ಬೆಂಗಳೂರು-ಪೀಣ್ಯದಲ್ಲಿ ಫ್ರೆಂಡ್ಸ್ ಬೆಂಗಳೂರು ಆಶ್ರಯದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ಸೂಪರ್ ಫ್ಯಾಶನ್ ಶ್ರೀಲಂಕಾ ಪಡೆ ಉದ್ಯಾನ ನಗರಿ ಬೆಂಗಳೂರಿಗೆ ಮೊದಲ ಬಾರಿಗೆ ಕಾಲಿಟ್ಟಿದೆ.
ಸಾಫ್ಟ್ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ್ದು ಫ್ರೆಂಡ್ಸ್ ಬೆಂಗಳೂರು ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಇಂದು ಸಂಜೆ 7 ಗಂಟೆಗೆ ಸರಿಯಾಗಿ ಪ್ರದರ್ಶನ ಪಂದ್ಯ ನಡೆಯಲಿದ್ದು,ಸಾಗರ್ ಭಂಡಾರಿ ಸಾರಥ್ಯದ ಫ್ರೆಂಡ್ಸ್ ಬೆಂಗಳೂರು ತಂಡ ಬಲಿಷ್ಠ ಶ್ರೀಲಂಕಾ ಪಡೆಯನ್ನು ಎದುರಿಸಲು ಸನ್ನದ್ಧವಾಗಿದೆ.
ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ಬರೆದ ಫ್ರೆಂಡ್ಸ್ ಬೆಂಗಳೂರು ಕಪ್-2023 ಪಂದ್ಯಾಟದಲ್ಲಿ ವಿವಿಧ ರಾಜ್ಯಗಳ 8 ತಂಡಗಳು,ಬೆಂಗಳೂರಿನ 16 ತಂಡಗಳು,ಕರ್ನಾಟಕ ರಾಜ್ಯದ ಪ್ರತಿಷ್ಠಿತ 8 ತಂಡಗಳು,ವಿವಿಧ ಜಿಲ್ಲೆಯ ತಂಡಗಳು ಸೇರಿದಂತೆ ಒಟ್ಟು 49 ತಂಡಗಳು ಭಾಗವಹಿಸುತ್ತಿದ್ದು,ಆಯೋಜಕರಾದ ಫ್ರೆಂಡ್ಸ್ ಬೆಂಗಳೂರು ತಂಡ ಸೂಪರ್ ಫ್ಯಾಶನ್ ಶ್ರೀಲಂಕಾ ತಂಡದ ವಿರುದ್ಧ ಪ್ರದರ್ಶನ ಪಂದ್ಯವನ್ನಷ್ಟೇ ಆಡಲಿದ್ದು ಕ್ರೀಡಾ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಲಿದೆ…