ಕಲ್ಪತರು ನಾಡು ತಿಪಟೂರಿನಲ್ಲಿ “ಬಿ.ಎಸ್.ವೈ ಕಪ್”- ಕ್ಲಾಸಿಕ್ ಕ್ರಿಕೆಟರ್ಸ್ ಆಶ್ರಯದಲ್ಲಿ

ಕಲ್ಪತರು ನಾಡು ತಿಪಟೂರಿನಲ್ಲಿ “ಬಿ.ಎಸ್.ವೈ ಕಪ್”- ಕ್ಲಾಸಿಕ್ ಕ್ರಿಕೆಟರ್ಸ್ ಆಶ್ರಯದಲ್ಲಿ
ಕ್ಲಾಸಿಕ್ ಕ್ರಿಕೆಟರ್ಸ್ ತಿಪಟೂರು ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರಾದ ಎನ್.ಆರ್‌.ಸಂತೋಷ್,ಬಿ.ಸಿ.ನಾಗೇಶ್,ಲೋಕೇಶ್ವರ್ ಸಾರಥ್ಯದಲ್ಲಿ,ರಘು ಟಿ.ಎನ್,ವಾಸು ಪ್ರಕಾಶ್,ಶಿವ,ಚಿರಂತನ್,ಮೋಹನ್,ವಿಲಾಸ್,ಅಭಿ,ವರದಾ ಇವರೆಲ್ಲರ ಸಹಭಾಗಿತ್ವದಲ್ಲಿ ಜನವರಿ 15,16 ಮತ್ತು 17 ರಂದು ತಿಪಟೂರು ಕಲ್ಪತರು ಕ್ರೀಡಾಂಗಣ ತಿಪಟೂರಿನಲ್ಲಿ ಹೊನಲು ಬೆಳಕಿನ “ಬಿ.ಎಸ್.ವೈ ಕಪ್” ಪಂದ್ಯಾಕೂಟ ಆಯೋಜಿಸಲಾಗಿದೆ.
ತಿಪಟೂರು-ತುಮಕೂರು ಪರಿಸರದ 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಪ್ರತಿ ತಂಡದಲ್ಲಿ ರಾಜ್ಯದ ಪ್ರತಿಷ್ಠಿತ ತಂಡಗಳ 3 ಆಟಗಾರರು ಪ್ರತಿನಿಧಿಸಲಿದ್ದಾರೆ.
ಇದಲ್ಲದೇ ವಿಶೇಷವಾಗಿ ಬೆಂಗಳೂರು ಇಲೆವೆನ್ ಹಾಗೂ ರೆಸ್ಟ್ ಆಫ್ ಕರ್ನಾಟಕ ಇಲೆವೆನ್ ನಡುವೆ ಪಂದ್ಯವನ್ನು ಏರ್ಪಡಿಸಲಾಗಿದ್ದು,ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ವೀಕ್ಷಕ ವಿವರಣೆಯಲ್ಲಿ ಶಿವನಾರಾಯಣ್ ಐತಾಳ್ ಕೋಟ,ಪ್ರಶಾಂತ್ ಅಂಬಲಪಾಡಿ ಹಾಗೂ ರಾಘು ಮಟಪಾಡಿ ಸಹಕರಿಸಲಿದ್ದಾರೆ.

Leave a Reply

Your email address will not be published. Required fields are marked *