ಸಮಾಜರತ್ನ,ಕೊಡುಗೈ ದಾನಿ,ಇತ್ತೀಚೆಗಷ್ಟೇ ಸಮಾಜಸೇವೆಗಾಗಿ ಡಾಕ್ಟರೇಟ್ ಗೌರವಕ್ಕೆ ಭಾಜನರಾದ ಡಾ.ಗೋವಿಂದಬಾಬು ಪೂಜಾರಿಯವರ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ನ ಕಛೇರಿಗೆ ಸ್ಪೋರ್ಟ್ಸ್ ಕನ್ನಡ ತಂಡ ಭೇಟಿ ನೀಡಿ ಶ್ರೀಯುತರನ್ನು ಸನ್ಮಾನಿಸಲಾಯಿತು ಹಾಗೂ ನಂಚಾರಿನಲ್ಲಿ 95 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್(ರಿ) ನ ಶಿಲಾನ್ಯಾಸ ಕಾರ್ಯಕ್ರಮದ ಗೌರವ ಉಪಸ್ಥಿತಿಗಾಗಿ ಆಹ್ವಾನಿಸಲಾಯಿತು..
ಈ ಸಂದರ್ಭ ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ಅಧ್ಯಕ್ಷರು,ಪತಂಜಲಿ ಯೋಗ ಗುರುಗಳಾದ ಶ್ರೀ.ರಾಜೇಂದ್ರ ಚಕ್ಕೇರ ನಂಚಾರು,ಟ್ರಸ್ಟ್ ನ ಗೌರವ ಸಲಹೆಗಾರರಾದ ಡೊನಾಲ್ಡ್ ಅರುಣ್ ಸಲ್ದಾನ,ಟ್ರಸ್ಟ್ ನ ಕೋಶಾಧಿಕಾರಿ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್,ಪತ್ರಕರ್ತರು ಹಾಗೂ ಸ್ಪೋರ್ಟ್ಸ್ ಕನ್ನಡ ಜಾಹೀರಾತು ವಿಭಾಗ ಹಾಗೂ ಕಾರ್ಯಕ್ರಮ ಸಂಯೋಜನೆಯ ಮುಖ್ಯಸ್ಥರಾದ ಸುಶಾಂತ್ ಬೈಂದೂರು,ಪ್ರಸಾದ್ ಬೈಂದೂರು ಹಾಗೂ ಲೋಕೇಶ್ ಬೈಂದೂರು ಉಪಸ್ಥಿತರಿದ್ದರು…