ಸಮಾಜಸೇವೆಗಾಗಿ(ಸಾಮಾಜಿಕ-ಶೈಕ್ಷಣಿಕ-ಕ್ರೀಡೆ)ತನ್ನ ಜೀವನವನ್ನೇ ಮುಡಿಪಾಗಿಟ್ಟ ಕೋಲಾರ ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯ ಶ್ರೀ ಗಾಯತ್ರಿ ಮುತ್ತಪ್ಪ ಇವರ ಸಮಾಜಸೇವೆಯನ್ನು ಗುರುತಿಸಿ ಜನ್ಮಭೂಮಿ ಫೌಂಡೇಶನ್(ರಿ) ಬೆಂಗಳೂರು ವತಿಯಿಂದ ಕೊಡಲ್ಪಡುವ ಪ್ರತಿಷ್ಠಿತ ರಾಷ್ಟ್ರಮಟ್ಟದ “ಭಾರತ ಗೌರವ” (Pride Of India) ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಂದು ಬೆಳಿಗ್ಗೆ ಗೋವಾದ ವಾಸ್ಕೋದಲ್ಲಿ ನಡೆದ ರಾಷ್ಟ್ರೀಯ ಕಲಾ ಉತ್ಸವದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಹಿರಿಯ ಬಹುಭಾಷಾ ಚಲನಚಿತ್ರ ನಟಿ ಶ್ರೀ ಪ್ರೇಮಾ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ
ಡಾ||ಕುಂ.ವೀರಭದ್ರಪ್ಪ,ಅಖಿಲ ಗೋವಾ ಕನ್ನಡಿಗರ ಮಹಾಸಂಘ(ರಿ) ಗೋವಾ ಗೌರವಾಧ್ಯಕ್ಷರಾದ ಶ್ರೀ.ಸಿದ್ದಣ್ಣ.ಎಸ್.ಮೇಟಿ,ಬೆಂ ಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ||ಸತೀಶ್ ಕುಮಾರ್.ಎಸ್.ಹೊಸಮನಿ,ಬೆಂಗಳೂರು C.C.B,ACP ಶ್ರೀ.ಹೆಚ್.ಎಸ್.ಪರಮೇಶ್ವರ್,ಮುಂಗಾ ರು ಮಳೆ-2 ನಿರ್ಮಾಪಕರು ಬೆಂಗಳೂರಿನ ಶ್ರೀ.ಜಿ.ಗಂಗಾಧರ,
ಅಂತರಾಷ್ಟ್ರೀಯ ಖ್ಯಾತಿಯ ಗಾಯಕಿ ಶ್ರೀಮತಿ.ಕಲಾವತಿ ದಯಾನಂದ್ ಉಡುಪಿ,ಗೋವಾ ರಾಜ್ಯ ಕನ್ನಡ ದಿನಪತ್ರಿಕೆಯ ಪತ್ರಕರ್ತರಾದ ಶ್ರೀ.ಪ್ರಕಾಶ್ ಕೃಷ್ಣ ಭಟ್,ಗೋವಾ ಶಿಲ್ಪಾ ಲೋಕ ವರ್ಣಾದ ಶ್ರೀ.ಪುಟ್ಟಸ್ವಾಮಿ ಗುಡಿಗಾರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.