18.7 C
London
Sunday, July 14, 2024
Homeಕ್ರಿಕೆಟ್ದಾವಣಗೆರೆ ಕ್ರಿಕೆಟ್ ಹಬ್ಬ-ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಖ್ಯಾತಿಯ ಎಸ್.ಎಸ್‌.ಶಾಮನೂರು ಡೈಮಂಡ್,ಶಿವಗಂಗಾ ಕಪ್-2021

ದಾವಣಗೆರೆ ಕ್ರಿಕೆಟ್ ಹಬ್ಬ-ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಖ್ಯಾತಿಯ ಎಸ್.ಎಸ್‌.ಶಾಮನೂರು ಡೈಮಂಡ್,ಶಿವಗಂಗಾ ಕಪ್-2021

Date:

Related stories

ವಿನಯ್ ಕುಮಾರ್ ಕರ್ನಾಟಕ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ?

10 ವರ್ಷ..  ಕರ್ನಾಟಕ ತಂಡ ಕೊನೆಯ ಬಾರಿ ರಣಜಿ ಟ್ರೋಫಿ ಗೆದ್ದು.. 10 ವರ್ಷ..  ಕರ್ನಾಟಕ...

ಶಿಖರದ ತುದಿ ಕಂಡವನಿಗೆ ಸಣ್ಣ ಸೋಲು ಲೆಕ್ಕಕ್ಕೆ ಬಾರದು…!!!

ತುಂಬ ಸಲ ಹೀಗಾಗುತ್ತದೆ. ಕೆಲವೊಮ್ಮೆ ಯಾವುದಾದರೂ  ಸಾಧಕರ ಮೇಲೆ ನಮಗೆ ವಿನಾಕಾರಣದ...

ಭಾರತ ತಂಡಕ್ಕೆ ‘ರಿಂಗ್ ಮಾಸ್ಟರ್’ ಗಂಭೀರ್ ಕೋಚ್.. ನೆನಪಾಗುತ್ತಿದ್ದಾನೆ ಗ್ರೆಗ್ ಚಾಪೆಲ್..!

ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡ ಕ್ಷಣದಿಂದಲೂ...

ಜಸ್ಪ್ರೀತ್ ಬುಮ್ರಾ: ಅಪ್ಪ ಇಲ್ಲ.. ಅಜ್ಜ ಕೇರ್ ಮಾಡಲಿಲ್ಲ! ಅನಾಥನಂತೆ ಬದುಕಿದ ಬುಮ್ರಾ!

ಜಸ್ಪ್ರೀತ್ ಬುಮ್ರಾ.. ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಅವರು ಈ ಪೀಳಿಗೆಯ...

ರೋಹಿತ್ ಶರ್ಮಾ.. ನೀನು ನಿಜಕ್ಕೂ ಧರ್ಮರಾಯನೇ..!

