ಓಮನ್ ನಲ್ಲಿ ವಾಸವಿರುವ ಕರಾವಳಿಯ ಕ್ರಿಕೆಟಿಗರ ತಂಡ ಫೋರ್ ಅ್ಯಾಂಡ್ ಸಿಕ್ಸ್ ಗ್ರೂಪ್ಸ್ ಇದೇ ತಿಂಗಳ ಫೆಬ್ರವರಿ 28ರಂದು ಓಮಾನ್ ದೇಶದ ಅಲ್ ಅನಸಾಬ್ ನಲ್ಲಿ ಕರ್ನಾಟಕ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಏರ್ಪಡಿಸಿದೆ.
ಓಮಾನ್ ನಲ್ಲಿ ವಾಸಿಸುವ ಕನ್ನಡಿಗರು ಮಾತ್ರ ಈ ಪಂದ್ಯ ಕೂಟದಲ್ಲಿ ಭಾಗವಹಿಸಲು ಅವಕಾಶವ ಕಲ್ಪಿಸಲಾಗಿದೆ… ಬಲಿಷ್ಟ ಎಂಟು ತಂಡಗಳು ತಮ್ಮ ಬಲಾಬಲವನ್ನು ಪರೀಕ್ಷಿಸಲು ಉತ್ಸುಕರಾಗಿದ್ದಾರೆ.
8 ಫ್ರಾಂಚೈಸಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು,
ಕಟೀಲ್ ಫ್ರೆಂಡ್ಸ್, ಸಮೀಕ್ಷ್ 11,ಹೆಚ್.ಸಿ.ಸಿ ಹಾಗೂ ಆರ್.ಸಿ,
ಎನ್.ಸಿ.ಸಿ ಮಸ್ಕತ್,ಬ್ಲೂಸ್ಟಾರ್ ಉಜಿರೆ,ಓಂಕಾರ್,ಎಮ್.ಎಫ್.ಎಸ್ ಸೋಹಾರ್ ಈ ಎಂಟು ತಂಡಗಳನ್ನು
ವೀರ ವನಿತೆಯರಾದ ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಹೆಸರಿನಲ್ಲಿ 2 ಗ್ರೂಪ್ ಗಳಾಗಿ ವಿಂಗಡಿಸಲಾಗಿದೆ
Four & Six ಸ್ನೇಹಿತರ ಮುಂದಾಳತ್ವದಲ್ಲಿ ಈ ಪಂದ್ಯಾಟ ನಡೆಯಲಿದ್ದು ಅತಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲಿದೆ.
ಪಂದ್ಯಾವಳಿಯ ಆಯೋಜಕ ದಯಾನಂದ ರಾವ್ ರು ಮಾತನಾಡಿ ಸಮಾಜದ ಕೆಲವು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಈ ಪಂದ್ಯಕೂಟವನ್ನು ಅಯೋಜಿಸಲಾಗಿದೆ ಎಂದು ತಿಳಿಸಿದರು.