ಉಡುಪಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸ್ಪೋರ್ಟ್ಸ್ ಕನ್ನಡ ಹಾಗೂ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ (ರಿ) ವತಿಯಿಂದ ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಪ್ರತಿಮ ಚಿತ್ರಕಲಾವಿದ ಗಣೇಶ್ ಪಂಜಿಮಾರು,ಸಹೋದರಿ ಕಸೂತಿ ರಚನೆಕಾರ್ತಿಸುಮಾ ಪಂಜಿಮಾರು ಹಾಗೂ ಉಡುಪಿಯ ಪ್ರಸಿದ್ಧ ಪತ್ತೇದಾರಿ ಕಾದಂಬರಿ ಬರಹಗಾರ್ತಿ ಸೌಮ್ಯ ಪುತ್ರನ್ ಇವರನ್ನು ಗೌರವಿಸಲಾಯಿತು.
ಈ ಸಂದರ್ಭ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಅಧ್ಯಕ್ಷರು,ಪತಂಜಲಿ ಯೋಗ ಗುರುಗಳಾದ ಶ್ರೀ ರಾಜೇಂದ್ರ ಚಕ್ಕೇರ,ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಹಿರಿಯ ಆಟಗಾರರಾದ ಯಾದವ್ ನಾಯಕ್, ಸ್ಪೋರ್ಟ್ಸ್ ಕನ್ನಡ ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್,ಡೊನಾಲ್ಡ್ ಅರುಣ್ ಸಲ್ದಾನ,ಪ್ರವೀಣ್ ಪಿತ್ರೋಡಿ,ಯೋಗರತ್ನ,7 ವಿಶ್ವದಾಖಲೆಯೊಡತಿ ತನುಶ್ರೀ ಪಿತ್ರೋಡಿ,ರೀತು ಶ್ರೀ ಪಿತ್ರೋಡಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಾರ್ಜುನ.ಡಿ.ಪೂಜಾರಿ,ಸುಧಾಕರ್ ಉಡುಪಿ,ಪ್ರತಿಭಾ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು….