ಮಂಗಳೂರು, ಮಾ.13: ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಪ್ರೀಮಿಯರ್ ಲೀಗ್ 2023ರ ವಿಜೇತರಾಗಿ ಚಿಕ್ಕಮಗಳೂರು ಸೂಪರ್ ಕಿಂಗ್ಸ್ ಹೊರಹೊಮ್ಮಿದೆ
ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ (ರಿ) ಕಛೇರಿ, ಮಂಗಳೂರು ಇವರು ಶನಿವಾರ, ಮಾರ್ಚ್ 11 ಮತ್ತು ಭಾನುವಾರದಂದು ಮಂಗಳೂರಿನ ನೆಹರು ಮೈದಾನದಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗಾಗಿ ‘CBOA ಪ್ರೀಮಿಯರ್ ಲೀಗ್ 2023’ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದರು.
ಮುಖ್ಯ ಜನರಲ್ ಮ್ಯಾನೇಜರ್ ಜಯ ಕುಮಾರ್ ಬ್ಯಾಟಿಂಗ್ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು. ತದನಂತರ ಮಾತನಾಡಿದ ಅವರು ಈ ಟೂರ್ನಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಎಲ್ಲಾ ಕೆನರೈಟ್‌ಗಳಿಗೆ ಮನವಿ ಮಾಡಿದರು. ಪ್ರಾದೇಶಿಕ ವ್ಯವಸ್ಥಾಪಕ ಅಮೃತ್ ಮತ್ತು ವಿಭಾಗೀಯ ವ್ಯವಸ್ಥಾಪಕ ಗುರುದತ್ತ ಬಾಳಿಗಾ ಹಾಗೂ ಇತರೆ ನೌಕರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಡಿಕೇರಿ, ಹಾಸನ ,ಚಿಕ್ಕ ಮಗಳೂರು, ಪುತ್ತೂರು ,ಮಂಗಳೂರು ಮುಂತಾದ ಕಡೆಗಳಿಂದ ಸುಮಾರು 14 ತಂಡಗಳು ಭಾಗವಹಿಸಿದ್ದವು.
ಕೊನೆಯಲ್ಲಿ ಚಿಕ್ಕಮಗಳೂರು ಸೂಪರ್ ಕಿಂಗ್ಸ್ CBOA ಪ್ರೀಮಿಯರ್ ಲೀಗ್ 2023 ರ ವಿಜೇತರಾಗಿ ಹೊರಹೊಮ್ಮಿತು ಮತ್ತು ಪುತ್ತೂರು ಪರ್ಲ್ಸ್ ರನ್ನರ್ ಅಪ್ ಆಯಿತು.
ಸಮಾರೋಪ ಸಮಾರಂಭದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ವಿಜೇತರನ್ನು ಅಭಿನಂದಿಸಿದರು. ಕೆನರಾ ಬ್ಯಾಂಕ್ ನ ಹಿರಿಯ ಅಧಿಕಾರಿಗಳು ವಿಜೇತರಿಗೆ ಟ್ರೋಫಿ ಗಳನ್ನು ಹಂಚಿದರು.
ರಮೇಶ್ ನಾಯ್ಕ್ , ಇನ್ ಚಾರ್ಜ್ ಆಫ್ ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ (ರಿ) ಮಂಗಳೂರು ಇವರು ಹಾಗೂ ಇವರ ಸಂಗಡಿಗರು ಪಂದ್ಯಾಕೂಟವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ಬರಹಗಾರರು
ಸುರೇಶ್ ಭಟ್, ಮೂಲ್ಕಿ