Categories
ಸ್ಪೋರ್ಟ್ಸ್

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪರವಾಗಿ ಎರಡನೆ ಪದಕ ಗೆದ್ದು ಇಂದು ಉಡುಪಿಗೆ ಆಗಮಿಸಿದ ಗುರುರಾಜ್ ಪೂಜಾರಿ ಅವರಿಗೆ ಜಿಲ್ಲಾಡಳಿತದಿಂದ ಅಭೂತಪೂರ್ವ ಸ್ವಾಗತ

ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್‌ ನಲ್ಲಿ ನೆಡೆಯುತ್ತಿರುವ – 2022 ರ ಕಾಮನ್ ವೆಲ್ತ್ ಗೇಮ್ಸ್ ನ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಉಡುಪಿಗೆ ಇಂದು ಆಗಮಿಸಿದ ಗುರುರಾಜ್ ಪೂಜಾರಿ ಅವರಿಗೆ ಜಿಲ್ಲಾಡಳಿತದಿಂದ ಸ್ವಾಗತಿಸಿ ಗೌರವಿಸಲಾಯಿತು
 ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿರುವ ಕುಂದಾಪುರದ ಗುರುರಾಜ್ ಪೂಜಾರಿ ಅವರು ಇಂದು ಉಡುಪಿಗೆ ಆಗಮಿಸಿದ್ದರು ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ ಕೋರಲು
ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು ಕಾರ್ಯಕ್ರಮದ ನಿಗದಿ ಯಂತೆ  ಆಗಮಿಸಿದ ಗುರುರಾಜ್ ಪೂಜಾರಿ ಅವರನ್ನು ಜಿಲ್ಲಾಧಿಕಾರಿ ಕೂರ್ಮರಾವ್ ಎಮ್ ಅವರು ಜಿಲ್ಲಾಡಳಿತದ ಪರವಾಗಿ ಅಭಿನಂಧಿಸಿದರು.
ಈ ವೇಳೆ ಮಾತನಾಡಿದ ಗುರುರಾಜ್ ಪೂಜಾರಿ ಅವರು ಯಾವುದೇ ಕ್ರೀಡೆಯಾದರೂ ಪರಿಶ್ರಮ ಮುಖ್ಯ ಕಠಿಣ ಅಭ್ಯಾಸದೊಂದಿಗೆ ನಿರ್ದಿಷ್ಟ ಗುರಿ ಇದ್ದಲ್ಲಿ ಯಶಸ್ಸು ಖಂಡಿತ. ಯಾವ ಕ್ರೀಡೆಯಲ್ಲಿ ಯಾರಿಗೆ ಇಷ್ಟ ಇದ್ದರೂ ಅದರಲ್ಲಿ ಕಠಿಣ ಅಭ್ಯಾಸ ಮಾಡಿದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ನಾನು ಈ ಕ್ರೀಡೆಯಲ್ಲಿ ಭಾಗವಹಿಸುವ ಕೆಲವು ದಿನಗಳ ಹಿಂದೆ ನನ್ನ ಆರೋಗ್ಯದಲ್ಲಿ ಏರು ಪೆರಾಗಿತ್ತು ದೇವರ ದಯೆ ಬೇಗ ಗುಣಮುಖನಾಗಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಸಫಲನಾದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶ್ರಮ ಪಟ್ಟು ದೇಶಕ್ಕಾಗಿ ಚಿನ್ನದ ಪದಕ ಗೆಲ್ಲಲು ಶ್ರಮಿಸುತ್ತೇನೆ.
ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ಭಾರತದ ಕ್ರೀಡಾಳುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಕ್ರೀಡಾಪಟುಗಳಿಗೆ ತೃಪ್ತಿತಂದಿದೆ ನನ್ನ ಪದಕವನ್ನು ನನ್ನ ಪತ್ನಿಗೆ ಸಮರ್ಪಿಸಿದ್ದೇನೆ ಎಂದರು.
ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಆಗಮಿಸಿದ ರಾಜ್ಯ ಸಭಾ ಸದಸ್ಯರು ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುರುರಾಜ್ ಪೂಜಾರಿ ಧನ್ಯವಾದ ಸಲ್ಲಿಸಿದರು.
ಕಾಮನ್ ವೆಲ್ತ್ ಗೇಮ್ಸ್-2022ರಲ್ಲಿ ಭಾರತೀಯ ವೇಟ್ ಲಿಫ್ಟರ್‌ಗಳ ತಂಡ ಪಾಲ್ಗೊಂಡಿದ್ದು, ಗುರುರಾಜ್ ಕಂಚು ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಗುರುರಾಜ್ ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದು, ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಗುರುರಾಜ್ ಒಟ್ಟು 249 ಕೆಜಿ(111+138) ಭಾರ ಎತ್ತಿ ಬೆಳ್ಳಿಯ ಪದಕ ಗೆದ್ದಿದ್ದಲ್ಲದೆ, ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಸಮಗಟ್ಟಿದರು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು, ಕಂಚಿನ ಪದಕ ಒಲಿಸಿಕೊಳ್ಳುವ ಮೂಲಕ ಎರಡನೇ ಬಾರಿ ದೇಶಕ್ಕಾಗಿ ಪದಕ ಗೆದ್ದು ತಂದಿದ್ದಾರೆ
 ನನಗೆ ಈ ಪದಕ ಗೆಲ್ಲಲು ಸ್ಫೂರ್ತಿಯಾಗಿ ನಿಂತ ದೇಶದ ಕರ್ನಾಟಕ ರಾಜ್ಯದ ಮತ್ತು ಉಡುಪಿ ಜಿಲ್ಲೆಯ ಹಾಗೂ ತನ್ನ ಜನ್ಮ ನೆಲ ಕುಂದಾಪುರದ  ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ
ಸ್ಪೋರ್ಟ್ಸ್ ಕನ್ನಡ ವೆಬ್ ವತಿಯಿಂದಲು ಕಂಚಿನ ಪದಕ ಗೆದ್ದು ತಂದ ಕುಂದಾಪುರದ ಕುವರ ಗುರುರಾಜ್ ಪೂಜಾರಿ ಅವರಿಗೆ ಶುಭಾಶಯಗಳು ನಿಮ್ಮ ಮುಂದಿನ ಕ್ರೀಡಾ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲಿ. ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ನೀವು ಚಿನ್ನಕ್ಕೆ ಕೊರಳೊಡ್ಡುವಂತಾಗಲಿ……

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

thirteen + eight =