ಆ ಸುದ್ದಿ ಕೇಳಿದ ನಂತರ ರೋಹಿತ್ ಶರ್ಮಾ ಬಗ್ಗೆ ಇದ್ದ ಗೌರವ...
spot_imgspot_img
spot_imgspot_img
spot_imgspot_img
spot_imgspot_img
ಕೊರೊನಾ ಹೊಡೆತದಿಂದ ಕಂಗೆಟ್ಟ ನಾಡಿನ ಜನತೆಗೆ ಅದರಲ್ಲೂ ಟೆನಿಸ್
ಬಾಲ್ ಕ್ರಿಕೆಟ್ ಪ್ರೇಮಿಗಳ ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ.
ದಾವಣಗೆರೆ ಇಲೆವೆನ್ಸ್ ಹಾಗೂ ಜಿಲ್ಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ ದಾವಣಗೆರೆಯ ವಿಧಾನಸಭಾ ಸದಸ್ಯ ಶ್ಯಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿ||ಪಾರ್ವತಮ್ಮನವರ ಸವಿ ನೆನಪಿನ ಅಂಗವಾಗಿ,ದಾವಣಗೆರೆಯ ಕ್ರೀಡಾ ಪ್ರೋತ್ಸಾಹಕರಾದ ಜಯಪ್ರಕಾಶ್ ಗೌಡ  ಯಾನೆ ಜೆ.ಪಿ‌ ಹಾಗೂ ಶ್ರೀನಿವಾಸ್ ಶಿವಗಂಗಾ ಇವರೀರ್ವರ ದಕ್ಷ ಸಾರಥ್ಯದಲ್ಲಿ, ದಿನೇಶ್.ಕೆ.ಶೆಟ್ಟಿ,M.L.A ಆಪ್ತಕಾರ್ಯದರ್ಶಿ ಕುರುಡಿ ಗಿರೀಶ್ ರವರ ಸಹಕಾರದೊಂದಿಗೆ,ದಾಖಲೆಯ ಸತತ 14 ನೇ ಬಾರಿಗೆ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 25 ರಿಂದ 28 ರ ವರೆಗೆ 4 ದಿನಗಳ ಕಾಲ ಹೊನಲು ಬೆಳಕಿನ “ಎಸ್‌.ಎಸ್.ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್-2021” ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಸತತ 14 ನೇ ಬಾರಿಗೆ ನಡೆಸಲ್ಪಡುವ ರಾಷ್ಟ್ರೀಯ ಮಟ್ಟದ ದಾವಣಗೆರೆಯ ಈ ಪಂದ್ಯಾವಳಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಅತ್ಯಂತ  ಅದ್ಧೂರಿ ಹಾಗೂ ವ್ಯವಸ್ಥಿತ ಪಂದ್ಯಾವಳಿಯೆಂದು ಮನೆಮಾತಾಗಿದೆ.ಕಳೆದ ಒಂದೂವರೆ ತಿಂಗಳಿಂದ ಹಾಲಪ್ಪ ದಾವಣಗೆರೆ, ಜನಪ್ರಿಯ ದಾವಣಗೆರೆ ತಂಡದ ಟ್ರಂಪ್ ಕಾರ್ಡ್,
ಕೆ.ಪಿ.ಎಲ್ ಆಟಗಾರ ಮಧು ಮಹೇಶ್ ಪಟೇಲ್ ಇನ್ನಿತರ ಆಟಗಾರರ ತಂಡ ಸುಸಜ್ಜಿತ ಕ್ರೀಡಾಂಗಣ ಹಾಗೂ ಪಿಚ್ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಧ್ಯಪ್ರದೇಶ,ಚೆನ್ನೆ,ಕೇರಳ,ಕರ್ನಾಟಕ ಸೇರಿದಂತೆ ಬಲಿಷ್ಠ 24 ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದು,ದಾವಣಗೆರೆ ಕ್ರೀಡಾಭಿಮಾನಿಗಳ ಸಾಗರ ಪಂದ್ಯಾಟದ ಸವಿಯನ್ನು ಸವಿಯಲಿದ್ದಾರೆ.
ಶ್ಯಾಮನೂರು-ಶಿವಗಂಗಾ ಟ್ರೋಫಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 3.55 ಲಕ್ಷ ನಗದು,ದ್ವಿತೀಯ ಸ್ಥಾನಿ ತಂಡ 2.55 ಲಕ್ಷ ಹಾಗೂ ತೃತೀಯ ಸ್ಥಾನಿ 1.25 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡುವ ಆಟಗಾರರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಟೂರ್ನಮೆಂಟ್ ನ ನೇರ ಪ್ರಸಾರವನ್ನು M.Sports ಬಿತ್ತರಿಸಲಿದ್ದು,ಕಳೆದ 13 ವರ್ಷಗಳಿಂದ ದಾವಣಗೆರೆಯ ಜಿಲ್ಲೆಯ ಕ್ರೀಡಾ ಪ್ರೇಮಿಗಳ ಮನಸ್ಸನ್ನು ಗೆದ್ದ ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ ಹಿರಿಯ ಕಾಮೆಂಟೇಟರ್ ವಿನಯ್ ಉದ್ಯಾವರ ಭಾಗವಹಿಸಲಿದ್ದು,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

17 − 9 =