ವೃತ್ತಿಪರ ಇಂಜಿನಿಯರ್ಸ್ ಗಳಿಗಾಗಿ ಏರ್ಪಡಿಸಲಾಗಿದ್ದ ಅಂತರ್ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಉದ್ಘಾಟನಾ ಸಮಾರಂಭ ರವಿವಾರ ನಡೆಯಿತು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಇಂಜಿನಿಯರ್ಸ್ ಅಸೋಷಿಯೇಶನ್ ಅಧ್ಯಕ್ಷರು ಹಾಗೂ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಗುರುರಾಜ್ ಭಟ್,ಹಿಮಾಲಯ ಪ್ರಾಡಕ್ಟ್ ನ ಸೀನಿಯರ್ ಸೇಲ್ಸ್ ಆಫೀಸರ್ ದಿನೇಶ್ ಆಚಾರ್ಯ,ಉದ್ಯಮಿ ನಾಗಭೂಷಣ್ ರೆಡ್ಡಿ ಹಾಗೂ ಸ್ಪೋರ್ಟ್ಸ್ ಡೆನ್ ಈವೆಂಟ್ ಪ್ರಮುಖ ರೂವಾರಿ ಗಣೇಶ್ ಕಾಮತ್ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲೆಯ 62 ವೃತ್ತಿಪರ ಇಂಜಿನಿಯರ್ಸ್ ಆಟಗಾರರು ಷಟಲ್ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದು,
ಬ್ಯಾಡ್ಮಿಂಟನ್ ಕೋಚ್ ಸಂತೋಷ್,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಮೆನೇಜರ್ ಕೆ.ಪಿ.ಸತೀಶ್,ಕಾರ್ತಿಕ್,ನವನೀತ್ ಪಂದ್ಯಾಕೂಟವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.
- ಆರ್.ಕೆ.ಆಚಾರ್ಯ ಕೋಟ