ಹಾರ್ಡ್ ಕೋರ್ಟಿನಲ್ಲಿ ನಡೆದ ನಿನ್ನೆಯ ಮೆಲ್ಬೋರ್ನ್ ಮೇಲಾಟದಲ್ಲಿ ಮಡ್ವಡೇವ್ ವಿರುಧ್ಧ ರೋಚಕವಾಗಿ ರಫಾಲ್ ನಡಾಲ್ ಜಯಭೇರಿ ಬಾರಿಸುವ ಮೂಲಕ ಪುರುಷರ ಟೆನಿಸ್ ಇತಿಹಾಸದಲ್ಲಿ ಇಪ್ಪತ್ತೊಂದು ಗ್ರಾಂಡ್ ಸ್ಲಾಮ್ ಎತ್ತಿದ ವಿಶ್ವದಾಖಲೆ ಬರೆದುಬಿಟ್ಟರು.
ಈ ಶತಮಾನದ ಸಮಕಾಲಿನರು ಸರ್ವಶ್ರೇಷ್ಠರು ಆದ ಫೆಡರರ್, ಜೊಕೊವಿಕ್, ನಡಾಲ್ ನಡುವಿನ ತ್ರಿಬಲ್ ತ್ರೆಟ್ ಸರಣಿಯಲ್ಲಿ ಸದ್ಯಕ್ಕೆ ನಡಾಲ್ ಇತಿಹಾಸ ನಿರ್ಮಿಸಿ ಲೀಡ್ ಪಡೆದುಕೊಂಡರು ಕೂಡ ಜೊಕೊವಿಕ್ ಓವರ್‌ಟೇಕ್ ಮಾಡುವುದು ಖಚಿತ. ವಯಸ್ಸು, ಫಿಟ್ನೆಸ್ ಕಾರಣದಿಂದ ರೋಜರ್ ಪೆಡರರ್ ಇನ್ಮುಂದೆ ಸ್ಲಾಮ್ ಗೆಲ್ಲುವುದು ಅನುಮಾನ ಆದರೆ ವ್ಯಾಕ್ಸಿನೇಷನ್ ವಿವಾದದಿಂದಾಗಿ ಆಸ್ಟ್ರೇಲಿಯಾ ಓಪನ್ ಮಿಸ್ ಮಾಡಿಕೊಂಡ ನಂಬರ್ ಒನ್ ಜೊಕೊವಿಕ್ ಸದ್ಯ ಇರುವ ಫಾರ್ಮಿನಲ್ಲಿ ಮುಂದಿನ ಫ್ರೆಂಚ್, ಯು ಎಸ್ ಓಪನ್ ಮತ್ತು ವಿಂಬಲ್ಡನ್ ಮೇಲೆ ಕಣ್ಣಿಟ್ಟಿರುವುದು ಸತ್ಯ, ಗೆಲ್ಲುವುದು ಗ್ಯಾರಂಟಿ.
ನಡಾಲ್ ವಿಶ್ವದಾಖಲೆಗೆ ಕಂಟಕ ಇರುವುದಂತು ಖಂಡಿತ.
ಇದರ ನಡುವೆ ಇಂತಹದ್ದೊಂದು ಆರೋಗ್ಯಕರ ಟೆನಿಸ್ ಸಮರಗಳಿಗೆ ಕ್ರೀಡಾ ಸೊಬಗಿಗೆ ಸಾಕ್ಷಿಯಾಗುವುದರ ಜೊತೆಗೆ ಇವರುಗಳ ಆಟವನ್ನು ಕಣ್ತುಂಬಿಕೊಳ್ಳುವುತ್ತಿರುವುದು ಬಹಳ ಖುಷಿಯ ಸಂಗತಿ..
ಎರಡು ದಶಕಗಳ ಹಿಂದೆ ಈ ಮೂರು ಬಲಾಡ್ಯರ ಟೆನಿಸ್ ಪ್ರವೇಶ ಆಗುವ ಮೊದಲಿನ ಕಥೆ ಹೀಗಿರಲಿಲ್ಲ. ಅಂಡ್ರೆ ಅಗಸ್ಸಿ ಕೊನೆಯ ಸ್ಲಾಮ್ ಗೆದ್ದದ್ದು 2003ನೇ ಇಸವಿಯಲ್ಲಿ. ಅದೆ ವರ್ಷ ರೊಜರ್ ಪೆಡರರ್ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ವಿಂಬಲ್ಡನ್ ಗೆಲ್ಲುವ ಮೊದಲು ಒಬ್ಬನೆ ಒಬ್ಬ ಪುರುಷ ಆಟಗಾರ ಸಿಂಗಲ್ಸ್ ನಲ್ಲಿ ಹದಿನೈದು ಗ್ರಾನ್ ಸ್ಲಾಮ್ ಮೇಲೆ ಹಕ್ಕು ಚಲಾಯಿಸಿರಲಿಲ್ಲ. ಪೀಟ್ ಸಂಪ್ರಾಸ್ ಗೆದ್ದ ಹದಿನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳೆ ರೆಕಾರ್ಡ್ ಆಗಿತ್ತು.!
