ಭಾರೀ ಕುತೂಹಲ ಹಾಗೂ ಕಾತರದಿಂದ ಕಾಯುತ್ತಿದ್ದ ಜಿ ಎಸ್ ಬಿ ಅಭಿಮಾನಿಗಳಿಗೆ ಅಂತಿಮವಾಗಿ ಉತ್ಸಾಹ ಮತ್ತು ರೋಮಾಂಚಕ ನಿರೀಕ್ಷೆಗಳ ನಂತರ, GPL ಕ್ರಿಕೆಟ್ ಹಬ್ಬಕ್ಕೆ ಹೊಸ ಆರಂಭವನ್ನು ಸ್ವಾಗತಿಸಲು GSB ಪ್ರೀಮಿಯರ್ ಲೀಗ್ (GPL)ನ ಎಂಟನೇ ಆವೃತ್ತಿಯು ಶುರುವಾಗಲು ಕೆಲವೇ ದಿನಗಳು ಬಾಕಿ.
ಎಲ್ಲಾ ಹದಿನಾರು ತಂಡಗಳು ತಮ್ಮ ಶ್ರೇಣಿಯಲ್ಲಿ ಕೆಲವು ಅದ್ಭುತ ಮತ್ತು ಗಮನಾರ್ಹವಾದ ಲೈನ್-ಅಪ್‌ಗಳನ್ನು ಮೈದಾನದಲ್ಲಿ ಮಿಂಚಲು ಮತ್ತು ಫ್ರಾಂಚೈಸ್ ಮಾಲೀಕರು GPL ಕ್ರಿಕೆಟ್‌ನ ಈ ಹೊಸ ಕಾರ್ನೀವಲ್ ಅನ್ನು ಪ್ರಾರಂಭಿಸಲು ಸಮಾನವಾಗಿ ಉತ್ಸುಕರಾಗಿದ್ದಾರೆ. ಜಿಪಿಎಲ್ ಆವೃತ್ತಿಯನ್ನು ಹೊಸ ರೂಪದಲ್ಲಿ ಪರಿಚಿಯಿಸಲು ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಂತೋಷ ಪಡುತ್ತಿದೆ.
ಜಿ ಎಸ್ ಬಿ ಪ್ರೀಮಿಯರ್ ಲೀಗ್ 2024 (GPL 2024) ಫೆಬ್ರವರಿ 23 ರಿಂದ ಆರಂಭಗೊಳ್ಳಲಿದೆ. ಈ ಬಾರಿ ಜಿಪಿಎಲ್ ಹೊಸ ಸ್ವರೂಪವನ್ನುಪರಿಚಯಿಸುತ್ತಿದೆ. ಜಿಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಗಳನ್ನು ಆಡಿಸಲಾಗುತ್ತಿದೆ. GPL ಕ್ರಿಕೆಟ್ ಜರ್ಸಿಯನ್ನು ಗೋವಾದಲ್ಲಿ ಪ್ಯಾರಡೈಸ್ ಕ್ರೂಸ್‌ನಲ್ಲಿ ಪ್ರಾರಂಭಿಸಲಾಯಿತು. ಫೆಬ್ರವರಿ 23 ರಂದು ಸಹ್ಯಾದ್ರಿ ಕಾಲೇಜಿನ ಸುಂದರವಾದ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಫೆಬ್ರವರಿ 25 ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಜಿಪಿಎಲ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕರು ಆರ್ಚ್ ಫಾರ್ಮ ಲ್ಯಾಬ್ಸ್. ಮತ್ತು ಪಂದ್ಯಾವಳಿಯನ್ನು ಪ್ರಸಾರ ಪಾಲುದಾರ ಯೂತ್ ಆಫ್ ಜಿ ಎಸ್ ಬಿ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದೆ.
೧. ಗೌಡ ಸಾರಸ್ವತ ಬ್ರಾಹ್ಮಣರ ತಂಡಗಳ ನಡುವೆ 8 ವರ್ಷಗಳಿಂದ ನಡೆಯುತ್ತಾ ಬಂದಿರುವ ಜಿ ಪಿ ಎಲ್ ಕ್ರಿಕೆಟ್ ಪಂದ್ಯಾಟಗಳ ಅನೇಕ ನೆನಪುಗಳು ನಮ್ಮ ಹೃದಯದಲ್ಲಿ ಇನ್ನೂ ತಾಜಾ ಇವೆ. ನಮ್ಮ ಜಿ ಎಸ್ ಬಿ ಸಮಾಜದ ಯುವಕರು ಇಂದು ಅನೇಕ ದೇಶ ಮತ್ತು ರಾಜ್ಯಗಳಲ್ಲಿ ಹಂಚಿ ಹೋಗಿದ್ದಾರೆ. ಈ ಕ್ರಿಕೆಟ್ ಕ್ರೀಡಾ ಕೂಟದ ನೆಪದಲ್ಲಿ ನಮಗೆ ನಮ್ಮದೇ ಕುಟುಂಬದ ಅನೇಕ ಅಪರಿಚಿತರು ಪರಿಚಿತರಾದರೆಂದರೆ ಅದು ಸುಳ್ಳಲ್ಲ.
