ಕ್ರೀಡಾಲೋಕದಲ್ಲಿ ಮಿಂಚಿ ಮರೆಯಾದ ನಕ್ಷತ್ರ ದಿ.ಪ್ರತಾಪ್ಚಂದ್ರ ಹೆಗ್ಡೆ ಸ್ಮರಣಾರ್ಥ ಕುಂದಾಪುರದ ಗಾಂಧಿ ಮೈದಾನದಲ್ಲಿ ಏಪ್ರಿಲ್ 2,3 ಮತ್ತು 4 ರಂದು ನಡೆದ ಐತಿಹಾಸಿಕ “ಲೆಜೆಂಡ್ಸ್ ಕಪ್-2021” ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ಜಯಿಸಿದೆ.
ಕರ್ನಾಟಕ ರಾಜ್ಯ ಟೆನ್ನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಕಳೆದ 2.5 ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕರಾದ ಕೋಟ
ರಾಮಕೃಷ್ಣ ಆಚಾರ್ ಇವರ ಸಾರಥ್ಯದಲ್ಲಿ ರಾಜ್ಯ ಮಟ್ಟದ ಲೆಜೆಂಡ್ಸ್ ಕಪ್-2021 ಪ್ರಥಮ ಪ್ರಯೋಗ ರೂಪದಲ್ಲಿ ಆಯೋಜಿಸಿದ್ದರು.
ಹಿರಿಯ ಕ್ರಿಕೆಟಿಗರನ್ನು ಒಗ್ಗೂಡಿಸಿ ಟೆನ್ನಿಸ್ಬಾಲ್ ಕ್ರಿಕೆಟ್ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಸದುದ್ದೇಶದಿಂದ,
ಟೆನ್ನಿಸ್ಬಾಲ್ ಕ್ರಿಕೆಟ್ ಅಧ್ಯಾಯದ ಪುಟಗಳಲ್ಲೇ ಅಚ್ಚಳಿಯದ ಇತಿಹಾಸ ಬರೆದ ರಾಜ್ಯದ ಪ್ರಸಿದ್ಧ 24 ತಂಡಗಳು ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಿತ್ತು.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಕೂಟ ಸಾಗಿದ್ದು,ಎಲ್ಲಾ ಪಂದ್ಯಗಳು ಕೂಡ ರೋಚಕವಾಗಿ ಸಾಗಿತ್ತು.ಅಂತಿಮವಾಗಿ
ಚಕ್ರವರ್ತಿ ಕುಂದಾಪುರ ತಂಡ ಪ್ರತಿಷ್ಠಿತ ಪಡುಬಿದ್ರಿ ತಂಡವನ್ನು ಹಾಗೂ ಬೆಂಗಳೂರಿನ ಲಾಸ್ಟ್ ಟೈಮ್ ವಿನ್ನರ್ಸ್ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ಸ್ ಪ್ರವೇಶಿಸಿದ್ದರು.
*ಗಾಂಧಿ ಮೈದಾನದಲ್ಲಿ ವಿಜೃಂಭಿಸಿದ ಚಕ್ರವರ್ತಿ ಕುಂದಾಪುರ.*
ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚಕ್ರವರ್ತಿ ಕುಂದಾಪುರ 2 ಓವರ್ ಗಳಲ್ಲಿ 19 ರನ್ ಗಳಿಸಿತ್ತು.ಚೇಸಿಂಗ್ ವೇಳೆ ಎಡವಿದ ಲಾಸ್ಟ್ ಟೈಮ್ ವಿನ್ನರ್ಸ್ ತಂಡ 2 ಓವರ್ ಗಳಲ್ಲಿ 16 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತ್ತು.
