Categories
ಭರವಸೆಯ ಬೆಳಕು

ವಾಸಿಸಲು ಸೂರಿಲ್ಲದ ಅಸಹಾಯ ಕಣ್ಣುಗಳ ಕಂಬನಿ ಒರೆಸಿದ ಸೇವಾರತ್ನ- ಡಾ.ಗೋವಿಂದ ಬಾಬು ಪೂಜಾರಿ

ಅಸಹಾಯಕ ಮನಗಳಿಗೆ ಆತ್ಮವಿಶ್ವಾಸ ತುಂಬುವ ಸ್ಪೂರ್ತಿಯ ಚಿಲುಮೆ-ಡಾ.ಗೋವಿಂದ ಬಾಬು ಪೂಜಾರಿ ಇವರಿಂದ 6 ನೇ ಮನೆ ಹಸ್ತಾಂತರ
*”ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ”* ಎಂಬ ಮಾತಿಗೆ ಉದಾಹರಣೆಯಾಗಿ ನಿಲ್ಲುವ ಕ್ರೀಡಾ ಪ್ರೋತ್ಸಾಹಕ,  ಸಮಾಜಮುಖಿ ಕೆಲಸದ ಕುರಿತು ತುಡಿತವನ್ನಿಟ್ಟುಕೊಂಡು ನಿತ್ಯವೂ ಪರರು ಏಳಿಗೆಯನ್ನೇ
ಧ್ಯೇಯವಾಗಿಸಿಕೊಂಡಿರುವ ಆದರ್ಶ ವ್ಯಕ್ತಿತ್ವ, ತಮ್ಮ ಕೆಲಸ ಕಾರ್ಯಗಳಿಂದಲೇ ಪ್ರತಿಷ್ಠಿತ ಭಾರತ ಗೌರವಕ್ಕೆ ಭಾಜನರಾಗಿರುವ ಡಾ. ಗೋವಿಂದ ಬಾಬು ಪೂಜಾರಿ ಸಮಾಜಕ್ಕೊಂದು ಸ್ಫೂರ್ತಿಯ ಕಿರಣ.
ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಿ ನಿರುದ್ಯೋಗಿ ಗಳನ್ನು ಸ್ವಾವಲಂಬಿ ಜೀವನಕ್ಕೆ ಮುನ್ನುಗ್ಗಿಸುತ್ತಾ,ಕ್ರೀಡಾ ಪ್ರತಿಭೆಗಳಿಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮಿನುಗು ತಾರೆ.ಬಡ ಕುಟುಂಬಗಳಿಗೆ ಕಿಟ್ ಗಳನ್ನು ಹಂಚುತ್ತಿರುವ ಭರವಸೆಯ ಬೆಳಕು. ವಾಸಿಸಲು ಸೂರಿಲ್ಲದೆ ಒದ್ದಾಡುತ್ತಿದ್ದ ಅಸಹಾಯಕ ಕಣ್ಣುಗಳ ಕಂಬನಿ ಒರೆಸುವ ಸೇವಾ ರತ್ನ .ತಮ್ಮ ಶೈಕ್ಷಣಿಕ ,ಸಾಮಾಜಿಕ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಮುಖೇನ ಇದುವರೆಗೂ ಒಟ್ಟು  ಐದು ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಟ್ಟು ಇದೀಗ ಶ್ರೀ ವರಲಕ್ಷ್ಮೀ ನಿಲಯ ಎಂಬ ತಮ್ಮ ಆಶಯದ  ಆರನೇ ಮನೆಯ ಗೃಹ ಪ್ರವೇಶೋತ್ಸವವು 07-01-2022 ನೇ ಶುಕ್ರವಾರ ಬೆಳಿಗ್ಗೆ 10:30 ಕ್ಕೆ ಹೊಸಾಡು ಗ್ರಾಮದ ಕೊಪ್ಪರಿಗೆಬೆಟ್ಟು ಮುಳ್ಳಿಕಟ್ಟೆಯಲ್ಲಿ ನಡೆಯಲಿದೆ.ಈ ಸೇವಾ ಕೈಂಕರ್ಯಕ್ಕೆ ಶ್ರೀ ರಾಮ ಕ್ಷೇತ್ರ ಧರ್ಮಸ್ಥಳದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಆಗಮಿಸಲಿರುವರು.
ತಾನು ತನ್ನದೆಂದು ಸ್ವಾರ್ಥ ತುಂಬಿರುವ ಈ ಸಮಾಜದಲ್ಲಿ ಇತರರ ಏಳಿಗೆಯನ್ನು ತನ್ನ ಏಳಿಗೆಯಂತೆ ಬಯಸುವ ಇಂತಹ ಅಪರೂಪದ ವ್ಯಕ್ತಿತ್ವ ಸಮಾಜಕ್ಕೆ  ಮಾದರಿ.
ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ನಿಮ್ಮಿಂದಾಗಲಿ.ಸಕಲ ದೈವ ದೇವರುಗಳ ಆಶೀರ್ವಾದ ನಿಮ್ಮೊಂದಿಗಿರಲಿ ಎಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್  ಆಶಿಸುತ್ತದೆ..

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

seventeen − 16 =