ಊರಿಂದ ದೂರ ಇದ್ದ ಅನೇಕರಿಗೆ ಈ ಕ್ರೀಡಾಕೂಟ ತಮ್ಮ ಕುಟುಂಬದವರ ಮತ್ತು ಜನಾಂಗದವರೊಡನೆ ಬಾಂಧವ್ಯ ಬೆಸೆಯಲು ವೇದಿಕೆಯಾಗಿದೆ. ಈ ವಾರ್ಷಿಕ ಕ್ರೀಡಾಕೂಟ ಒಂದು ರೀತಿ ಕೌಟುಂಬಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವೆಂದರೆ ತಪ್ಪಲ್ಲ. ಕ್ರಿಕೆಟ್ ನೆಪದಲ್ಲಿ ಪ್ರತಿ ವರ್ಷ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಬಹಳಷ್ಟು ನಡೆಯುತ್ತದೆ. ಯುವಕರ ಕ್ರಿಕೆಟ್ ಒಂದೆಡೆಯಾದರೆ ಮೈದಾನದಲ್ಲಿ ಮಹಿಳೆಯರು ಕಷ್ಟಸುಖ ಮಾತನಾಡಿಕೊಳ್ಳುತ್ತಾರೆ. ತಮ್ಮ ಅಣ್ಣತಮ್ಮಂದಿರ ಆಟಕ್ಕೆ ಚಪ್ಪಾಳೆ ತಟ್ಟುತ್ತಿರುವ ಸುಂದರಿಯರು ಅಪ್ಪಿ ತಪ್ಪಿ ನಮ್ಮ ಪ್ರಪೋಸಲ್ ಆಂಟಿಯರ ಕಣ್ಣಿಗೆ ಬಿದ್ದರೆ ಅವರು ಮುಂದಿನ ಟೂರ್ನಮೆಂಟ್ ಬರುವಾಗ ಕತ್ತಿನಲ್ಲಿ ಕರಿಮಣಿ ಹಾಕಿ ಹೊಸಾ ತಂಡವೊಂದಕ್ಕೆ ಚಪ್ಪಾಳೆ ತಟ್ಟುತ್ತಿರುತ್ತಾರೆ. ವ್ಯಾಪಾರ, ಕೆಲಸದವರ ಸಮಸ್ಯೆ, ಮಕ್ಕಳ ಓದು ಮತ್ತಿತ್ತರ ವಿಚಾರಗಳ ಬಗ್ಗೆ ಅಂಕಣದ ಹೊರಗೆ ವಿಚಾರ ವಿನಿಮಯ ನಡೆಯುತ್ತದೆ. ಗೆದ್ದಾಗ ಸಂಭ್ರಮ ಪಡುತ್ತಾರೆ, ಸೋತಾಗ ಕುಗ್ಗದೆ ಮರುವರ್ಷ ಮತ್ತಷ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಅಸಲಿಗೆ ಕ್ರಿಕೆಟ್ ಇಲ್ಲಿ ನೆಪಮಾತ್ರ. ಅದರ ಹೊರತಾಗಿಯೂ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ವೇದಿಕೆಯವರು ನಡೆಸುತ್ತಿರುವ ಈ ಕ್ರೀಡಾಕೂಟದಲ್ಲಿ ಬಹಳಷ್ಟು ವಿಚಾರ ಮತ್ತು ವ್ಯವಹಾರಗಳಿಗೆ ವೇದಿಕೆಯಾಗಿದೆ.
೨. ಪ್ರತಿ ವರ್ಷ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಇವರು ಈ ಕ್ರೀಡಾಕೂಟವನ್ನು ಯೂಥ್ ಆಫ್ ಜಿ ಎಸ್ ಬಿ ಸಹಯೋಗದಲ್ಲಿ ನಡೆಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ನಡೆವ ಈ ಕ್ರಿಕಟ್ ಹಬ್ಬವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ ಕೀರ್ತಿ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಗೆ ಸಲ್ಲುತ್ತದೆ. ಆವರ ನೇತೃತ್ವದಲ್ಲಿ ಪಂದ್ಯಾಟವನ್ನು ಬಹಳ ಸೊಗಸಾಗಿ ಆಯೋಜಿಸುತ್ತಾರೆ. ಜಿ ಪಿ ಎಲ್ ಕ್ರಿಕೆಟರ್ಸ್ ಈ ಕ್ರೀಡಾಕೂಟವನ್ನು ಮೊದಲ ಬಾರಿ ಆಯೋಜಿಸಿದಾಗ ( 2017 ) ಕ್ರೀಡಾಕೂಟದ ವೀಕ್ಷಕ ವಿವರಣೆಗೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿ ಸನ್ಮಾನ ಮಾಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ.
