80 ರ ದಶಕದ ಟೆನ್ನಿಸ್ ಬಾಲ್ ಕ್ರಿಕೆಟ್ ನ ಹಿರಿಯ ತಂಡ“ಚಮಕ್ ಬೆಂಗಳೂರು” ಪರವಾಗಿ ಆಡಿದ್ದ ಹಿರಿಯ ಆಟಗಾರರಾದ ಮೋಹನ್ ಸಿಂಗ್ ರವರು ತೀವೃ ಮೆದುಳಿನ ರಕ್ತಸ್ರಾವದಿಂದ ಇಂದು ಬೆಳಿಗ್ಗೆ 1.30 ಗಂಟೆಗೆ ವಿಧಿವಶರಾದರು.
ಚಮಕ್ ತಂಡದ ಪರವಾಗಿ ಹಲವಾರು ಪಂದ್ಯಗಳನ್ನಾಡಿದ್ದ ಮೋಹನ್ ಸಿಂಗ್ ಮಧ್ಯಮ ಕ್ರಮಾಂಕದ ನಂಬಿಕಸ್ಥ ದಾಂಡಿಗ ಹಾಗೂ ಕವರ್ಸ್ ವಿಭಾಗದ ಶ್ರೇಷ್ಠ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಮಹತ್ವದ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದು, ಮೈದಾನದಲ್ಲಿ ಅಜರುದ್ದೀನ್ ರಂತೆ ಚುರುಕಿನ ಕ್ಷೇತ್ರರಕ್ಷಣೆಗೆ ಹೆಸರುವಾಸಿಯಾಗಿದ್ದರು.
ಅಹ್ಮದಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕರ್ನಾಟಕದ ಪರವಾಗಿ ಆಡಿ,
ರಾಜ್ಯದ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಲೆದರ್ ಬಾಲ್ ನಲ್ಲಿ
ಪ್ರಸಿದ್ಧ BUCC ಕ್ಲಬ್ ನ ಪರವಾಗಿ ಮೊದಲನೇ ಡಿವಿಜನ್ ಲೀಗ್ ಪಂದ್ಯವನ್ನಾಡಿದ್ದರು.
ಸುಮಾರು 53 ವರ್ಷ ಪ್ರಾಯದ ಮೋಹನ್ ಸಿಂಗ್ ರವರು ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಆಪ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.