ಚಾಂಪಿಯನ್ಸ್ ಚಕ್ರವರ್ತಿ ಕುಂದಾಪುರ ಲೆಜೆಂಡ್ಸ್ ಕಪ್ ಟ್ರೋಫಿಯೊಂದಿಗೆ 1 ಲಕ್ಷ ನಗದು,ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಕ್ರಮವಾಗಿ ಫೈನಲ್ ನ ಪಂದ್ಯಶ್ರೇಷ್ಟ ಚಕ್ರವರ್ತಿಯ ಸೂರಿ ಸಾಸ್ತಾನ, ಬೆಸ್ಟ್ ಬ್ಯಾಟ್ಸ್‌ಮನ್ ಅರ್ಧಶತಕ ಸಹಿತ ರನ್ ಗಳ ಹೊಳೆ ಹರಿಸಿದ ಮನೋಜ್ ನಾಯರ್,
ಬೆಸ್ಟ್ ಬೌಲರ್ ಪಡುಬಿದ್ರಿ ಫ್ರೆಂಡ್ಸ್ ನ ರಶೀದ್,ಬೆಸ್ಟ್ ಫೀಲ್ಡರ್ ಫ್ರೆಂಡ್ಸ್ ಬೆಂಗಳೂರಿನ ಗಿರೀಶ್,ಬೆಸ್ಟ್ ಕೀಪರ್ ಲಾಸ್ಟ್ ಟೈಮ್ ವಿನ್ನರ್ಸ್ ನ ರಾಜೇಶ್,ಸರಣಿ ಶ್ರೇಷ್ಠ ಪ್ರಶಸ್ತಿಯನ್ನು
ಲಾಸ್ಟ್ ಟೈಮ್ ವಿನ್ನರ್ಸ್ ನ ಪ್ರದೀಪ್ ಹಾಗೂ ಚಕ್ರವರ್ತಿಯ ಸರ್ಫರಾಜ್ ಜಂಟಿಯಾಗಿ ಪಡೆದುಕೊಂಡರು.
ಸ್ವಾಮಿ ಗಂಗೊಳ್ಳಿ ಶಿಸ್ತುಬದ್ಧ ತಂಡ ಗೌರವಕ್ಕೆ ಪಾತ್ರರಾದರು.
ಸಮಾರೋಪ ಸಮಾರೋಪದ ಅಧ್ಯಕ್ಷತೆಯನ್ನು ವಹಿಸಿದ ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ಕೆ.ಪಿ.ಸಿ.ಸಿ ಸದಸ್ಯರು ಪಿ.ಎನ್.ಕೃಷ್ಣಮೂರ್ತಿಯವರು ಮಾತನಾಡಿ ಹಲವು ವರ್ಷಗಳ ಬಳಿಕ ಕುಂದಾಪುರದಲ್ಲಿ ಆಡಿದ ನೆನಪನ್ನು ಹಂಚಿಕೊಂಡರು.ಗುರೂಜಿ ಡಾ.ಶ್ರೀ.ಮಹೇಂದ್ರ ಭಟ್ ಆಶೀರ್ವಚನ ನಡೆಸಿದರು.ಈ ಸಂದರ್ಭ ದಿ.ಪ್ರತಾಪ್ಚಂದ್ರ ಹೆಗ್ಡೆ ಧರ್ಮಪತ್ನಿ ವೇದಾವತಿ ಹೆಗ್ಡೆ,ಪುತ್ರಿ ಅರುಂಧತಿ.ಪಿ.ಹೆಗ್ಡೆ, ಸಿಲ್ಲಿ ಲಲ್ಲಿ ಖ್ಯಾತಿಯ ಚಲನಚಿತ್ರ ನಟಿ ಮಂಜುಭಾಷಿಣಿ,
ಹಿರಿಯ ಆಟಗಾರರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,
ಕೋಲಾರ ಶ್ರೀನಿವಾಸಪುರದ ಸಮಾಜ ಸೇವಕಿ ಹಾಗೂ ಸ್ಟಾರ್ ವರ್ಟೆಕ್ಸ್ ಕಂಪೆನಿಯ ಮಾಲಕಿ ಗಾಯತ್ರಿ ಮುತ್ತಪ್ಪ,
ಮಾನವ ಹಕ್ಕು ಮತ್ತು ಭೃಷ್ಟಾಚಾರ ವಿರೋಧಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ.ಪ್ರಸನ್ನಕುಮಾರ್,
ಶರತ್ ಶೆಟ್ಟಿ ಪಡುಬಿದ್ರಿ, ಗೌತಮ್ ಶೆಟ್ಟಿ
