ಚಮಕ್ ಕ್ರಿಕೆಟರ್ಸ್ ಅರಸೀಕೆರೆ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರು,ಸಲೀನ ಟ್ರಾನ್ಸ್‌ಪೋರ್ಟ್ ನ ಮಾಲೀಕರಾದ ಸಲ್ಲವುದ್ದೀನ್ ಸಲ್ಮಾನ್ ಇವರ ದಕ್ಷ ಸಾರಥ್ಯದಲ್ಲಿ,ಹೆಚ್.ರಿಯಾಜ್ ಅಹಮ್ಮದ್,ಶ್ರೀಧರ್ ಹಇವರ ಸ್ಮರಣಾರ್ಥವಾಗಿ ಫೆಬ್ರವರಿ 19,20 ಮತ್ತು 21ರಂದುರಾಜ್ಯಮಟ್ಟದ ಚಮಕ್ ಕಪ್-2021 ಅರಸೀಕೆರೆ ರೈಲ್ವೇ ಮೈದಾನದಲ್ಲಿ ಆಯೋಜಿಸಲಾಗಿದೆ.
ರಾಜ್ಯದ ಬಲಿಷ್ಠ ತಂಡಗಳ ನಡುವಿನ ಹಣಾಹಣಿಯ ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ,ದ್ವಿತೀಯ ಸ್ಥಾನಿ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆವ ಆಟಗಾರ ದುಬಾರಿ ದ್ವಿಚಕ್ರ ವಾಹನ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.
ಫೆಬ್ರವರಿ 21 ರಂದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಂದ್ಯಾಕೂಟಕ್ಕೆ ಆಗಮಿಸಲಿದ್ದಾರೆ.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.