ಮಂಗಳೂರು: ಮಂಗಳೂರಿನ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ ಜಿ.ಸ್.ಬಿ ಪ್ರೀಮಿಯರ್ ಲೀಗ್ 2023 ಫೆ. 10,11 ಹಾಗೂ 12 ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಇದು GSB ಸಮಾಜ ಭಾಂದವರಿಗಾಗಿ ವಾರ್ಷಿಕವಾಗಿ ನಡೆಯುವ ಹಗಲು ರಾತ್ರಿ ಹರಾಜು ಆಧಾರಿತ ಜಿ ಪಿ ಲ್ ಕ್ರಿಕೆಟ್ ಪಂದ್ಯಾವಳಿ. ಇದು GPL ನ 7ನೆಯ ಆವೃತ್ತಿಯ ಟೂರ್ನಮೆಂಟ್ ಆಗಿದ್ದು ಕ್ರಿಕೆಟ್ ಪಂದ್ಯಾಟಕ್ಕೆ ದಕ್ಷಿಣ ಕನ್ನಡ, ಉಡುಪಿ , ಉತ್ತರ ಕನ್ನಡ ಸಹಿತ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯ ಮುಂಬೈನಿಂದ ತಂಡಗಳು ಹೆಸರು ನೊಂದಾಯಿಸಿದ್ದು 16 ತಂಡಗಳು ಆಗಮಿಸಲಿವೆ.
ಲೀಗ್ ಕಮ್ ನಾಕ್ ಔಟ್ ಮಾದರಿಯ ಪಂದ್ಯಾಕೂಟ ಇದಾಗಿದ್ದು ಪಂದ್ಯಾಕೂಟದ ಚಾಂಪಿಯನ್ ತಂಡಕ್ಕೆ ನಗದು ಹಾಗು ಪ್ರತಿಷ್ಠಿತ ಜಿ ಪಿ ಲ್ ಟ್ರೋಫಿ ಸಿಗಲಿದೆ. ದ್ವಿತೀಯ ಸ್ಥಾನ ಪಡಕೊಳ್ಳುವ ತಂಡಕ್ಕೆ ನಗದು ಹಾಗು ರನ್ನರ್ ಅಪ್ ಟ್ರೋಫಿ ದೊರಕಲಿದೆ.ಸೆಮಿಫೈನಲ್ ಪರಾಜಿತ ತಂಡಗಳ ನಡುವೆ ತ್ರತೀಯ ಸ್ಥಾನಕ್ಕೆ ಮ್ಯಾಚ್ ನಡೆಯಲಿದೆ. ಬೆಸ್ಟ್ ಬೌಲರ್ , ಬೆಸ್ಟ್ ಬ್ಯಾಟ್ಸಮನ್ , ಮ್ಯಾನ್ ಆಫ್ ದಿ ಮ್ಯಾಚ್ ಇಂತಹ ವೈಯುಕ್ತಿಕ ಪ್ರಶಸ್ತಿಗಳು ಸಿಗಲಿವೆ. ಸರಣಿ ಶ್ರೇಷ್ಠ ಆಟಗಾರನಿಗೆ ಆಕರ್ಷಕ ಬೈಕ್ ನೀಡಲಾಗುವುದು.
ಆರ್ಚ್ ಫಾರ್ಮಲಾಬ್ಸ್ ಲಿಮಿಟೆಡ್ GPL 2023 ರ ಶೀರ್ಷಿಕೆ ಪ್ರಾಯೋಜಕರು ಆಗಿರುತ್ತಾರೆ. ಯೂಥ್ ಆಫ್ ಜಿ.ಸ್.ಬಿ ಪಂದ್ಯಾಟದ ನೇರ ಪ್ರಸಾರವನ್ನು ಬಿತ್ತರಿಸಲಿದೆ. ಪಂದ್ಯಾಕೂಟದಲ್ಲಿ ತೃತೀಯ ಅಂಪೈರ್ ತೀರ್ಮಾನದ ಸೌಲಭ್ಯವಿದೆ. ಪ್ರತೀ ಟೀಮಿಗೂ ಪ್ರತ್ಯೇಕ ಡ್ರೆಸ್ ಕೋಡ್ ಹಾಗೂ ಅನುಭವಿಗಳಿಂದ ಕೊಂಕಣಿ, ಹಿಂದಿ ಮತ್ತು ಇಂಗ್ಲಿಷ್ ಕಾಮೆಂಟರಿ, ಸುಸಜ್ಜಿತ ವೀಕ್ಷಕರ ಗ್ಯಾಲರಿ, ಎಲ್.ಇ.ಡಿ ಪರದೆ, ಅನಿಯಮಿತ ಆಹಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯಿರಲಿದೆ. ಸಂಘಟಕರು ಕರಾವಳಿ ಕರ್ನಾಟಕದ ಅತ್ಯಂತ ವೈವಿಧ್ಯಮಯ ಖಾದ್ಯಗಳನ್ನು GSB ಪ್ರೇಕ್ಷಕರಿಗೆ ಉಚಿತವಾಗಿ ನೀಡಲಿದ್ದಾರೆ.