ಬಾರ್ಬಡೊಸ್: ಒಂದುಕಾಲದ ಬಲಿಷ್ಠ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್‌ನ ಭಯಾನಕ ಹಾಗೂ ಘಾತಕ ವೇಗಿಗಳ ಕಾಲಘಟ್ಟದಲ್ಲಿ ಅಮೋಘ ಕೀಪಿಂಗ್ ನಡೆಸಿ ವಿಶ್ವಖ್ಯಾತಿ ಪಡೆದಂತಹ ಶ್ರೇಷ್ಠ ಕ್ರಿಕೆಟ್ ಆಟಗಾರ ಡೇವಿಡ್ ಮರ್ರೆ (72) ಇನ್ನೂ ನೆನಪು ಮಾತ್ರ.
ಇವರ ನಿಧನವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಒಂದು ದಿನ ವಿಳಂಬವಾಗಿ ಘೋಷಿಸಿದೆ.
ಡೇವಿಡ್ ಆ್ಯಂಟನಿ ಮರ್ರೆ ವೆಸ್ಟ್ ಇಂಡೀಸ್‌ನ ಖ್ಯಾತ ತ್ರಿವಳಿ “ಡಬ್ಲ್ಯು’ ಗಳಲ್ಲಿ ಒಬ್ಬರಾದ ಎವರ್ಟನ್ ವೀಕ್ಸ್ ಅವರ ಪುತ್ರ. 1973ರ ಇಂಗ್ಲೆಂಡ್ ಪ್ರವಾಸದ ವೇಳೆ ವಿಂಡೀಸ್ ತಂಡಕ್ಕೆ ಆಯ್ಕೆಯಾದರು. ಆದರೆ ಟೆಸ್ಟ್ ಪಾದಾರ್ಪಣೆ ಮಾಡಿದ್ದು 1978 ರಲ್ಲಿ ಅಂದು ಪ್ರವಾಸಿ ಆಸ್ಟ್ರೇಲಿಯಾ ತಂಡದ ಆಗಮನದ ವೇಳೆ. 19 ಟೆಸ್ಟ್, 10 ಏಕದಿನ ಪಂದ್ಯಗಳನ್ನು ಆಡಿದ್ದ ಮರ್ರೆ
ಮಾರ್ಷಲ್, ಹೋಲ್ಡಿಂಗ್ ಮೊದ ಲಾದ ವಿಂಡೀಸ್ ಬಲಿಷ್ಠ ವೇಗಿಗಳ ಎಸೆತಗಳನ್ನು ಯಾವುದೇ ಅಳುಕಿಲ್ಲದೆ ನಿರಾಯಾಸವಾಗಿ ಗ್ಲೌಸ್‌ಗೆ ಸೇರಿಸಿಕೊಳ್ಳುತ್ತಿದ್ದ ಹೆಗ್ಗಳಿಕೆ ಮರ್ರೆ ಅವರದಾಗಿತ್ತು.
ಆದರೆ ಹದಿಮೂರನೇ ವಯಸ್ಸಿನಲ್ಲೇ ಅಂಟಿಕೊಂಡ ಮರಿಜುವಾನಾ ಚಟ, 1983ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಂಡುಕೋರನಾಗಿ ತೆರಳಲು ದೊಡ್ಡ ಮೊತ್ತ ಪಡೆದದ್ದು ಮರ್ರೆ ಅವರ ಕ್ರಿಕೆಟ್ ಬದುಕನ್ನು ಬಹಳ ಬೇಗ ಮೊಟಕುಗೊಳಿಸಿತು. ಇನ್ನಷ್ಟು ಎತ್ತರಕ್ಕೆ ಬೆಳೆಯ ಬೇಕಾಗಿದ್ದ ಮರ್ರೆ ತಮ್ಮ ಕೈಯಾರೆ ತಮ್ಮ ಉತ್ತಂಗ ಕ್ರಿಕೆಟ್ ಬದುಕನ್ನು ನಾಶಮಾಡಿಕೊಂಡಿದ್ದು ಮಾತ್ರ ದುರಂತವೆ ಹೌದು
ಇಂದು ಹೆಸರಾಂತ ಹಿರಿಯ ಕ್ರಿಕೆಟಿಗ ಮರ್ರೆ ತಮ್ಮ ಎಪ್ಪತ್ತೆರಡನೆ ವಯಸ್ಸಿನಲ್ಲಿ ತಮ್ಮ ಬದುಕಿಗೆ ವಿಧಾಯ ಹೇಳಿ ಇಹಲೋಕ ತೆಜಿಸಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