ಕುಂದಾಪುರ-ತಾಲೂಕು ಪಂಚಾಯತ್ ಸದಸ್ಯರು ಹಾಗೂ ಉದ್ಯಮಿ ಶ್ರೀ ಉಮೇಶ್ ಶೆಟ್ಟಿ ಕಲ್ಗದ್ದೆ ಇವರ ಗೌರವಾಧ್ಯಕ್ಷತೆಯಲ್ಲಿ,ಜಾನ್ಸನ್ ಕುಂದಾಪುರ ತಂಡದ ವ್ಯವಸ್ಥಾಪಕರಾದ ರವೀಂದ್ರ ಹೆಗ್ಡೆ ಇವರ ಘನ ಅಧ್ಯಕ್ಷತೆಯಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿಡಿಸೆಂಬರ್ 30,31 ಮತ್ತು ಜನವರಿ 1ರಂದು ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ಜಾನ್ಸನ್ ಟ್ರೋಫಿ 2022-23ಆಯೋಜಿಸಲಾಗಿದೆ.
ಜಾನ್ಸನ್ ಟ್ರೋಫಿಯಲ್ಲಿ ಭಾಗವಹಿಸಲು ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಒಟ್ಟು 24 ತಂಡಗಳು ತಮ್ಮ ಹೆಸರು ನೋಂದಾಯಿಸಿದ್ದು,2022 ವರ್ಷಾಂತ್ಯ ಮತ್ತು 2023 ಹೊಸ ವರ್ಷದ ಪ್ರಾರಂಭದಲ್ಲಿ ಆಯೋಜಿಸಲಾದ ಈ ಪಂದ್ಯಾಟ ಕ್ರೀಡಾಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಲಿದೆ.
ಜಾನ್ಸನ್ ಟ್ರೋಫಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 4,04,000 ನಗದು ಬಹುಮಾನ,ದ್ವಿತೀಯ 2,02,000 ನಗದು ಬಹುಮಾನ ಸಹಿತ ಆಕರ್ಷಕ ಶಾಶ್ವತ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ಪಂದ್ಯಾಟದ ಅತ್ಯುತ್ತಮ ಬ್ಯಾಟರ್,ಅತ್ಯುತ್ತಮ ಬೌಲರ್ ಬಹುಮಾನ ರೂಪದಲ್ಲಿ ಆಕರ್ಷಕ ಉಡುಗೊರೆಗಳನ್ನು ಪಡೆಯಲಿದ್ದು,ಸರಣಿ ಪುರುಷೋತ್ತಮ ಆಟಗಾರ ದ್ವಿಚಕ್ರ ವಾಹನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
*ಜಾನ್ಸನ್ ರಾಷ್ಟ್ರೀಯ ಮಟ್ಟದ ಪಂದ್ಯಾಟ ಸಮಿತಿಯ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.*
*ಗೌರವಾಧ್ಯಕ್ಷರು*-ಉಮೇಶ್ ಶೆಟ್ಟಿ ಕಲ್ಗದ್ದೆ
*ಅಧ್ಯಕ್ಷರು*-ರವೀಂದ್ರ ಹೆಗ್ಡೆ
*ಉಪಾಧ್ಯಕ್ಷರು*-ಅನಿಲ್ ಖಾರ್ವಿ,ರವೂಫ್.ಎಮ್.ಕೆ
*ನಾಯಕ*-ರಾಜೇಶ್ ಪೂಜಾರಿ(ರಾಜಾ ಸಾಲಿಗ್ರಾಮ)
*ಕಾರ್ಯದರ್ಶಿ*-ಮನೋಜ್ ನಾಯರ್
*ಜೊತೆ ಕಾರ್ಯದರ್ಶಿಗಳು*-ಕೃಷ್ಣ ದೇವಾಡಿಗ,ನಾಗೇಶ್ ನಾವಡ
*ಕೋಶಾಧಿಕಾರಿಗಳು*-ಆದಿತ್ಯ ಶೆಟ್ಟಿ
ಉಲ್ಲಾಸ್ ಡಿ’ಮೆಲ್ಲೋ
*ನಿರ್ದೇಶಕರು*-ರಾಘವೇಂದ್ರ ಪೈ,ಜಾರ್ಜ್ ಕರ್ವೆಲ್ಲೋ,ಮೋಹನ್ ಮಾವಿನಕೆರೆ,ಚಂದ್ರ ಮಾವಿನಕೆರೆ.
ಮತ್ತು ತಂಡದ ಸರ್ವ ಸದಸ್ಯರ ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಪಂದ್ಯಾಟ ನಡೆಯಲಿದೆ ಎಂದು ಅಧ್ಯಕ್ಷರಾದ ರವೀಂದ್ರ ಹೆಗ್ಡೆ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.