Categories
ಕ್ರಿಕೆಟ್

ದುಬೈ- ಬ್ಲೂಫೋರ್ಸ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ನವೀನ್ ಇಲೆವೆನ್

ಕೆ.ಆರ್.ಕೆ ಆಚಾರ್ಯ-ಸ್ಪೋರ್ಟ್ಸ್ ಕನ್ನಡ
ಯುಎಇ-ಇಲ್ಲಿನ ಪ್ರತಿಷ್ಠಿತ ತಂಡ ಬ್ಲೂ ಫೋರ್ಸ್ ಇವರು ಫೆಬ್ರವರಿ 19 ರಂದು ಶಾರ್ಜಾ ಸ್ಕೈ ಲೈನ್ ಯೂನಿವರ್ಸಿಟಿಯಲ್ಲಿ ಆಯೋಜಿಸಿದ ಬ್ಲೂ ಫೋರ್ಸ್ ಪ್ರೀಮಿಯರ್ ಲೀಗ್ ಸೀಸನ್ 1 ರ ಪ್ರಶಸ್ತಿಯನ್ನು ನವೀನ್ ಇಲೆವೆನ್ ಜಯಿಸಿದೆ.
ಒಟ್ಟು ಬಲಿಷ್ಠ ಹತ್ತು ತಂಡಗಳು ಭಾಗವಹಿಸಿದ ಈ ಪಂದ್ಯಾಟದ ಫೈನಲ್ ನಲ್ಲಿ ಬ್ಲೂ ಫೋರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್‌ ತಂಡವಾಗಿ ಮೂಡಿ ಬಂದಿತು.
ಫೈನಲ್ ಪಂದ್ಯಶ್ರೇಷ್ಟ ಅಶ್ರಫ್,ಬೆಸ್ಟ್ ಬ್ಯಾಟರ್ ಇಮ್ರಾನ್ ಕೋಟೇಶ್ವರ,ಅಶುರ್ ಬೆಸ್ಟ್ ಬೌಲರ್,ರೋಶನ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
*ಫೈಸಲ್ ಕಾಪು ಇವರಿಗೆ ಸ್ವರ್ಣ ಪದಕ ಗೌರವ*
ಸಮಾರೋಪ ಸಮಾರಂಭದಲ್ಲಿ ಉಡುಪಿ ಮೂಲದ ಪ್ರಸಿದ್ಧ ಎಡಗೈ ಆಟಗಾರ ಮತ್ತು ದುಬೈನಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ಆಯೋಜಿಸಲ್ಪಡುವ ಯುನೈಟೆಡ್ ಕಾಪು ಟ್ರೋಫಿ ಪಂದ್ಯಾಟದ ಪ್ರಮುಖ ರೂವಾರಿ,ಬ್ಲೂ ಫೋರ್ಸ್ ಪಂದ್ಯಾಟದ ಅಭೂತಪೂರ್ವ ಯಶಸ್ಸಿನಲ್ಲಿ ಬೆನ್ನೆಲುಬಾಗಿ ನಿಂತ ಫೈಸಲ್ ಮೊಹಮ್ಮದ್ ಕಾಪು ಇವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಬ್ಲೂ ಫೋರ್ಸ್ ಸಂಘಟಕರಾದ ರೈನರ್ ಕೊಲ್ಯಾಕೋ,ಯೋಗೀಶ್ ಕೋಟ್ಯಾನ್,ಮುಖ್ಯ ಅತಿಥಿಯಾಗಿ ಆದಿಲ್ ಮುಲ್ಲಾ,ಟೀಮ್ ಎಕ್ಸ್ಪರ್ಟ್ ದಾಫ್ಝಾ ಮಾಲೀಕ ಸೋಹೈಲ್, ಇಮ್ರಾನ್ ಕಾಪು ಮತ್ತು ಫ್ರೆಂಡ್ಸ್ ಕುವೈಟ್ ಮಾಲೀಕರಾದ ಅಮಿತ್ ಫುರ್ಟಾಡೋ ಉಪಸ್ಥಿತರಿದ್ದರು.
ಪಂದ್ಯಾವಳಿಯ ಪ್ರಮುಖ ಪ್ರಾಯೋಜಕರಾಗಿ ಮುಸಾಫಿರ್.ಕಾಮ್,ರಿಯಲ್ ವಾಟರ್ ಅಜ್ಮನ್,ದುಬೈ ಆನ್ಲೈನ್ ವೀಸಾ.ಕಾಮ್,ವರಾಹ ರೂಪ ಮಂಗಳೂರು, ಎಮ್.ಜೆ ಮೋಟಾರ್ಸ್,ಎಸ್.ಕೆ ಸ್ಪೋರ್ಟ್ಸ್,ಜಿಟಿ-ಡೆಸರ್ಟ್ ಸಫಾರಿ ಇವರು ಸಹಕರಿಸಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

16 − 10 =