ಭಾರತ Vs ವೆಸ್ಟ್ ಇಂಡೀಸ್: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಪರಸ್ಪರ ಸ್ಪರ್ಧಿಸಲು ಸಿದ್ಧವಾಗಿವೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಜುಲೈ 12 ಬುಧವಾರದಿಂದ ನಡೆಯಲಿದೆ. ಈ ಸರಣಿಗೆ ಎರಡೂ ತಂಡಗಳು ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಿವೆ. ಎರಡೂ ತಂಡಗಳಲ್ಲಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ
ಭಾರತವು ಈ ಹಿಂದೆ 2019 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಆ ಪ್ರವಾಸದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಈ ಬಾರಿಯೂ ಟೆಸ್ಟ್ ಸರಣಿ ವಶಪಡಿಸಿಕೊಳ್ಳಬೇಕಿದೆ. ರೋಹಿತ್ ಶರ್ಮಾ ಹೊರತುಪಡಿಸಿ, ಮಾಜಿ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶುಭಮನ್ ಗಿಲ್ ಮತ್ತು ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್‌ನಿಂದ ರನ್ ಹೊಳೆ ನಿರೀಕ್ಷಿಸಲಾಗಿದೆ.
ಟೀಂ ಇಂಡಿಯಾದ ಟೆಸ್ಟ್ ಜೆರ್ಸಿ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ಟೆಸ್ಟ್ ಜೆರ್ಸಿ ಬದಲಾಗಿದೆ. ಹೊಸ ಟೆಸ್ಟ್ ಜೆರ್ಸಿ ಭುಜದ ಮೇಲೆ ನೀಲಿ ಪಟ್ಟಿಗಳನ್ನು ಹೊಂದಿದೆ. ಹಾಗೇನೇ, ಡ್ರೀಮ್ 11 ಅನ್ನು ಜರ್ಸಿಯ ಮುಂದೆ ಕೆಂಪು ಬಣ್ಣದಲ್ಲಿ ಬರೆಯಲಾಗಿದೆ. ಭಾರತ ತಂಡದ ಈ ಹೊಸ ಜೆರ್ಸಿಯನ್ನು ಅಭಿಮಾನಿಗಳು ಇಷ್ಟಪಡುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಭಿಮಾನಿಗಳ ಪ್ರಕಾರ, ಕ್ರಿಕೆಟ್ ಈಗ ವ್ಯಾಪಾರವಾಗಿ ಮಾರ್ಪಟ್ಟಿದೆ ಮತ್ತು ಹಣ ಗಳಿಸಲು ಬಿಸಿಸಿಐ ಕೂಡ ಐಪಿಎಲ್ ಮಾದರಿಯ ಟೆಸ್ಟ್ ಜೆರ್ಸಿಗಳನ್ನು ತಯಾರಿಸಿದೆ. ಈ ಹಿಂದಿನ ‘ಬೈಜು’ ಲೋಗೋ ಉತ್ತಮವಾಗಿತ್ತು ಎಂದು ಅಭಿಮಾನಿಗಳು ನಂಬಿದ್ದಾರೆ. ಭಾರತ ತಂಡವು ಹೊಸ ಜೆರ್ಸಿಯೊಂದಿಗೆ ಕೆಲವು ಆಟಗಾರರ ಚಿತ್ರವನ್ನು ಹಂಚಿಕೊಂಡಿದೆ, ಅದರ ಬಗ್ಗೆ ಅಭಿಮಾನಿಗಳು ನಿರಂತರವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.