ಜಾಮಿಯಾತುಲ್ ಫಲಾ ಹಾಗೂ ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ರಿಯಾದ್ ನ ಎಮ್.ಸಿ.ಎ ಅಂಗಣದಲ್ಲಿ ಆಯೋಜಿಸಿದ್ದ ಜೆ.ಎಫ್.ಸೂಪರ್ ಕಪ್-2020 ಪ್ರಶಸ್ತಿಯನ್ನು ಡಿ.ಎಮ್.ನಾಜಿದ್ ತಂಡ ಜಯಿಸಿದೆ.
ನಾಕೌಟ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾವಳಿಯ ಫೈನಲ್ ನಲ್ಲಿಧೀರ ಗಯ್ಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 10 ಓವರ್ ಗಳಲ್ಲಿ 51 ರನ್ ಗಳಿಸಿತ್ತು.
ಡಿ.ಎಮ್.ನಾಜಿದ್ ತಂಡದ ಪರವಾಗಿ ಮಾರಕ ದಾಳಿ ಸಂಘಟಿಸಿದ ಶದ್ದಾಬ್ 2 ಓವರ್ ನಲ್ಲಿ 16 ರನ್ ನೀಡಿ ಪ್ರಮುಖ 5 ವಿಕೆಟ್ ಉರುಳಿಸಿದ್ದರು.
ಸ್ಪರ್ಧಾತ್ಮಕ ಗುರಿಯನ್ನು ಬೆಂಬತ್ತಿದ ಡಿ.ಎಮ್.ನಾಜಿದ್ ತಂಡ ಕೇವಲ 5.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ಬೆಂಬತ್ತಿ ಟೂರ್ನಮೆಂಟ್ ನ ಪ್ರಶಸ್ತಿ ಜಯಿಸಿತ್ತು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಟೂರ್ನಮೆಂಟ್ ಬೆಸ್ಟ್ ಬೌಲರ್ ಅರ್ಹವಾಗಿ ಶದ್ದಾಬ್ ಕಾರ್ನಾಡ್ ಪಾಲಾದರೆ,ಬೆಸ್ಟ್ ಬ್ಯಾಟ್ಸ್‌ಮನ್ ರಿಫಾಝ್ ಉಡುಪಿ
ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಮೊಹ್ಸಿನ್ ಪಡೆದರು…