ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ರ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಅಕ್ಟೋಬರ್‌ನಲ್ಲಿ ಮೆಲ್ಬೋರ್ನ್ ಹಸಿರು ಹಾಸಿನ ಕ್ರಿಕೆಟ್ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.ಸೆಪ್ಟೆಂಬರ್ 12 ರಂದು ಬಿಸಿಸಿಐ ನ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯು ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಹದಿನೈದು ಸದಸ್ಯರ ತಂಡವನ್ನು ಮತ್ತು 4 ಸ್ಟ್ಯಾಂಡ್‌ಬೈ ಆಟಗಾರರನ್ನು ಈಗಾಗಲೆ ಪ್ರಕಟಿಸಿದೆ.
2007ರಲ್ಲಿ ಮೊದಲ ಟಿ20 ವಿಶ್ವಕಪ್ ಟೂರ್ನಿ ಆಡಿದ್ದ ದಿನೇಶ್ ಕಾರ್ತಿಕ್ 2022ರ ವಿಶ್ವಕಪ್ ಟೂರ್ನಿಯಲ್ಲೂ ಸ್ಥಾನ ಪಡೆದಿದ್ದಾರೆ ಅದು ಆರ್ಹತೆಯ ಆಧಾರದ ಮೇಲೆ
ಭಾರತ ಕಂಡ ಅನುಭವಿ ವಿಕೆಟ್ ಕೀಪರ್ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ ದಿನೇಶ್ ಕಾರ್ತಿಕ್ ಅವರು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇತ್ತೀಚಿಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವೃತ್ತಿ ಬದುಕಿನ ಅದ್ಭುತ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಕಾರ್ತಿಕ್ ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ ಕಾರ್ತಿಕ್ ಯಶಸ್ವಿಯಾಗಿ ಗೆಮ್ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಹೊರಗುಳಿದ ನಂತರ ಹೊಸ ಭರವಸೆಯೊಂದಿಗೆ ದಿನೇಶ್ ಕಾರ್ತಿಕ್ ತಮ್ಮ ಬ್ಯಾಟಿಂಗ್ ಪರಾಕ್ರಮ ಮೈದಾನದಲ್ಲಿ ತೋರಿಸಿದರು ಮತ್ತು ಅವರ ಕ್ರಿಕೆಟ್ ಆಡುವಲ್ಲಿ ಬುದ್ಧಿವಂತಿಕೆಯನ್ನು ತೋರಿಸಿದರು. ಆರ್‌ಸಿಬಿ ಪರವಾಗಿ ಉತ್ತಮ ಪ್ರದರ್ಶನಗಳನ್ನು ನೀಡಿದರು. 55ರ ಸರಾಸರಿ ಮತ್ತು 180ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನೊಂದಿಗೆ ಈ ಸಾಲಿನ ಐಪಿಎಲ್ ನಲ್ಲಿ ಮಿಂಚಿದರು. ಈ ಕಾರಣದಿಂದಲೇ ದಿನೇಶ್ ಕಾರ್ತಿಕ್ ಅವರನ್ನು ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಭಾರತ ತಂಡಕ್ಕೆ ಮರಳಿ ಆಯ್ಕೆ ಮಾಡಿದೆ. ಇದು ಕಾರ್ತಿಕ್ ಅವರ ಶ್ರೇಷ್ಠ ಆಟಕ್ಕೆ ಸಿಕ್ಕ ಗೌರವ ಎಂದರೆ ತಪ್ಪಾಗಲಾರದು.
*ಟಿ20 ವಿಶ್ವಕಪ್ ಗೆ ಆಯ್ಕೆ ಆಗಿದ್ದಕ್ಕೆ ಆರ್ ಸಿಬಿ ಅಭಿಮಾನಿಗಳಿಗೆ ಟ್ವಿಟ್ಟರ್‌ನಲ್ಲಿ ಧನ್ಯವಾದ ತಿಳಿಸಿದ ಕಾರ್ತಿಕ್*
ಭಾರತೀಯ ರಾಷ್ಟ್ರೀಯ ತಂಡಕ್ಕೆ ಹಿಂತಿರುಗಿದ ನಂತರ, ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತವರು ನೆಲದಲ್ಲಿ ಉತ್ತಮ ಪ್ರದರ್ಶನವನ್ನು ನಿಡಿದರು. ಮತ್ತು ಏಷ್ಯಾ ಕಪ್ ಟೂರ್ನಿಗೂ ಆಯ್ಕೆಯಾಗಿದ್ದರು ಕಾರ್ತಿಕ್.
ಟಿ20 ವಿಶ್ವಕಪ್ ತಂಡಕ್ಕೆ ಕಾರ್ತಿಕ್ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳಿಂದ ಶುಭ ಹಾರೈಕೆಗಳು ಹರಿದುಬರುತ್ತಿದೆ ಅದರಲ್ಲೂ RCB ಅಭಿಮಾನಿಗಳು ದಿನೇಶ್ ಕಾರ್ತಿಕ್ ಅವರಿಗೆ ಶುಭಹಾರೈಸುವವರಲ್ಲಿ ಪ್ರಮುಖರಾಗಿದ್ದಾರೆ.
ಸಂತೋಷದ ಉತ್ತುಂಗದಲ್ಲಿರುವ ದಿನೇಶ್ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಟ್ವಿಟ್ಟರ್‌ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ.ತನ್ನ ಟ್ವಿಟರ್ ಸಂದೇಶದಲ್ಲಿ ದಿನೇಶ್ ಕಾರ್ತಿಕ್ ಅವರು ಅಭಿಮಾನಿಗಳಿಗೆ ನಾನು ಎಂದಿಗೂ ನಿಮಗೆ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ. “ನನ್ನ ವಿಶ್ವಕಪ್ ಪ್ರಯಾಣದ ಅವಿಭಾಜ್ಯ ಅಂಗವಾಗಿದ್ದಕ್ಕಾಗಿ ಮತ್ತು ನನ್ನ ಕನಸನ್ನು ಸಾಧಿಸಲು ಸಹಾಯ ಮಾಡಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಭಾರತ ತಂಡವನ್ನು ಪ್ರತಿನಿಧಿಸುವ ನಾನು ನೀಲಿ ಜೆರ್ಸಿಯಲ್ಲಿರುವಾಗಲೂ ಆರ್‌ಸಿಬಿ, ಆರ್‌ಸಿಬಿ ಎಂದು ಜಪಿಸುವ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ, ಐ ಲವ್ ಯು ಗೈಸ್,’ ಎಂದು ಕಾರ್ತಿಕ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಪಂದ್ಯ ಗೆಲ್ಲಿಸುವಂತಹ ಉತ್ತಮ ಆಟದ ಪ್ರದರ್ಶನ ನೀಡಿದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಈ ಬಾರಿಯ ವಿಶ್ವಕಪ್ ನಲ್ಲಿಯು ಉತ್ತಮ ಆಟವಾಡಿ ಭಾರತೀಯರ ಮಡಿಲಿಗೆ ವಿಶ್ವಕಪ್ ದೊರಕುವಂತಾಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆ ಆಗಿದೆ….