ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ನ ಗ್ರೂಪ್ ‘ಬಿ’ ಪಂದ್ಯದಲ್ಲಿ ಝಾರ್ಖಂಡ್ ವಿರುದ್ಧ ಕರ್ನಾಟಕ 13 ರನ್ ಗಳ ರೋಚಕ ಜಯ ಗಳಿಸಿದೆ
ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ 13 ರನ್ ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದ ಝಾರ್ಖಂಡ್ ಕರ್ನಾಟಕಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು ಕರ್ನಾಟಕ ಪರ ಕೆಎಲ್ ರಾಹುಲ್ 36, ದೇವದತ್ ಪಡಿಕ್ಕಲ್ 63, ಮನೀಷ್ ಪಾಂಡೆ 16, ಕರುಣ್ ನಾಯರ್ 19, ಪವನ್ ದೇಶಪಾಂಡೆ 14, ಪ್ರವೀಣ್ ದೂಬೆ 10, ಜಗದೀಶ್ ಸುಚಿತ್ 11 ರನ್ ನೆರವಿನಿಂದ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 189 ರನ್ ಬಾರಿಸಿತು.
ಈ ಗುರಿ ಬೆನ್ನತ್ತಿದ ಝಾರ್ಖಂಡ್, ಆನಂದ್ ಸಿಂಗ್ 41, ಉತ್ಕರ್ಷ್ ಸಿಂಗ್ 11, ವಿರಾಟ್ ಸಿಂಗ್ 76, ಕುಮಾರ್ ಡಿಯೋಬ್ರಾತ್ 13, ಸುಮಿತ್ ಕುಮಾರ್ 23 ರನ್ ಗಳಿಸಿದರು ಅಂತಿಮವಾಗಿ ಝಾರ್ಖಂಡ್ 20 ಓವರ್‌ಗೆ 5 ವಿಕೆಟ್ ಕಳೆದುಕೊಂಡು176 ರನ್ ಗಳಿಸಲಷ್ಟೇ ಶಕ್ತವಾಯಿತು.
– ಪ್ರೀತಮ್ ಹೆಬ್ಬಾರ್.