ಕಾಪು ಪರಿಸರದ ಆಟಗಾರರು,ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಫೈಜಲ್ ಕಾಪು,ಶಫಿ,ಆದಿಲ್,ಶಾಕಿರ್ ಹಾಗೂ ಆಶಿಕ್ ಇವರೆಲ್ಲರ ಒಗ್ಗೂಡುವಿಕೆಯ ಯುನೈಟೆಡ್ ಕಾಪು ತಂಡ 3 ನೇ ಬಾರಿಗೆ ಯುನೈಟೆಡ್ ಕಾಪು ಟ್ರೋಫಿ-2022 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.
ನವೆಂಬರ್ ದಿನಾಂಕ 27 ರಂದು ಯು.ಎ.ಇ ಶಾರ್ಜಾ ಅಲ್ ಧಾಯಿದ್ ಕ್ರಿಕೆಟ್ ವಿಲೇಜ್ ಮೈದಾನದಲ್ಲಿ,ಟಿ-5 ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ,ಹೊನಲು ಬೆಳಕಿನಡಿಯಲ್ಲಿ,ಕರ್ನಾಟಕದ ಆಟಗಾರರನ್ನೊಳಗೊಂಡ ಪ್ರತಿಷ್ಠಿತ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ
ಪ್ರಥಮ ಪ್ರಶಸ್ತಿ ವಿಜೇತ ತಂಡ 5005 ದಿರ್ಹಮ್ಸ್,
ದ್ವಿತೀಯ ಸ್ಥಾನಿ 2505 ದಿರ್ಹಮ್ಸ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ +971506288509,
+971545102554,+971528291122 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.