*ಮ್ಯಾಕ್ಸಿ ಬಿಗ್ ಷೋ!*
Fortune favours the brave.ಅದೃಷ್ಟವು ಧೈರ್ಯಶಾಲಿಗಳಿಗೆ ಸಹಾಯ ಮಾಡುತ್ತದೆ ಎಂಬ ಮಾತಿದೆ. ಅದೇ ನಡೆಯಿತು ನಿನ್ನೆಯ ಪಂದ್ಯದಲ್ಲಿ. ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. 201 ರನ್‌ಗಳ ಅಜೇಯ ಇನ್ನಿಂಗ್ಸ್ ಮ್ಯಾಕ್ಸ್‌ವೆಲ್ ಅವರ ಬ್ಯಾಟ್‌ನಿಂದ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿ, ಮುಂಬರುವ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪ್ರದರ್ಶನವನ್ನು ಪ್ರದರ್ಶಿಸಿದರು. ಆಸ್ಟ್ರೇಲಿಯಾದ ಸ್ಕೋರ್ 91 ರಲ್ಲಿ 7 ವಿಕೆಟ್‌ಗಳು ಬಿದ್ದಾಗ ಮ್ಯಾಕ್ಸ್‌ವೆಲ್ ಮತ್ತು ಕಮಿನ್ಸ್ ಭರವಸೆಯನ್ನು ಬಿಟ್ಟುಕೊಡದೆ ಆಟವಾಡಿದರು. 76 ಎಸೆತಗಳಲ್ಲಿ ಶತಕ ಸಿಡಿಸಿದ ಮ್ಯಾಕ್ಸ್ ವೆಲ್ ಆಮೇಲೆ ಇನ್ನಷ್ಟು ವೇಗವಾಗಿ ಬ್ಯಾಟಿಂಗ್ ಮಾಡಿ ಅಬ್ಬರ ಸೃಷ್ಟಿಸಿದರು.
ಮ್ಯಾಕ್ಸ್‌ವೆಲ್ ಮತ್ತು ಕಮಿನ್ಸ್ ನಡುವೆ 200ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಿತ್ತು. ಮ್ಯಾಕ್ಸ್ ವೆಲ್ 128 ಎಸೆತಗಳನ್ನು ಎದುರಿಸಿ 201 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟ್‌ನಿಂದ 21 ಬೌಂಡರಿ ಮತ್ತು 10 ಸಿಕ್ಸರ್‌ಗಳು ಬಂದವು. ಗ್ಲೆನ್ ಮ್ಯಾಕ್ಸ್‌ವೆಲ್ ಪ್ಯಾಟ್ ಕಮ್ಮಿನ್ಸ್ ಜೊತೆಗೂಡಿ 8ನೇ ವಿಕೆಟ್‌ಗೆ 202 ರನ್‌ಗಳನ್ನು ಸೇರಿಸುವ ಮೂಲಕ ಆಸ್ಟ್ರೇಲಿಯಾವನ್ನು ನಂಬಲಾಗದ ಗೆಲುವಿಗೆ ಕಾರಣರಾದರು.ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧ 19 ಎಸೆತಗಳು ಬಾಕಿ ಇರುವಂತೆಯೇ ಏಕಾಂಗಿಯಾಗಿ ಆಸ್ಟ್ರೇಲಿಯಾವನ್ನು ಗೆಲುವಿನತ್ತ ಕೊಂಡೊಯ್ದು , ಸಿಕ್ಸರ್ ಮೂಲಕ ವಿಶ್ವಕಪ್ 2023 ರ ಸೆಮಿ-ಫೈನಲ್‌ಗೆ ಕೊಂಡೊಯ್ದರು .
ಮ್ಯಾಕ್ಸ್‌ವೆಲ್ ಅವರ ನಾಕ್ ಅನ್ನು ‘ದಿ ಬೆಸ್ಟ್’ ODI ನಾಕ್ ಎಂದು ರೇಟ್ ಮಾಡಲಾಗುತ್ತದೆ. ಏಕೆಂದರೆ ಅವರು ಗಳಿಸಿದ ರನ್‌ಗಳು ಮಾತ್ರವಲ್ಲದೆ ಅದರ ಕ್ವಾಲಿಟಿ ಗಾಗಿ. ಮ್ಯಾಕ್ಸ್‌ವೆಲ್ ಅವರ ಗಮನಾರ್ಹ ನಾಕ್ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ. ಮ್ಯಾಕ್ಸ್‌ವೆಲ್ ತನ್ನ ಪಾದಗಳನ್ನು ಒಂದು ಇಂಚು ಕೂಡ ಚಲಿಸದೆ ವಾಂಖೆಡೆಯ ಸುತ್ತಲೂ ಚೆಂಡನ್ನು ಹೊಡೆಯುವುದನ್ನು ಅಭಿಮಾನಿಗಳು ಮತ್ತು ಪ್ರತಿಯೊಬ್ಬರೂ ಎಂಜಾಯ್ ಮಾಡಿದರು.ಬ್ಯಾಟಿಂಗ್‌ನಲ್ಲಿ ಫುಟ್‌ವರ್ಕ್ ಮುಖ್ಯ ಎಂದು ಹೇಳುತ್ತಾರೆ. But Maxi proved it wrong today.
ಮ್ಯಾಕ್ಸ್‌ವೆಲ್ ಕ್ರೀಸ್‌ನಲ್ಲಿ ಇದ್ದಾಗ ಕಾಲು ಸೆಳೆತದಿಂದ ದೈಹಿಕ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆದರೆ ಅವರು ಅದನ್ನು ಮೆಟ್ಟಿ ನಿಂತು ಜಯಿಸಿದರು. ಇದು ಅವರ ತಂಡದ ಗೆಲುವಿನ ಉದ್ದೇಶಕ್ಕಾಗಿ ಅವರ ನಿರ್ಣಯ, ಛಲ, ತಾಕತ್ತು ಮತ್ತು ಕಮಿಟ್ ಮೆಂಟನ್ನು ತೋರಿಸಿದೆ. ಏಕಾಂಗಿಯಾಗಿ ಆಫ್ಘನ್ ಬೌಲರ್‌ಗಳ ದಾಳಿಯನ್ನು ಎದುರಿಸಿದ ಅವರ ಅದ್ಭುತ ಶ್ರೇಣಿಯ ಹೊಡೆತಗಳ ಪ್ರದರ್ಶನ, ಅವರ ಪವರ್ ಹಿಟ್ಟಿಂಗ್ ಮಾಸ್ಟರ್ ಕ್ಲಾಸ್ ಆಗಿತ್ತು.ಮ್ಯಾಕ್ಸ್‌ವೆಲ್ ಒಬ್ಬನೇ ಯೋಧನಾಗಿ ಹೊರಹೊಮ್ಮಿದರು. ಅವರ ಇನ್ನಿಂಗ್ಸ್ ಅವರ ಅಗಾಧ ಪ್ರತಿಭೆಯ ಜೊತೆಗೆ ಒತ್ತಡದಲ್ಲಿ ಪ್ರದರ್ಶನ ನೀಡುವ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