ಮಹಿಳೆಯರಲ್ಲಿ ಮಾತ್ರ ಆ ಕಾಲದಲ್ಲಿ ಮಾರ್ಗರೆಟ್ ಕೋರ್ಟ್ 24, ಸ್ಟೆಫಿ ಗ್ರಾಫ್ 22 ಗ್ರಾಂಡ್ ಸ್ಲಾಮ್ ಗೆದ್ದಿದ್ದರು. ಸದ್ಯ ನಮ್ಮ ಕಾಲದ ಯು.ಎಸ್ ಸೆನ್ಸೆಷನ್ ಸೆರೆನಾ ವಿಲಿಯಮ್ಸ್ 23 ಗೆದ್ದು ಚಾಲ್ತಿಯಲ್ಲಿದ್ದಾರೆ..
ನೂರ ನಲವತ್ತೈದು ವರ್ಷಗಳ ಟೆನಿಸ್ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲಿ
ನಿನ್ನೆಯದನ್ನು ಹೊರತುಪಡಿಸಿ ರೊಜರ್ ಪದಾರ್ಪಣೆಯ ನಂತರ ಹತ್ತೊಂಬತ್ತೆ ವರ್ಷಗಳಲ್ಲಿ ಈ ಮೂರು ಅತಿರಥರು ದೋಚಿದ್ದು ಭರ್ತಿ ಅರವತ್ತು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳು..ತಲಾ ಇಪ್ಪತ್ತರಂತೆ. ನಿನ್ನೆಯದು ಅರವತ್ತ ಒಂದನೇಯದು.. ಮತ್ತುಳಿದ ಸಹಸ್ರಕ್ಕು ಮಿಕ್ಕಿದ ಟೆನಿಸ್ ಆಟಗಾರರು ಎತ್ತಿದ್ದು ಕೇವಲ ಹದಿಮೂರು ಗ್ರಾಂಡ್ ಸ್ಲಾಮ್…
ಅಬ್ಬಾಬ್ಬಾ…!
ತ್ರಿಮೂರ್ತಿಗಳ ಪಾರುಪತ್ಯದ ನಡುವೆ ಸೊರಗಿ ಹೋಗಿದ್ದು ಆ್ಯಂಡಿ ರಾಡಿಕ್, ಮರ್ರೆ, ವಾವ್ರಿಂಕ, ಮರಿನ್ ಸಿಲಿಕ್, ಪೊಟ್ರೊ, ಮಡ್ವಡೇವ್ ಅಂತ ಪ್ರತಿಭಾನ್ವಿತರು. ಇಲ್ಲವಾದಲ್ಲಿ ಈ ಆಟಗಾರರ ಜೋಳಿಗೆಯಲ್ಲಿ ಮತ್ತಷ್ಟು ಪ್ರಶಸ್ತಿಗಳು ತುಂಬಿಕ್ಕೊಳ್ಳುತ್ತಿದ್ದವು.
ಹೇಗೆಂದರೆ ಸತತ ಹತ್ತು ಬ್ಯಾಲನ್ ಡೀಓರ್ ಗೆದ್ದ ಮೆಸ್ಸಿ ಮತ್ತು ರೊನಾಲ್ಡೊ ಡೊಮಿನೆನ್ಸ್ ನಡುವೆ ಸಿಕ್ಕಿಬಿದ್ದ ನೇಮರ್, ಬೆಂಜಮಾ,ಇನಿಯಸ್ತ, ಹಜಾರ್ಡ್, ಗ್ರೀಜ್‌ಮನ್ ರೀತಿ..
ಅವರು ಚಾಂಪಿಯನ್ ಆಟಗಾರರೆ ಆದರೆ ಇವರು ಚಾಂಪಿಯನ್ ಆಫ್ ಚಾಂಪಿಯನ್ಸ್…
ಪ್ರದೀಪ್ ಪಡುಕರೆ
ಪ್ರದೀಪ್ ಪಡುಕರೆ