ಉದ್ಯಾವರ-ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್ ಪಿತ್ರೋಡಿ ಇವರ ನೇತೃತ್ವದಲ್ಲಿ ಇತ್ತೀಚಿಗೆ ನಿಧನರಾದ ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಖ್ಯಾತ ಕ್ರಿಕೆಟಿಗ ಸಿ.ಎ.ಮಲ್ಲೇಶ್ ಬಂಗೇರ ಇವರ ಸ್ಮರಣಾರ್ಥ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ ನಡೆಯಿತು.
ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದಿ.ಮಲ್ಲೇಶ್ ರವರ ತಾಯಿ ಬೇಬಿ ಬಂಗೇರ ಲೋಕಾರ್ಪಣೆಗೊಳಿಸಿದರು.ಇದೇ ಸಂದರ್ಭ ದಿ.ಮಲ್ಲೇಶ್ ಬಂಗೇರ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ,”ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಹಿರಿಯರು ಸಂಸ್ಕಾರದ ಬಗ್ಗೆ ಪಾಠ ಕಲಿಸಬೇಕು.ಇದರಿಂದ ಮಕ್ಕಳು ತಪ್ಪು ದಾರಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯ.ಯುವಕರು ಮಧ್ಯವ್ಯಸನಿಯಾಗದೆ ಸಮಾಜದ ಅಭಿವೃದ್ಧಿಯತ್ತ ಚಿತ್ತವಹಿಸಬೇಕು.ಶಿಸ್ತು,ಸರಳತೆಯಿಂದ ಜೀವನ ನಡೆಸಿ ನಮ್ಮನ್ನಗಲಿದ ದಿ.ಮಲ್ಲೇಶ್ ಎಲ್ಲ ಯುವಕರಿಗೆ ಮಾದರಿ” ಎಂದರು.
ಈ ಸಂದರ್ಭ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ, ಸರಕಾರಿ ಪ್ರೌಢಶಾಲೆಯ ನಿಕಟಪೂರ್ವ ಮುಖ್ಯೋಪಾಧ್ಯಾಯಿನಿ ಉಮಾ ಕೃಷ್ಣ, ತಂಡದ ಗೌರವಾಧ್ಯಕ್ಷ ಗೋಪಾಲ ಅಮೀನ್,ವೆಂಕಟರಮಣ ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ,ಪ್ರಮುಖರಾದ ದಿವಾಕರ ಕುಂದರ್,ಅಧ್ಯಕ್ಷರಾದ ನವೀನ್ ಸಾಲ್ಯಾನ್,ವಿಜಯ್ ಕೋಟ್ಯಾನ್,ಪ್ರವೀಣ್ ಪಿತ್ರೋಡಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ವಿನಯ್ ಉದ್ಯಾವರ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು ಹಾಗೂ ಉಮೇಶ್ ಕರ್ಕೇರ ವಂದಿಸಿದರು.