6.2 C
London
Friday, December 13, 2024
Homeಕ್ರಿಕೆಟ್ಪಾಕ್ ಸದೆಬಡಿದ ಭಾರತೀಯರು ಪಂದ್ಯ ವೀಕ್ಷಿಸುತ್ತಿದ್ದ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಪುಟ್ಟ ಮಗುವಿನಂತೆ ಕುಣಿದು...

ಪಾಕ್ ಸದೆಬಡಿದ ಭಾರತೀಯರು ಪಂದ್ಯ ವೀಕ್ಷಿಸುತ್ತಿದ್ದ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಪುಟ್ಟ ಮಗುವಿನಂತೆ ಕುಣಿದು ಕುಪ್ಪಳಿಸಿದರು..!!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಭಾರತ ತಂಡ
ಭಾರತದ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿದ ಕ್ರಿಕೆಟ್ ಅಭಿಮಾನಿಗಳು
ಪಂದ್ಯ ಗೆಲುವಿನ ಬೆನ್ನಲ್ಲೇ ಕ್ರೀಡಾಂಗಣದಲ್ಲೆ ಕುಣಿದು ಕುಪ್ಪಳಿಸಿದ ಭಾರತೀಯ ಕ್ರಿಕೆಟ್ ನ ಹಿರಿಯ ಸೂಪರ್ ಸ್ಟಾರ್ ಸುನಿಲ್ ಗವಾಸ್ಕರ್
ಮೆಲ್ಬರ್ನ್: ಕೆಲ ವಾರಗಳ ಹಿಂದೆ ಅನೇಕರು ವಿರಾಟ್‌ ಕೊಹ್ಲಿ ಇನ್ನೂ ಭಾರತ ಟಿ20 ತಂಡದಲ್ಲಿ ಇರಬೇಕಾ? ಎಂದು ಪ್ರಶ್ನೆ ಮಾಡಿದರೆ. ಇನ್ನೂ ಕೇಲವು ವಿದೇಶಿ ಹಿರಿಯ ಕ್ರಿಕೆಟಿಗರು ಕೊಹ್ಲಿ ನಿವೃತ್ತಿ ಘೋಷಿಸಲು ಸರಿಯಾದ ಸಮಯ ಎನ್ನುವಂತೆಲ್ಲ ವ್ಯಂಗ್ಯವಾಗಿ ಮಾತನಾಡಿದ್ದರು ಆದರೆ ಎಲ್ಲಾ ಅವಿವೇಕಿಗಳಿಗೂ ತನ್ನ ಬ್ಯಾಟಿನಿಂದಲೆ ಉತ್ತರ ಕೊಟ್ಟ ಕೊಹ್ಲಿ ತನ್ನ ವಿರುದ್ಧ ಮನಬಂದಂತೆ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ ಅದು ತಮ್ಮ ಶ್ರೇಷ್ಠಮಟ್ಟದ ಬ್ಯಾಟಿಂಗ್ ಆಡುವ ಮುಖಾಂತರ.
ಕೊಹ್ಲಿಯ ಈ ಇನ್ನಿಂಗ್ಸ್ ಅನ್ನು ಯಾರೂ ಮರೆಯಲೂ ಸಾಧ್ಯವಿಲ್ಲ. 2021ರ ಟಿ20 ವಿಶ್ವಕಪ್‌ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ, 2022ರ ವಿಶ್ವಕಪ್‌ನಲ್ಲಿ ಕೊನೆಯ ಬಾಲಿನಲ್ಲಿ  ಗೆಲುವು ಸಾಧಿಸುವ ಮುಖಾಂತರ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡಿದೆ. 4 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ನ ಅಭಿಯಾನ ಆರಂಭಿಸಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು. ಈ ಪಂದ್ಯದ ಗೆಲುವನ್ನು ಭಾರತದ ಹಿರಿಕಿರಿಯರೆನ್ನದೇ ಸಂಭ್ರಮಿಸಿದ್ದಾರೆ. ಇನ್ನೂ ಕ್ರಿಕೆಟ್‌ ದಂತಕಥೆ ಸುನಿಲ್ ಗವಾಸ್ಕರ್ ಕೂಡಾ ಭಾರತದ ಗೆಲುವನ್ನು ಮೆಲ್ಬೋರ್ನ್ ಅಂಗಳದಲ್ಲೆ ಕಣ್ಣಾರೆ ಕಂಡು  ಪುಟ್ಟ ಮಗುವಿನಂತೆ ಕುಣಿದು ಕುಪ್ಪಳಿಸಿ  ಸಂಭ್ರಮಿಸಿದ್ದಾರೆ.
ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಒಂದು ದಿನ ಮುಂಚಿತವಾಗಿಯೇ ದೀಪಾವಳಿ ಗಿಫ್ಟ್ ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯ ಹಲವಾರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದರೆ ತಪ್ಪಾಗಲಾರದು. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಭಾರತೀಯರ  ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿ ಮಿಂಚಿದ್ದಾರೆ. ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ಎದುರು 4 ವಿಕೆಟ್‌ ರೋಚಕ ಜಯ ಸಾಧಿಸುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಒಂದು ದಿನ ಮುಂಚಿತವಾಗಿಯೇ ಭಾರತದಲ್ಲಿ ದೀಪಾವಳಿ ಪಟಾಕಿ ಸಿಡಿಸಿ  ಸಂಭ್ರಮಿಸಿದರು.
ಅಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಪಾಲ್ಗೊಂಡಿರುವ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡಾ ಭಾರತ ಪಂದ್ಯ ಗೆಲ್ಲುತ್ತಿದ್ದಂತೆಯೇ ಅಕ್ಷರಶಃ ಪುಟ್ಟ ಮಗುವಿನಂತೆ ನಿಂತಲ್ಲಿಯೇ ಕುಣಿದು ಕುಪ್ಪಳಿಸಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ  ಈ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

12 + 6 =