ಪಡುಕೋಣೆಯ *ಗ್ರೆಗರಿ ಪ್ರೌಢಶಾಲಾ* ಮೈದಾನ ನಾಳೆಯಿಂದ ಮೂರು ದಿನ *(ಮಾರ್ಚ್ 24 ಶುಕ್ರವಾರ – 26 ಭಾನುವಾರ*)ಒಂದು ಅಪರೂಪದ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ.
ಈ ಹಿಂದೆ ಹತ್ತಾರು ಸಮಾಜಮುಖಿ ಕ್ರೀಡಾಕೂಟಗಳನ್ನು ನಡೆಸಿಕೊಂಡು ಬಂದಿರುವಂತಹ ಈ ಭಾಗದ ಹೆಮ್ಮೆಯ ಸಂಸ್ಥೆಯಾದ *ಪಡುಕೋಣೆ ಎಜುಕೇಶನ್ & ಸ್ಪೋರ್ಟ್ಸ್ ಪ್ರಮೋಟರ್ಸ್* ಇವರು ಈ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸುತ್ತಿದ್ದಾರೆ…*ದಿ.ಪ್ರಭು ಅರ್ಥರ್ ಪಿರೇರಾ* ಸ್ಮರಣಾರ್ಥ ಮೊದಲು ನಡೆಯುವ ವಾಲಿಬಾಲ್ ಟೂರ್ನಮೆಂಟಿನಲ್ಲಿ
*ಅಶ್ವಲ್ ರೈ(ಸೀನಿಯರ್ ಇಂಡಿಯಾ)*
*ಪಂಕಜ್ ಶರ್ಮಾ (ಸೀನಿಯರ್ ಇಂಡಿಯಾ)*
*ರತೀಶ್ (ಸೀನಿಯರ್ ಇಂಡಿಯಾ)*
*ಕಾರ್ತಿಕ್ ಮಧು (ಸೀನಿಯರ್ ಇಂಡಿಯಾ)*
*ಅನೂಪ್ ಡಿ ಕೋಷ್ಟಾ (ಸೀನಿಯರ್ ಇಂಡಿಯಾ)*
*ಮನೋಜ್ (ಸೀನಿಯರ್ ಇಂಡಿಯಾ)*
*ನಿಖಿಲ್ ಗೌಡ (ಇಂಡಿಯನ್ ಆರ್ಮಿ)*
*ರೈಸನ್ ರೆಬ್ಬೆಲ್ಲೋ (ಕರ್ನಾಟಕ ಸ್ಟೇಟ್)*
*ಪ್ರಮೋದ್ ಹೆಗ್ಡೆ ಚಿನ್ನ*
*ನವೀನ್ ಕಾಂಚನ್*
*ಹರಿಪ್ರಸಾದ್ ಚೋಟು (ಇಂಡಿಯನ್ ಜೂನಿಯರ್)*
*ರಾಕಿ*
ಮುಂತಾದ ರಾಜ್ಯ,ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರು ಭಾಗವಹಿಸುತ್ತಿರುವುದು ನಮ್ಮೂರಿನ ಕ್ರೀಡಾಭಿಮಾನಿಗಳು ಹೆಮ್ಮೆ ಪಡುವಂತಹ ವಿಚಾರ…
ಜೊತೆಗೆ ಗತಕಾಲ ವೈಭವ ಸಾರುವ *ದಿ.ಸುರೇಶ್ ಡಿ ಪಡುಕೋಣೆ* ಇವರ ಕನಸಿನ ಕೂಸಾದ *ಅಪ್ಪೋಲೋ* ಮಾದರಿಯ ಕ್ರಿಕೆಟ್ ಪಂದ್ಯಕೂಟದಲ್ಲಿ ಕೂಡ *ರಾಜ್ಯ,ರಾಷ್ಟ್ರ,ಮಟ್ಟದ* ಆಟಗಾರರಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಿದ್ದು ಇವರುಗಳು ಕ್ರೀಡಾಭಿಮಾನಿಗಳಿಗೆ ರಸಾದೌತಣ ಉಣಬಡಿಸುವುದರಲ್ಲಿ ಅನುಮಾನವಿಲ್ಲ…!
ನಮ್ಮೂರ ಮಹಾನ್ ಕ್ರೀಡಾ ಪ್ರೋತ್ಸಾಹಕರಾಗಿದ್ದ *ದಿ.ಸುರೇಶ್ ಡಿ ಪಡುಕೋಣೆ ಹಾಗೂ ದಿ.ಪ್ರಭು ಅರ್ಥರ್ ಪಿರೇರಾ* ಇವರ ಸ್ಮರಣಾರ್ಥ ನಡೆಯುವ ಈ ಮೂರು ದಿನದ ಕ್ರೀಡಾ ಮಹೋತ್ಸವ ಕಣ್ತುಂಬಿಕೊಳ್ಳಲು ನೀವು ಬರಲೇಬೇಕು….ನಿಮ್ಮವರನ್ನು ಕರೆತರಲೇಬೇಕು…ಯಾಕೆಂದರೆ ಮತ್ತೆ ಮತ್ತೆ ಇಂತಹ ಅದ್ಬುತ ಆಯೋಜನೆಯ ಕ್ರೀಡಾಕೂಟ ಕಾಣಸಿಗದು…!
*ಮರೆಯದಿರಿ ಮಾರ್ಚ್ 24 ಶುಕ್ರವಾರ ಸಂಜೆ 7 ರಿಂದ*
*ಸ್ಥಳ – ಗ್ರೆಗರಿ ಪ್ರೌಢಶಾಲಾ ಮೈದಾನ ಪಡುಕೋಣೆ*
*-ಎಮ್ ಪಿ ಬೆಳ್ಳಾಡಿ*