Categories
ಸಂತಾಪ

ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಯುವಕ ಸಾವು….!

ಭದ್ರಾವತಿಯ *ವಿ ಐ ಎಸ್ ಎಲ್* ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ನಿರತನಾಗಿದ್ದ ದಿನೇಶ್ ರಾವ್ (38) ಪಂದ್ಯದ ನಡುವೆಯೇ ಕುಸಿದುಬಿದ್ದು ಸಾವಿನೆಡೆಗೆ ಹೆಜ್ಜೆ ಹಾಕಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ವಿಐಎಸ್ ಎಲ್ ಕ್ರೀಡಾಂಗಣದಲ್ಲಿ ಇಂದು  ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು ಪಂದ್ಯ ನೆಡೆಯುವ ವೇಳೆಯಲ್ಲೆ ಈ ಘಟನೆ ನಡೆದಿದೆ. ಎರಡು ತಂಡಗಳು ಸೋಲು ಗೆಲುವಿನ ಲೆಕ್ಕಚಾರ ಹಾಕುವ ಸಮಯದಲ್ಲೆ ಈ ಬದುಕಿನ ಲೆಕ್ಕಾಚಾರ ಮುಗಿಸಿ ದಿನೇಶ್ ರವ್ ಮೈದಾನದಲ್ಲೆ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಮಾತ್ರ ದುರಂತವೆ ಹೌದು…
ದಿನೇಶ್ ರಾವ್ (38) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ಭದ್ರಾವತಿ ನಗರಸಭೆ ಸಿಬ್ಬಂದಿಯಾಗಿದ್ದಾನೆ ಇಂದು ನಗರಸಭೆ ವತಿಯಿಂದ  ಕಾರ್ಮಿಕರು ಹಾಗೂ ಸಿಬ್ಬಂದಿವರ್ಗದರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಡುವ ಸಮಯದಲ್ಲೇ ದಿನೇಶ್ ಕುಸಿದು ಬಿದ್ದಿದ್ದಾನೆ ತಕ್ಷಣವೇ
ಸ್ಥಳದಲ್ಲಿಯೇ ಇದ್ದ ಆರೋಗ್ಯ ಸಿಬ್ಬಂದಿಯಿಂದ ದಿನೇಶ್ ರಾವ್ ತಪಾಸಣೆ ನಡೆದಿದೆ. ಕುಸಿದು ಬಿದ್ದ ತಕ್ಷಣವೇ ದಿನೇಶ್ ಮೃತಪಟ್ಟಿದ್ದಾರೆಂದು   ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸ್ಪಷ್ಟಪಡಿಸಿದ್ದಾರೆ.
ನಂತರ ಮೃತದೇಹವನ್ನು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ತಾನು ಆಡುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದ ದಿನೇಶ್ ಗೆ ವಿಧಿಯ ಆಟ ಅರಿವಿಗೆ ಬಾರದೆ ಉಸಿರು ಚೆಲ್ಲಿ ಸಾವಿನೆಡೆಗೆ ಹೆಜ್ಜೆ ಹಾಕಿದ್ದಾರೆ…..
ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದ ದಿನೇಶ್ ರಾವ್ ಕಿರಿ ವಯಸ್ಸಿನಲ್ಲೆ ಬದುಕಿನ ಕೋಟಾ ಮುಗಿಸಿದ್ದು ಮಾತ್ರ ದುರಂತವೆ ಹೌದು

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

five × 3 =