವ ಟೀಂನಲ್ಲಿ..?
UCL ಸೀಸನ್ 4 ಗಾಗಿ ನೋಂದಾಯಿತ ತಂಡಗಳು:
1. ಡೆಡ್ಲಿ ಪ್ಯಾಂಥರ್ಸ್ (ರಿ)
ಐಕಾನ್: ವೆಂಕಟೇಶ್ ಪೈ
ಆಡುವ ಮಾಲೀಕರು: ವಿಘ್ನೇಶ್ ನಾಯಕ್
2.  ಜಿ .ಎಸ್. ಬಿ ಉರ್ವಾ
ಐಕಾನ್: ನಾರಾಯಣ ಶೆಣೈ
ಆಡುವ ಮಾಲೀಕರು: ಸಂದೀಪ್ ಪ್ರಭು
3. ಸಪ್ತಮಿ ವಾರಿಯರ್ಸ್
ಐಕಾನ್: ಗುರುದತ್ ಕಿಣಿ
ಆಡುವ ಮಾಲೀಕರು: ಮುರಳಿ ನಾಯಕ್
4. ಕಾರ್ಕಳ ಸೂಪರ್ ಕಿಂಗ್ಸ್
ಐಕಾನ್: ವರುಣ್ ಶಾನಭಾಗ್
ಆಡುವ ಮಾಲೀಕರು: ಅಂಗಧ್ ಕಾಮತ್
5. ಕಾರ್ ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರ
ಐಕಾನ್: ರಜತ್ ಶೆಣೈ
ಆಡುವ ಮಾಲೀಕರು: ರವಿರಾಜ್ ಶೆಣೈ
6. ಕ್ಲಾಸಿಕ್ ಸಲ್ಮಾರ್ ಕಾರ್ಕಳ
ಐಕಾನ್: ಮಹೇಶ್ ನಾಯಕ್
ಆಡುವ ಮಾಲೀಕರು: ಅಶೋಕ್ ಪೈ
7. ಜೈಕಾರ್ ಸ್ಟ್ರೈಕರ್ಸ್
ಐಕಾನ್: ವಿಘ್ನೇಶ್ ಶೆಣೈ
ಆಡುವ ಮಾಲೀಕರು: ಕಾರ್ತಿಕ್ ಶೆಣೈ
8. ಕಾರ್ತಿಕ್ ಇಲೆವೆನ್
ಐಕಾನ್: ಗಿರೀಶ್ ಪೈ
ಆಡುವ ಮಾಲೀಕರು: ಪ್ರತಾಪ್ ಮಲ್ಯ
9. ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
ಐಕಾನ್: ಮನೀತ್ ಶೆಣೈ
ಆಡುವ ಮಾಲೀಕರು: ನರಸಿಂಹ ಶೆಣೈ
10. ಮಾಲ್ಶಿ ಸ್ಮಾಷರ್ಸ್, ಮಂಗಳೂರು
ಐಕಾನ್: ಶ್ರೀನಿವಾಸ್ ಪೈ
ಆಡುವ ಮಾಲೀಕರು: ನಾಗೇಶ್ ಶಶಾಂಕ್
ಬಹುಮಾನದ ವಿವರಗಳು:
ವಿಜೇತರು:      50,007/- + ಟ್ರೋಫಿ
ರನ್ನರ್ ಅಪ್: 30,007/- + ಟ್ರೋಫಿ
2ನೇ ರನ್ನರ್ ಅಪ್: ಟ್ರೋಫಿ
(ಮ್ಯಾನ್ ಆಫ್ ದಿ ಸೀರೀಸ್, ಮ್ಯಾನ್ ಆಫ್ ದಿ ಮ್ಯಾಚ್ (ಪ್ರತಿ ಪಂದ್ಯ), ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಕ್ಯಾಚರ್)
2017 ರಲ್ಲಿ ರೂಪುಗೊಂಡ ಕೊಡಿಯಾಲ್ ಯುನೈಟೆಡ್  ದಕ್ಷಿಣ ಕನ್ನಡದ ಒಳಗೆ ಮತ್ತು ಹೊರಗೆ ವಿವಿಧ ಪಂದ್ಯಾವಳಿಗಳಲ್ಲಿ ಕ್ರಿಕೆಟ್, ಕಬ್ಬಡಿ, ವಾಲಿಬಾಲ್ ಮತ್ತು ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದೆ. 