ದುಬೈ-ಅರಬ್ ರಾಷ್ಟ್ರ ಯು.ಎ.ಇ ಶಾರ್ಜಾದ ಅಲ್ ಧಾಯಿದ್ ಮೈದಾನದಲ್ಲಿ ಸ್ಪಿನ್ ಝೋನ್ ಮತ್ತು ರಿಚ್ಮಂಡ್ ದುಬೈ ಪ್ರಾಯೋಜಕತ್ವದಲ್ಲಿ ಅಭೂತಪೂರ್ವ,ಅದ್ಧೂರಿ,ಯಶಸ್ವಿಯಾಗಿ 3 ನೇ ಬಾರಿಗೆ ಜರುಗಿದ ಯುನೈಟೆಡ್ ಕಾಪು ಟ್ರೋಫಿ 2022 ಚಾಂಪಿಯನ್ಸ್ ಪಟ್ಟವನ್ನು ಟೀಮ್ ಎಲಿಗೆಂಟ್ ಅಲಂಕರಿಸಿತು.
ಉಡುಪಿ ಮಂಗಳೂರು ಪರಿಸರದ ಆಟಗಾರರನ್ನೊಳಗೊಂಡ ಒಟ್ಟು 8 ಪ್ರತಿಷ್ಠಿತ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು.
ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫೈನಲ್ ನಲ್ಲಿ ಟೀಮ್ ಎಲಿಗೆಂಟ್,ನವೀನ್ ಇಲೆವೆನ್ ತಂಡದ ವಿರುದ್ಧ ರೋಚಕ ಗೆಲುವನ್ನು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಪ್ರಶಸ್ತಿ ನವೀನ್ ಇಲೆವೆನ್ ಶಾಜಾನ್ ಮತ್ತು ಟೀಮ್ ಎಲಿಗೆಂಟ್ ನ ಸಫ್ವಾನ್ ಬೆಸ್ಟ್ ಬ್ಯಾಟರ್ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ ಶಾಕಿರ್ ವಿಟ್ಲ,ಫೈಜಲ್ ಕಾಪು,ಆಶಿಕ್ ಬೆಳಪು,ಶಫಿ ಮತ್ತು ಆದಿಲ್ ಮುಲ್ಲಾ ಇವರೆಲ್ಲರ ಸಾರಥ್ಯದಲ್ಲಿ, ನಡೆದ 3 ನೇ ಆವೃತ್ತಿಯ ಯುನೈಟೆಡ್ ಕಾಪು ಟ್ರೋಫಿ-2022 ಅತ್ಯಂತ ಶಿಸ್ತುಬದ್ಧ ಹಾಗೂ ಅದ್ಧೂರಿಯಾಗಿ ನಡೆದಿದ್ದು,ಅರಬ್ ರಾಷ್ಟ್ರದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಟಗಳಲ್ಲೊಂದಾಗಿ ಗುರುತಿಸಿಕೊಂಡು ಮನೆಮಾತಾಗಿದೆ.
ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಿತು ಈ ಸಂದರ್ಭ ಮುಖ್ಯ ಅತಿಥಿಯಾಗಿ ಡಾ.ಮೊಹಮ್ಮದ್ ಖಾಲಿದ್ ಅಜ್ಮನ್,ದೀಪಕ್ ಡಿ.ಜೆ ದುಬೈ, ಎಸ್.ಎಫ್.ಎಸ್ ಫ್ರೈಟ್ ಸರ್ವಿಸ್ ದುಬೈ ನ ಶಾಹ್ನವಾಜ್ ಹುಸೇನ್ ,ರೆಹಾನ್ ರಿಚ್ಮಂಡ್ ದುಬೈ,ಸ್ಪಿನ್ ಝೋನ್ ಫೈಸಲ್ ಅಬ್ದುಲ್ ಹಮೀದ್,ಸುಹೇಲ್ ಎಕ್ಸ್ಪರ್ಟ್ ದಾಫ್ಜಾ ದುಬೈ,ಹಸ್ನಾ ಡೆವೆಲಪರ್ಸ್ ನ ಆದಿಲ್ ಮತ್ತು ಯಾಸೀನ್ ಭಾಗವಹಿಸಿ ಪಂದ್ಯಾಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಭಾರತ ಇವರು ಕೂಡ ಟೂರ್ನಮೆಂಟ್ ನ ಸಹಪ್ರಾಯೋಜಕರಾಗಿ ಅತ್ಯುತ್ತಮ ಸಹಕಾರ ನೀಡಿದರು.