ಕುಂದಾಪುರ-ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ) ಆಶ್ರಯದಲ್ಲಿ,2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮರಣಾರ್ಥ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ ಕುಂದಾಪುರದ ನಾರಾಯಣ ಗುರು ಎ.ಸಿ.ಹಾಲ್ ನಲ್ಲಿ ಜರುಗಿತು.
ದೀಪ ಬೆಳಗಿಸಿ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಡಿ.ವೈ.ಎಸ್.ಪಿ ಶ್ರೀಕಾಂತ್ ಮಾತನಾಡಿ “ಹಿರಿಯರು ಕಿರಿಯರೆಂಬ ವಯಸ್ಸಿನ ಭೇದವಿಲ್ಲದೆ ಆಡಬಹುದಾದ ಈ
ಚೆಸ್ ಆಟದಿಂದ ಮೆದುಳು ಚುರುಕು ಗೊಳ್ಳುತ್ತದೆ ಹಾಗೂ ಮಾನಸಿಕ,ಬೌದ್ಧಿಕ ಬೆಳವಣಿಗೆಗೆ ಇದು ಸಹಕಾರಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್ ಮಾತನಾಡಿ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಬಹಳಷ್ಟು ವರ್ಷಗಳಿಂದ ಹತ್ತು ಹಲವಾರು ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುತ್ತಾ ಬಂದಿದೆ.ಕ್ರೀಡಾಪಟುಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್.ಪೂಜಾರಿ,ಡಿಜಿಫ್ಲಿಕ್ ಇನ್ಷುರೆನ್ಸ್ ಕಂಪೆನಿಯ ಸಿ.ಇ.ಎ,ರಂಜನ್ ನಾಗರಕಟ್ಟೆ ಸಕ್ಸಸ್ಅಕಾಡೆಮಿಯ ಸಂಸ್ಥಾಪಕ ರಂಜನ್ ನಾಗರಕಟ್ಟೆ,ಉಡುಪಿ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಮಿತ್ ಕುಮಾರ್ ಶೆಟ್ಟಿ,ಚೀಫ್ ಆರ್ಬಿಟರ್ ವಸಂತ್.
ಬಿ.ಹೆಚ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಚೆಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅವನಿ ಆಚಾರ್ಯ ಉಡುಪಿ,ಪ್ರಗತಿ ನಾಯಕ್ ಬ್ರಹ್ಮಾವರ ಇವರನ್ನು ಸನ್ಮಾನಿಸ
ಲಾಯಿತು.ಈ ಚೆಸ್ ಪಂದ್ಯಾಟದಲ್ಲಿ ಭಾರತದ ಒಟ್ಟು 355 ಸ್ಪರ್ಧಿಗಳು ಭಾಗವಹಿಸುತ್ತಿದ್ದು ದಾಖಲೆಯ ಪುಟಗಳನ್ನು ಸೇರಲಿದೆ.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ,ಶಿವನಾರಾಯಣ ಐತಾಳ್ ಕೋಟ ಮತ್ತು ಸೌಂದರ್ಯ ಕಾರ್ಯಕ್ರಮ ನಿರೂಪಣೆಗೈದರು.