ಯು ಆರ್ ಸ್ಪೋರ್ಟ್ಸ್ ಮಣಿಪಾಲ ಇವರ ವತಿಯಿಂದ ಕೊರೋನ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೋನ ವಾರಿಯರ್ಸ್ ಇವರಿಗೆ ಅಭಿನಂದನಾ ಸಮಾರಂಭವು ಮಣಿಪಾಲದ ಯು. ಆರ್. ಸ್ಪೋರ್ಟ್ಸ್ ನಲ್ಲಿ ದಿನಾಂಕ 7 – 8-2020 ರಂದು ನಡೆಯಿತು.
ಮಣಿಪಾಲ ಆರಕ್ಷಕ ಠಾಣಾಧಿಕಾರಿಯಾಗಿರುವ ಶ್ರೀ ಮಂಜುನಾಥ ಗೌಡ, ಫೋಟೋ ಪ್ಯಾಲೇಸ್ ನ ಶ್ರೀ ರವಿರಾಜ್ ಕಿದಿಯೂರು, ಪಡುಬಿದ್ರಿ ಫ್ರೆಂಡ್ಸು ಕ್ರಿಕೆಟರ್ಸ್ ನ ಶ್ರೀ ಶರತ್ ಶೆಟ್ಟಿ, ಪಡುಬಿದ್ರಿ ಐಟೋನ್ ಆಪ್ಟಿಕಲ್ಸ್ ನ ಶ್ರೀ ಚಂದನ್ ರವರು ಹಾಗೂ ಸಂಸ್ಥೆಯ ಶ್ರೀ ದೇವರಾಜ್ ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಕೋವಿದ್ ರೋಗಿಗಳನ್ನು ಚಿಕಿತ್ಸೆ ಮಾಡಿದ ಗೌತಮ್ ಕುಮಾರ್ ಪರ್ಕಳ ಹಾಗೂ ಪೋಲಿಸ್ ಸಿಬ್ಬಂದಿಯಾಗಿರುವ ಪ್ರಶಾಂತ್ ಕೋಟ ಇವರುಗಳನ್ನು ಅತಿಥಿಗಳು ಸನ್ಮಾನಿಸಿದರು. ಹಾಗೂ ಯು ಆರ್ ಸ್ಪೋರ್ಟ್ಸ್ ಸಂಸ್ಥೆಯನ್ನು ಸ್ಥಾಪಿಸಿದ ಶ್ರೀ ರವಿರಾಜ್ ಕಿದಿಯೂರು ಇವರಿಗೆ ಗೌರವಾರ್ಪಣೆ ನೀಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಠಾಣಾಧಿಕಾರಿಯವರು ಕೋವಿದ್ ಬಗ್ಗೆ ಶ್ರಮಿಸಿದವರಿಗೆ ಅಭಿನಂದಿಸಿದರೆ ಅವರ ಜವಾಬ್ದಾರಿ ಹೆಚ್ಚಾಗಿ ಇನ್ನುಳಿದವರಿಗೂ ಸ್ಪೂರ್ತಿಯಾಗುವುದು ಎಂದು ತಿಳಿಸಿದರು ಅಲ್ಲದೆ ಸಂಸ್ಥೆಯ ಈ ಅಭಿನಂದನಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಳಿದ ಗಣ್ಯರು ಕಾರ್ಯಕ್ರಮದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದರು. ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ಸ್ಪೋರ್ಟ್ಸ್ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ವಸಂತ ಮುನಿಯಾಲು (1), ಯತೀಶ್ ಅಲೆವೂರು (2), ಕಿರಣ್ ಕಾರ್ಕಳ (3), ಸಚಿನ್ ಕೋಟೇಶ್ವರ (4) ಇವರಿಗೆ ಟ್ರೋಫಿ ಗಳನ್ನು ವಿತರಿಸಲಾಯಿತು. ಸಂಗೀತದಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಿದ ಮಾ. ಲಿಖಿತ್ ಕರ್ಕೇರ ಇವರನ್ನು ಅಭಿನಂದಿಸಲಾಯಿತು. ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.