2018 ರಲ್ಲಿ ಪ್ರಾರಂಭವಾದ ಯುನೈಟೆಡ್ ಕ್ರಿಕೆಟ್ ಲೀಗ್ ಅಂಡರ್ ಆರ್ಮ್ ಕ್ರಿಕೆಟನ್ನು ಎತ್ತರಕ್ಕೆ ಕೊಂಡೊಯ್ದಿದೆ.  ವಿವಿಧ ತಂಡಗಳು ಮತ್ತು ತಂಡದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಕಳೆದ ಮೂರೂ ಆವೃತ್ತಿಗಳು ಅದ್ಧೂರಿಯಾಗಿ ಯಶಸ್ವಿಯಾಗಿವೆ. ಕಳೆದ 3 ಸೀಸನ್ ಗಳಲ್ಲಿ ನಡೆದ ಪ್ರತಿಯೊಂದು ಪಂದ್ಯವನ್ನು ಉತ್ತಮವಾಗಿ ಯೋಜಿಸಲಾಗಿದೆ ಮತ್ತು ಆಯೋಜಿಸಲಾಗಿದೆ. ಅಗಾಧ ಪ್ರತಿಕ್ರಿಯೆಯಿಂದಾಗಿ, ಯುನೈಟೆಡ್ ಕ್ರಿಕೆಟ್ ಲೀಗ್ ಈ ವರ್ಷ ತನ್ನ ನಾಲ್ಕನೇ ಋತುವನ್ನು ಪ್ರಾರಂಭಿಸುತ್ತಿದೆ.
ಮುಂಬರುವ ಪಂದ್ಯಾವಳಿಯಲ್ಲಿ ಕ್ರೀಡಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ  ಭಾಗವಹಿಸುವ ಮೂಲಕ  ಬೆಂಬಲ ಮತ್ತು ಪ್ರೋತ್ಸಾಹ ವಿಸ್ತರಿಸಲು ವಿನಂತಿಸುತ್ತೇವೆ  ಎಂದು ಪಂದ್ಯಾಕೂಟದ ನೇತೃತ್ವವನ್ನು ವಹಿಸಿದಂತಹ  ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್‌ನ ಕೊಂಚಾಡಿ ನರಸಿಂಹ ಶೆಣೈ ಹೇಳಿದರು.  ಸ್ಪೋರ್ಟ್ಸ್ ಕನ್ನಡದ ಜೊತೆ ಮಾತನಾಡಿದ ಅವರು ಈ ಎಲ್ಲಾ ವರ್ಷಗಳಲ್ಲಿ ಕ್ರೀಡಾಪ್ರೇಮಿಗಳು ನೀಡಿದ ಬೆಂಬಲ ಮತ್ತು ವಿಶ್ವಾಸಕ್ಕಾಗಿ  ಹೃತ್ಪೂರ್ವಕವಾಗಿ ಧನ್ಯವಾದ ಹೇಳಲು ಬಯಸಿದರು.
ಕ್ರಿಕೆಟ್ ಮಾತ್ರವಲ್ಲದೆ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಸ್ವಯಂಸೇವಕರಾಗಿ ಮತ್ತು  ಚಾರಿಟಿಯಲ್ಲಿ ಕೊಡಿಯಾಲ್ ಯುನೈಟೆಡ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ, ಯುವಕರು ಮತ್ತು ಹಿರಿಯರನ್ನು ಒಳಗೊಂಡಿರುವ ಒಂದು ವರ್ಗೀಕೃತ ಗುಂಪು ಇದು ಪ್ರಸ್ತುತ 30+ ಸದಸ್ಯರುಗಳನ್ನು ಹೊಂದಿದೆ.
ಸ್ಪೋರ್ಟ್ಸ್ ಕನ್ನಡ ವತಿಯಿಂದ ಈ ಕ್ರಿಕೆಟ್ ಪಂದ್ಯಾವಳಿಗೆ ಶುಭಾಶಯಗಳು.
🖋️ ಬರಹ
ಸುರೇಶ್ ಭಟ್, ಮೂಲ್ಕಿ
ಮೊ: 98454 83433

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

three + 19 =