ಶೆಫ್ ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವಿಸಸ್ಸ್ ಪ್ರೈ.ಲಿ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿ,ಹಲವು ರಾಜ್ಯಗಳಲ್ಲಿ ಅಂಗ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ,ಸಮಾಜಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರು ತಮ್ಮ ಸಂಸ್ಥೆಗಳಲ್ಲಿ ದಿನಂಪ್ರತಿ ದುಡಿಯುವ ನೌಕರರಿಗಾಗಿ 2 ನೇ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ.
ಬೆಂಗಳೂರು ಕೂಡ್ಲುಗೇಟ್ ಸಮೀಪದ ಮೈದಾನದಲ್ಲಿ ಡಿಸೆಂಬರ್ 25 ರಂದು 60 ಗಜಗಳ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದ್ದು,ಗೋವಿಂದ ಬಾಬು ಪೂಜಾರಿ ಇವರ ಒಡೆತನದ 8 ಸಂಸ್ಥೆಗಳ ಆಟಗಾರರು ಭಾಗವಹಿಸಲಿದ್ದು ಆ ತಂಡಗಳ ವಿವರ ಈ ಕೆಳಗಿನಂತಿದೆ.
1)ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ
2)ಮತ್ಸ್ಯ ಬಂಧನ ಪ್ರೈ.ಲಿಮಿಟೆಡ್
3)ಪ್ರಗ್ನ್ಯಾ ಸಾಗರ(ಹೋಟೆಲ್ಸ್&ರೆಸಾರ್ಟ್ಸ್)
4)ಶೆಫ್ ಟಾಕ್ ನ್ಯೂಟ್ರಿಫುಡ್ ಪ್ರೈ.ಲಿಮಿಟೆಡ್
5)ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್
6)ಮತ್ಸ್ಯ ಲೋಕ
7)ಫೆಲಿಜ್ ನ್(FELIZ N)
8)ಇಂದಿರಾ ಕ್ಯಾಂಟೀನ್
ವಿಶೇಷ ಆಕರ್ಷಣೆ ಎಂಬಂತೆ ರಾಜ್ಯದ ಪ್ರಸಿದ್ಧ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ
ನಿರ್ಣಾಯಕರಾಗಿ ಹಾಗೂ ವೀಕ್ಷಕ ವಿವರಣೆ ನೀಡಲಿದ್ದಾರೆ.