ಬೆಂಗಳೂರು-ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ “ಫ್ರೆಂಡ್ಸ್ ಬೆಂಗಳೂರು ಕಪ್-2023” ಪಂದ್ಯಾಟದ ಕ್ವಾರ್ಟರ್ ಫೈನಲ್ ಹಂತಕ್ಕೆ ಬಲಿಷ್ಠ ತಂಡಗಳು ಪ್ರವೇಶಿಸಿದೆ.
ಶನಿವಾರ ರಾತ್ರಿ ಅನ್ಪ್ರೆಡಿಕ್ಟೇಬಲ್ ತಂಡವನ್ನು ಮಣಿಸಿದ ನ್ಯಾಶ್ ಬೆಂಗಳೂರು ಇಂದು ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಡ್ರೀಮ್ ಇಲೆವೆನ್ ಚೆನ್ನೈ ತಂಡವನ್ನು ಎದುರಿಸಲಿದೆ.
ಕರಾವಳಿಯ ಪ್ರತಿಭಾನ್ವಿತ ಯುವ ಆಟಗಾರರ ಸಮತೋಲಿತ ರಿಯಲ್ ಫೈಟರ್ಸ್ ತಂಡ ದ್ವಿತೀಯ ಕ್ವಾರ್ಟರ್ ಫೈನಲ್ ನಲ್ಲಿ ಕಾಮಾಕ್ಷಿ ರಾಹುಲ್ ಇಲೆವೆನ್ ತಂಡವನ್ನು ಎದುರಿಸಲಿದೆ.
ಶನಿವಾರ ರಾತ್ರಿ ಕುಮ್ಮಳ್ಳಿ ಪಠಾಣ್ ಇಲೆವೆನ್ ಛತ್ತೀಸ್ಗಢ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ರಂಗ ಇಲೆವೆನ್ ಮೂರನೇ ಕ್ವಾರ್ಟರ್ ಫೈನಲ್ ನಲ್ಲಿ ಸಿಡಿಲಬ್ಬರದ ಹೊಡೆತಗಳ ಬ್ಯಾಟರ್ ಪಡೆ ಹೊಂದಿದ ಮೈಟಿ ಬೆಂಗಳೂರನ್ನು ಎದುರಿಸಲಿದೆ.
ಶನಿವಾರ ಜಾನ್ಸನ್ ಕುಂದಾಪುರ ತಂಡದ ವಿರುದ್ಧ ಎರಡೆರಡು ಸೂಪರ್ ಓವರ್ ಬಳಿಕ ಗೆದ್ದ ಜೈ ಕರ್ನಾಟಕ ಬೆಂಗಳೂರು ಇಂದು ನಾಲ್ಕನೇ ಕ್ವಾರ್ಟರ್ ಫೈನಲ್ ನಲ್ಲಿ,ಮೊನಚಾದ ಬೌಲಿಂಗ್ ಮತ್ತು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಸೂಪರ್ ಫ್ಯಾಷನ್ ಶ್ರೀಲಂಕಾ ವನ್ನು ಎದುರಿಸಲಿದೆ.
ಫ್ರೆಂಡ್ಸ್ ಬೆಂಗಳೂರು ಕಪ್ ಮೊದಲ ದಿನದಿಂದ ಇಂದಿನವರೆಗೂ ಎಲ್ಲಾ 49 ತಂಡಗಳು ಸಮಯಕ್ಕೆ ಸರಿಯಾಗಿ ತಮ್ಮ ಪಂದ್ಯಗಳನ್ನಾಡಿದ್ದು,ಅತ್ಯಂತ ಶಿಸ್ತುಬದ್ಧವಾಗಿ ಪಂದ್ಯಾಟ ಸಾಗಿದ್ದು,ಎಲ್ಲಾ ತಂಡಗಳ ಸಹಕಾರಕ್ಕೆ ಟೂರ್ನಮೆಂಟ್ ನ ಪ್ರಮುಖ ನ ರೂವಾರಿ ರೇಣು ಗೌಡರು ಕೃತಜ್ಞತೆ ಸಲ್ಲಿಸಿದ್ದಾರೆ.
ಮಧ್ಯಾಹ್ನದ ಬಿರು ಬಿಸಿಲು,ರಾತ್ರಿಯ ಚುಮು ಚುಮು ಚಳಿಯನ್ನು ಲೆಕ್ಕಿಸಿದೆ,ಸಹಸ್ರಾರು ಪ್ರೇಕ್ಷಕರು ದಿನದ ಮೊದಲ ಪಂದ್ಯದಿಂದ ಕೊನೆಯ ಕ್ಷಣದ ವರೆಗೂ ಕದಲದೇ ಪಂದ್ಯಾಟ ವೀಕ್ಷಿಸುತ್ತಿದ್ದಾರೆ.ಎಸ್.ಆರ್.ಬಿ ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಮೂಲಕ ಲಕ್ಷಾಂತರ ಮಂದಿ ಮನೆಯಲ್ಲೇ ಕುಳಿತು ಪಂದ್ಯಾಟದ ಸವಿಯನ್ನು ಸವಿಯುತ್ತಿದ್ದಾರೆ.