ಬೆಂಗಳೂರು-ಇತ್ತೀಚೆಗಷ್ಟೇ ಕುಂದಾಪುರದ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿದ ರಾಜ್ಯದ ಯಶಸ್ವಿ ತಂಡಗಳಲ್ಲೊಂದಾದಚಾಲೆಂಜ್ ಕ್ರಿಕೆಟ್ ಕ್ಲಬ್ ಕುಂದಾಪುರ ಇವರ ವತಿಯಿಂದ ಕ್ರೀಡಾ ಪ್ರೋತ್ಸಾಹಕರು,ಕ್ರೀಡಾಪಟು ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀಯುತ ಪಿ.ಎನ್.ಕೃಷ್ಣಮೂರ್ತಿ ಯವರನ್ನು ಜಾಲಹಳ್ಳಿ ಕೃಷ್ಣಚಂದ್ರ ಕನ್ವೆನ್ಷನ್ ಸೆಂಟರ್ ನ ಪಿ.ಎನ್.ಕೆ ಇವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ರಾಷ್ಟ್ರೀಯ ಮಾನವ ಹಕ್ಕು ಮತ್ತು ಭೃಷ್ಟಾಚಾರ ನಿರ್ಮೂಲನ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಡಾ.ಆರ್.ಪ್ರಸನ್ನ ಕುಮಾರ್,ಚಾಲೆಂಜ್ ಟ್ರೋಫಿ ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷರಾದ ಪ್ರವೀಣ್ ಗಡಿಯಾರ್,ಕಾರ್ಯದರ್ಶಿ ಕೆ.ಪಿ.ಸತೀಶ್,ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಡಿಸೆಂಬರ್ ನಲ್ಲಿ ನಡೆದ ಚಾಲೆಂಜ್ ಟ್ರೋಫಿ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಪಿ.ಎನ್.ಕೃಷ್ಣಮೂರ್ತಿಯವರು ತುರ್ತು ಸಭೆಯ ಕಾರಣದಿಂದ ಗೈರು ಹಾಜರಾಗಿದ್ದರು.