ಬೆಂಗಳೂರು-ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ಅಂಗ ಸಂಸ್ಥೆಯನ್ನು ಹೊಂದಿರುವ,ಸಮಾಜರತ್ನ,ಉದ್ಯಮ ರತ್ನ ಡಾ.ಗೋವಿಂದ ಬಾಬು ಪೂಜಾರಿ ಬೈಂದೂರು ಇವರ ಒಡೆತನದ “ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿ” ತಮ್ಮ ಕಂಪೆನಿಯ ನೌಕರರಿಗಾಗಿ ಜನವರಿ 7 ಮತ್ತು 8 ರಂದು2 ದಿನಗಳ ಶೆಫ್ ಟಾಕ್ ಪ್ರೀಮಿಯರ್ ಲೀಗ್ ಪಂದ್ಯಾಟ ಆಯೋಜಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೇಲಿಯಂಟ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ ಶ್ರೀಯುತ ಗೋವಿಂದ ಬಾಬು ಪೂಜಾರಿಯವರ ಒಡೆತನದ ಉದ್ಯಮ ಸಂಸ್ಥೆಗಳಾದ ಪ್ರಗ್ನ್ಯಾ ಸಾಗರ್,ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್, ಮತ್ಸ್ಯ ಲೋಕ,ಶೆಫ್ ಟಾಕ್ ನ್ಯೂಟ್ರಿಫುಡ್ ಪ್ರೈ.ಲಿ,ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್(ನಿ) ಉಪ್ಪುಂದ ಮತ್ತು ಶ್ರೀಯುತ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ(ಲಿ) ಹೀಗೆ ಒಟ್ಟು 6 ತಂಡಗಳು,ನೂರಾರು ಮಂದಿ ನೌಕರರು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.