ಹಿರಿಯಡಕ- ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ೧೯ ರ ವಯೋಮಿತಿಯ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಕೂಟ ನಡೆಯಲಿದೆ.
ಈ ಪಂದ್ಯಾಕೂಟವನ್ನು ಇಂಡಿಪೆಂಡೆನ್ಸ್ ಟ್ರೋಫಿ – ೨೦೨೨ ಎನ್ನುವ ನಾಮಾಂಕಿತದ ಮೇಲೆ ನಡೆಸಲಾಗುತ್ತಿದೆ. ದಿನಾಂಕ ೧೫-೦೮-೨೦೨೨ನೇ ಸೋಮವಾರ ಹಿರಿಯಡಕ ಸಮೀಪದ ಕೋಟ್ನಕಟ್ಟೆ ಮೈದಾನದಲ್ಲಿ ಈ ವ್ಯವಸ್ಥಿತ ಪಂದ್ಯಾವಳಿ ನಡೆಯಲಿದೆ.
ಪಂದ್ಯಾಕೂಟದ ವಿಜಯೀ ತಂಡಕ್ಕೆ ೫,೫೫೫ ನಗದು ಜೊತೆಗಾಗಿ ಟ್ರೋಫಿ ನೀಡಿ ಗೌರವಿಸಲಾಗುತ್ತದೆ. ರನ್ನರ್ಸ್ ಅಪ್ ತಂಡಕ್ಕೆ ೩,೩೩೩ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಬಹಳಷ್ಟು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿರುವ ಈ ವ್ಯವಸ್ಥಿತ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಬಯಸುತ್ತಿದೆ,
ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