೩. ಪ್ರತಿ ವರ್ಷ ಸುಮಾರು ಹದಿನಾರು ತಂಡಗಳು ಭಾಗವಹಿಸುವ ಈ ಕ್ರೀಡಾಕೂಟದಲ್ಲಿ ಮಂಗಳೂರಿನ ಕೊಡಿಯಾಲ್ ಸೂಪರ್ ಕಿಂಗ್ಸ್ ತಂಡ ಇದುವರೆಗೆ ಟೂರ್ನಿ ಗೆಲ್ಲದಿದ್ದರೂ ಅನೇಕ ಉತ್ತಮ ತಂಡಗಳಿಗೆ ನೀರು ಕುಡಿಸಿ ಕ್ವಾಟರ್ ಫೈನಲ್ ತಲುಪುತ್ತಿತ್ತು.
೪. ಈ ಟೂರ್ನಿಗಾಗಿ ಆಟಗಾರರು ಅನೇಕ ಬಾರಿ ರಜೆಯನ್ನು ಹೊಂದಿಸಿಕೊಂಡು ಮುಂಬೈ, ಬೆಂಗಳೂರು ಮತ್ತು ವಿದೇಶದಿಂದ ಬರುತ್ತಾರೆ. ಅನೇಕ ಸಿಹಿ ಮತ್ತು NotSoಸಿಹಿ ನೆನಪುಗಳು ಸಹ್ಯಾದ್ರಿ ಕಾಲೇಜು ಕಾಂಪೌಂಡ್ ಗ್ರೌಂಡಿನಲ್ಲಿದೆ.
೫. ಕೊಡಿಯಾಲ್ ಸೂಪರ್ ಕಿಂಗ್ಸ್ ಜಿಪಿಎಲ್‌ನಲ್ಲಿ ಹೆಚ್ಚು ಮನರಂಜನೆ ನೀಡುವ ತಂಡಗಳಲ್ಲಿ ಒಂದಾಗಿದೆ. ಅವರು ಯಾವುದೇ ಜಿಪಿಎಲ್ ಟ್ರೋಫಿಯನ್ನು ಗೆದ್ದಿಲ್ಲವಾದರೂ ಅವರು ಲಕ್ಷಾಂತರ ಜನರ ಬೆಂಬಲ ಮತ್ತು ಪ್ರೀತಿಯನ್ನು ಹೊಂದಿದ್ದಾರೆ. KSK ಆಡುವ ಅತ್ಯಂತ ಸ್ಪರ್ಧಾತ್ಮಕ ತಂಡಗಳಲ್ಲಿ ಒಂದಾಗಿದೆ. ಜಿಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗಿನ ಪ್ರತಿ ಆವೃತ್ತಿಯಲ್ಲೂ ಆಡಿರುವ ದಾಖಲೆಯನ್ನೂ ಅವರು ಹೊಂದಿದ್ದಾರೆ.
೬.. ಜಿ ಪಿ ಎಲ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ವಯಸ್ಸಿನ ಬೇಧವಿಲ್ಲದೆ ಜನರು ಪಾಲ್ಗೊಳ್ಳುತ್ತಾರೆ.
ಜಿಪಿಎಲ್ ಪಂದ್ಯಾವಳಿಯನ್ನು ಜಯಿಸಲು ಜಿ ಎಸ್ ಬಿ ಕ್ರಿಕೆಟ್ ತಾರೆಗಳು ಹೆಚ್ಚು ಶ್ರಮವಹಿಸುತ್ತಿದ್ದಾರೆ. ದಿಗ್ಗಜ ಆಟಗಾರರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಟಾರ್ ಆಟಗಾರರೆಲ್ಲ ಐಕಾನ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ.. GPL 2024 ತನ್ನ ಹೊಸ ಸೀಸನ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಸತತ ಏಳು ವರ್ಷಗಳಿಂದ ಈ ಕ್ರೀಡಾಕೂಟದಲ್ಲಿ ನಾನು ಭಾಗವಹಿಸುತ್ತಿರುವ ಕಾರಣ ನನ್ನ ಕ್ರಿಕೆಟ್ ಕಾಮೆಂಟ್ರಿ ಮಾಡುವ ಅಭ್ಯಾಸಗಳನ್ನು ಅಷ್ಟು ಸುಲಭವಾಗಿ ಕಳಚಿಕೊಳ್ಳಲು ಆಗುವುದಿಲ್ಲ. ನಾನು ಕ್ರಿಕೆಟ್ ಬಿಡುತ್ತೇನೆಂದರೂ ಜಿಪಿಎಲ್ ಕ್ರಿಕೆಟ್ ನನ್ನನ್ನು ಅಷ್ಟು ಸುಲಭಕ್ಕೆ ಬಿಡುತ್ತಿಲ್ಲ.
ಜಿಪಿಎಲ್ ನಲ್ಲಿ ಭೇಟಿಯಾಗೋಣ.