ಟೊರ್ಪೆಡೋಸ್, ಶ್ರೀಪಾದ ಉಪಾಧ್ಯಾಯ ಚಕ್ರವರ್ತಿ,ವಿಕ್ರಮ್ ಬೈಂದೂರಿನ ಗೌರವಾಧ್ಯಕ್ಷ ಗಿರೀಶ್ ಬೈಂದೂರು,ಗುರುಬ್ರಹ್ಮ ತಂಡದ ಹಿರಿಯ ಆಟಗಾರ ಜಗದೀಶ್ ಬೆಂಗಳೂರು,ಪಿ.ಎನ್.ಕೃಷ್ಣಮೂರ್ತಿ ಕುಟುಂಬ,ಗಣೇಶ್ ನಾವಡ ಪಡುಕೋಣೆ,ಶಾಕಿರ್ ಹುಸೇನ್ ಅಸಾದಿ,ಯಾದವ್ ನಾಯಕ್ ಪ್ಯಾರಡೈಸ್ ಬನ್ನಂಜೆ, ಪ್ರವೀಣ್ ಕುಮಾರ್ ಉಡುಪಿ,ಕೋಟ ರಾಮಕೃಷ್ಣ ಆಚಾರ್ ಮತ್ತು ಸ್ಪೋರ್ಟ್ಸ್ ಕನ್ನಡ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ
ಪಿ.ಎನ್.ಕೃಷ್ಣಮೂರ್ತಿಯವರ ಮೂಲಕ ವಿಶೇಷವಾಗಿ
ದಿ.ಪ್ರತಾಪ್ಚಂದ್ರ ಹೆಗ್ಡೆಯವರ ಧರ್ಮಪತ್ನಿ ವೇದಾವತಿ ಹೆಗ್ಡೆ,ಪುತ್ರಿ ಅರುಂಧತಿ.ಪಿ.ಹೆಗ್ಡೆ ಇವರನ್ನು ಹಾಗೂ ಕುಂದಾಪುರದ ಕ್ರಿಕೆಟ್ ಕ್ಷೇತ್ರದ ಮೂರು ಮಾಣಿಕ್ಯ ಶ್ರೀಪಾದ ಉಪಾಧ್ಯಾಯ,ಗೌತಮ್ ಶೆಟ್ಟಿ, ಮನೋಜ್ ನಾಯರ್ ಇವರ ಜೊತೆಯಾಗಿ ಶಿವನಾರಾಯಣ್ ಐತಾಳ್ ಕೋಟ ಹಾಗೂ ಪ್ರಶಾಂತ್ ಅಂಬಲಪಾಡಿ,ಗಂಗಾಧರ ಆಚಾರ್,ಕೆ.ಪಿ.ಸತೀಶ್,ಚಮಕ್ ರವಿ,ಜಗದೀಶ್ ಗುರುಬ್ರಹ್ಮ,ಪ್ರದೀಪ್ ವಾಜ್,ನಾರಾಯಣ ಶೆಟ್ಟಿ, ಶಾಕಿರ್ ಹುಸೇನ್,ರಾಜೇಶ್ ಆಚಾರ್ ಬೈಂದೂರು ಮತ್ತು ಕೋಟ ರಾಮಕೃಷ್ಣ ಆಚಾರ್
ಇವರನ್ನು ಸನ್ಮಾನಿಸಲಾಯಿತು.
ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಅಶೋಕ್ ಬಾಳಿಗ ಇವರನ್ನು ಗೌರವಿಸಲಾಯಿತು.
ಸಹಸ್ರಾರು ಕ್ರೀಡಾ ಪ್ರೇಮಿಗಳು ಮೈದಾನದಲ್ಲಿ ಬಂದು ಪಂದ್ಯಾಟವನ್ನು ವೀಕ್ಷಿಸಿ 80,90 ರ ದಶಕದ ತಮ್ಮ ಅಚ್ಚುಮೆಚ್ಚಿನ ಆಟಗಾರರನ್ನು ಭೇಟಿ ಮಾಡಿದರೆ,
1.5 ಲಕ್ಷಕ್ಕೂ ಅಧಿಕ ಮಂದಿ M.Sports ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಿದರು.ಲೆಜೆಂಡ್ಸ್ ಕಪ್ ಪಂದ್ಯಾವಳಿಯ ಸಂದರ್ಭ M.Sports ತನ್ನ 75,000 ಸಬ್ಸ್ಕ್ರೈಬರ್ ಪಡೆಯುವ ಮೂಲಕ ದಾಖಲೆ ಬರೆಯಿತು…
1.5 ಲಕ್ಷಕ್ಕೂ ಅಧಿಕ ಮಂದಿ M.Sports ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಿದರು.ಲೆಜೆಂಡ್ಸ್ ಕಪ್ ಪಂದ್ಯಾವಳಿಯ ಸಂದರ್ಭ M.Sports ತನ್ನ 75,000 ಸಬ್ಸ್ಕ್ರೈಬರ್ ಪಡೆಯುವ ಮೂಲಕ ದಾಖಲೆ ಬರೆಯಿತು…