90 ರ ದಶಕದಲ್ಲಿ ಸಿನಿಮಾ ಪ್ರಿಯರನ್ನು ಹುಚ್ಚೆಬ್ಬಿಸಿದ್ದ,ಸ್ಪುರದ್ರೂಪಿ ನಟ,ಶ್ರುತಿ,ಬೆಳ್ಳಿಕಾಲುಂಗುರದಂತಹ ಹಿಟ್ ಫಿಲ್ಮ್ ಗಳನ್ನು ನೀಡಿ ಮಿಂಚಿ ಮರೆಯಾದ ದಿ.ಸುನಿಲ್ ಶೆಟ್ಟಿ ಸ್ಮರಣಾರ್ಥ ,40 ಗಜಗಳ ಹೊನಲು ಬೆಳಕಿನ “ಸುನಿಲ್ ಟ್ರೋಫಿ-2021” ಪಂದ್ಯಾಕೂಟ ಆಯೋಜಿಸಲಾಗಿದೆ.
ಹಿರಿಯ ಸಂಸ್ಥೆಗಳಾದ ಸ್ನೇಹ ಸ್ಪೋರ್ಟ್ಸ್ ಕ್ಲಬ್ ಬಾರ್ಕೂರು ಹಾಗೂ ಸಂತೆಗುಡ್ಡೆ ಕ್ರಿಕೆಟರ್ಸ್ ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ಮಾರ್ಚ್ 20 ಮತ್ತು 21ರಂದು ಸಂತೆಗುಡ್ಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 35,555 ರೂ ನಗದು,ದ್ವಿತೀಯ ಸ್ಥಾನಿ 25,555 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9742097507,6364336329, 9880787709 ಮತ್ತು 9108240486 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.