ಕಾಮನ್ವೆಲ್ತ್ನಲ್ಲಿ ಚಿನ್ನದ ಪದಕ ಸ್ವೀಕರಿಸಿದ ಸಿಂಧು ಅವರ ಫೋಟೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದರ ಅಡಿಯಲ್ಲಿ ಶೀರ್ಷಿಕೆಯನ್ನು ನೀಡಿ ಸಿಂಧುವನ್ನು ಹೊಗಳಿದ್ದಾರೆ.
ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ (David Warner) ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ತುಂಬಾ ಸಕ್ರಿಯರಾಗಿದ್ದಾರೆ. ಅದರಲ್ಲೂ ಭಾರತೀಯರೆಂದರೆ ವಾರ್ನರ್ ಅಚ್ಚುಮೆಚ್ಚು ಈ ಆಭಿಮಾನದಿಂದಲೆ ಅವರು ತಮ್ಮ Instagram ಖಾತೆಯಲ್ಲಿ ವೀಡಿಯೊಗಳು ಮತ್ತು ಟ್ವೀಟ್‌ಗಳ ಮೂಲಕ ಮೈದಾನದ ಹೊರಗೆ ಅಭಿಮಾನಿಗಳನ್ನು ರಂಜಿಸುತ್ತಿತ್ತಾರೆ. ವಾರ್ನರ್ ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಆಡುವ ಪ್ರಪಂಚದ ಇತರ ದೇಶಗಳಲ್ಲಿಯೂ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಐಪಿಎಲ್‌ನಿಂದಾಗಿ ವಾರ್ನರ್‌ಗೆ ಭಾರತದಲ್ಲೂ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಮತ್ತೆ ವಾರ್ನರ್ ತಮ್ಮ ಪೋಸ್ಟ್ ಒಂದರಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಈ ಬಾರಿ ಅವರ ಪೋಸ್ಟ್ ಭಾತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ಪದಕ ಸ್ವೀಕರಿಸಿದ ಸಿಂಧು ಅವರ ಫೋಟೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಅದರ ಅಡಿಯಲ್ಲಿ ಶೀರ್ಷಿಕೆಯನ್ನು ನೀಡಿ ಸಿಂಧುವನ್ನು ಹೊಗಳಿದ್ದಾರೆ.
ಪಿ.ವಿ ಸಿಂಧು ಫೋಟೋ ಹಂಚಿಕೊಂಡ ವಾರ್ನರ್:
ಇತ್ತೀಚೆಗೆ ಭಾರತೀಯ ಹಾಡುಗಳಿಗೆ, ರೀಲ್ಸ್ ಗಳನ್ನು ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಜೋತೆಗೆ ಸಖತ್ ಚರ್ಚೆಯಲ್ಲಿರುತ್ತಿದ್ದು ಆಸೀಸ್ನ ಡೇವಿಡ್ ವಾರ್ನರ್ ಇದೀಗ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಈ ಬಾರಿ ಕಾಮನ್‌ವೆಲ್ತ್ 2022ರಲ್ಲಿ ಚಿನ್ನ ಗೆದ್ದ ಭಾರತೀಯ ಆಟಗಾರ್ತಿಯಾದ ಪಿ.ವಿ ಸಿಂಧು ಅವರ ಫೋಟೋವನ್ನು ಹಂಚಿಕೊಂಡು ಶುಭಾಷಯವನ್ನು ಕೋರಿದ್ದಾರೆ. ಅಲ್ಲದೇ ‘ವೆಲ್ ಡನ್ ಪಿವಿ ಸಿಂಧು. ಅದ್ಭುತವಾದ ಪ್ರದರ್ಶನ‘ ಎಂದು ಬರೆದುಕೊಂಡಿದ್ದಾರೆ
ವಾರ್ನರ್ ಅವರ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಇದುವರೆಗೆ ಐದೂವರೆ ಲಕ್ಷ ಲೈಕ್‌ಗಳನ್ನು ಪಡೆದಿದೆ. ಅಷ್ಟೇ ಅಲ್ಲ, ಡೇವಿಡ್ ಪತ್ನಿ ಕ್ಯಾಂಡಿಸ್ ವಾರ್ನನ್ ಕೂಡ ಕಮೆಂಟ್ ಮಾಡಿ ‘ವೆರಿ ನೈಸ್’ ಎಂದಿದ್ದಾರೆ.