ಕರ್ನಾಟಕ ರಾಜ್ಯ ಸರಕಾರದ ಅತ್ಯುತ್ತಮ N.G.O ಪುರಸ್ಕೃತ ಎಕ್ಸ್ಪರ್ಟೈಸ್ ಸಂಸ್ಥೆ ಸಾಮಾಜಿಕ ಸೇವೆಯ ಸದುದ್ದೇಶದಿಂದ ಸೌದಿ ಅರೇಬಿಯಾದ ಅಲ್ಫಲಾಹ್ ಮೈದಾನ ಜುಬೈಲ್ K.S.A ನಲ್ಲಿ ಏರ್ಪಡಿಸಿದ್ದ 4 ದಿನಗಳ ಹಗಲು ರಾತ್ರಿಯ ಪ್ರತಿಷ್ಟಿತ E.P.L -2019 wಪ್ರಶಸ್ತಿಯನ್ನು ಸುರತ್ಕಲ್ ಮೂಲದ ಅನ್ಸಾಫ್ ನೇತೃತ್ವದ ಈಸ್ಟರ್ನ್ ಬ್ಲೂಸ್ ತಂಡ ಗೆದ್ದುಕೊಂಡಿತು.
ಫೈನಲ್ ಪಂದ್ಯದಲ್ಲಿ ಆತಿಥೇಯ ಸೌದಿ ಅರೇಬಿಯಾದ ಅಲ್ಫಲಾಹ್ ಜುಬೈಲ್ ತಂಡವನ್ನು ಸೋಲಿಸುವ ಮೂಲಕ ಅತ್ಯಾಕರ್ಷಕ ಟ್ರೋಫಿ ಹಾಗೂ ವಿಶೇಷ ಉಡುಗೊರೆಗಳನ್ನು ಪಡೆದುಕೊಂಡರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಕೇರಳ ಮೂಲದ ರಾಜೇಶ್ ಪಾಲಾದರೆ,ಬೆಸ್ಟ್ ಬೌಲರ್ ಪ್ರಶಸ್ತಿ ಯಾರ್ಕರ್ ಸ್ಫೆಷಲಿಸ್ಟ್,ಸೌದಿ ಅರೇಬಿಯಾದ ಅಗ್ರಗಣ್ಯ ಎಸೆತಗಾರ ಸಮೀರ್ ಕಾರ್ನಾಡ್(ಫ್ರೆಂಡ್ಸ್ ಉಡುಪಿ) ಪಾಲಾಯಿತು.
ಈಸ್ಟರ್ನ್ ಬ್ಲೂಸ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ತೋರಿದ ರಾಜಾ ಸಾಲಿಗ್ರಾಮ(ಜಾನ್ಸನ್) ಕೇವಲ 20 ರನ್ ನ ಅಂತರದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಯಿಂದ ವಂಚಿತರಾದರೂ ತೃತೀಯ ಗರಿಷ್ಟ ಸ್ಕೋರರ್ ಪ್ರಶಸ್ತಿಗೆ ಭಾಜನರಾದರು.
ಅನ್ಸಾಫ್ ಸುರತ್ಕಲ್ ನೇತೃತ್ವದ ಈಸ್ಟರ್ನ್ ಬ್ಲೂಸ್ ತಂಡ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಲವಾರು ಪ್ರತಿಷ್ಟಿತ ಪಂದ್ಯಾಕೂಟಗಳನ್ನು ಜಯಿಸಿದ್ದಲ್ಲದೆ,ಇತ್ತೀಚಿನ ವರ್ಷಗಳಲ್ಲಿ ಗಲ್ಫ್ ರಾಷ್ಟ್ರದ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ.