ಕುಂದಾಪುರ-ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಚಾಲೆಂಜ್ ಟ್ರೋಫಿ ಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡದ ನಂಬುಗೆಯ ಬ್ಯಾಟರ್,ವಿಪರೀತ ಪಾದ ಬೇನೆಯ ನಡುವೆಯೂ ಸಿಡಿದ ರಾಕರ್ಸ್ ನವೀನ್ ,ಎದುರಾಳಿ ನ್ಯಾಶ್ ಬೆಂಗಳೂರಿನ ಪುರುಷಿ ಸ್ಪೆಲ್ ನಲ್ಲಿ 3 ಸಿಕ್ಸರ್ ಸಿಡಿಸುವುದರ ಮೂಲಕ,ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ಪಡೆ ಸತತ ಎರಡನೇ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಮಳೆಯ ನಡುವೆಯೂ ಮುಂದುವರಿದ ಫೈನಲ್
ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪ್ರಕೃತಿ ನ್ಯಾಶ್ 6 ಪವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿ ಪೈಪೋಟಿಯ ಗುರಿಯನ್ನು ಫ್ರೆಂಡ್ಸ್ ಗೆ ನೀಡಿತ್ತು.
ಇದಕ್ಕುತ್ತರವಾಗಿ ಫ್ರೆಂಡ್ಸ್ ಬೆಂಗಳೂರು ಮೊದಲ 3 ಓವರ್ ಗಳಲ್ಲಿ 19 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರ ವಿಕೆಟ್ ಕಳೆದುಕೊಂಡಿತ್ತು.ತದ ನಂತರ ಕ್ರೀಸ್ ಗೆ ಆಗಮಿಸಿದ ಗಿಳಿಯಾರು ನಾಗ ತಾನೆದುರಿಸಿದ ಮೊದಲ ಎಸೆತದಲ್ಲೇ ಮನಮೋಹಕ ಬೌಂಡರಿ ದಾಖಲಿಸಿದರು.4 ಓವರ್ ನ ಎಸೆಯಲು ಬಂದ ನ್ಯಾಶ್ ಟ್ರಂಪ್ ಕಾರ್ಡ್ ಪುರುಷಿ ಎಸೆತದಲ್ಲಿ ಆರ್ಭಟಿಸಿದ ನವೀನ್ 3 ಅದ್ಭುತ ಸಿಕ್ಸರ್ ಸಿಡಿಸುವ ಮೂಲಕ 6 ಎಸೆತಗಳಲ್ಲಿ 20 ರನ್ ಸಿಡಿಸಿ ಫ್ರೆಂಡ್ಸ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಇದಕ್ಕೂ ಮುನ್ನ ಸೆಮಿಫೈನಲ್ ಕಾಳಗದಲ್ಲಿ ಫ್ರೆಂಡ್ಸ್ ಬೆಂಗಳೂರು ಯುನೈಟೆಡ್ ಚಾಲೆಂಜರ್ಸ್ ತಂಡವನ್ನು ಹಾಗೂ ಪ್ರಕೃತಿ ನ್ಯಾಶ್, ರಿಯಲ್ ಫೈಟರ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದಿದ್ದರು.
*ಸಾಗರ್ ಭಂಡಾರಿ ಸರಣಿ ಶ್ರೇಷ್ಠ*
ಲೀಗ್ ಹಂತದಿಂದ ತಾನಾಡಿದ ಎಲ್ಲಾ ಪಂದ್ಯಗಳಲ್ಲಿ ಶ್ರೇಷ್ಠ ಸವ್ಯಸಾಚಿ ಪ್ರದರ್ಶನ ನೀಡಿದ ಸಾಗರ್ ಭಂಡಾರಿ ಅರ್ಹವಾಗಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿ ಆಕರ್ಷಕ ಟಿ.ವಿ.ಎಸ್ ದ್ವಿಚಕ್ರ ವಾಹನವನ್ನು ತನ್ನದಾಗಿಸಿಕೊಂಡರು.ನವೀನ್ ಫೈನಲ್ ಪಂದ್ಯಶ್ರೇಷ್ಟ,ಪ್ರಕೃತಿ ನ್ಯಾಶ್ ಪ್ರವೀಣ್ ಗೌಡ ಬೆಸ್ಟ್ ಬೌಲರ್,ಅದೇ ತಂಡದ ಪ್ರಶಾಂತ್ ಕುಟ್ಟಿ ಬೆಸ್ಟ್ ಬ್ಯಾಟರ್ ಮತ್ತು ಯುನೈಟೆಡ್ ಚಾಲೆಂಜರ್ಸ್ ಸಂಪತ್ ಬೈಲಾಕೆರೆ ಶ್ರೇಷ್ಠ ವಿಕೆಟ್ ಕೀಪರ್ ಬಹುಮಾನ ಪಡೆದುಕೊಂಡರು.
ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರದ ಕಪ್ತಾನ ಶ್ರೀಪಾದ ಉಪಾಧ್ಯಾಯ,ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರರಾದ ಸತೀಶ್ ಕುಂದರ್,ಕ್ರಿಕೆಟ್ ಪಟು ಉದ್ಯಮಿ ಸತೀಶ್ ಕೋಟ್ಯಾನ್, ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಫ್ರೆಂಡ್ಸ್, ರೇಣು ಗೌಡ ಫ್ರೆಂಡ್ಸ್ ಬೆಂಗಳೂರು,ಮನೋಜ್ ನಾಯರ್, ನಾಗೇಶ್ ನಾವಡ 2ಕೆ ಕಲರ್ ಗ್ಲೋಬ್, ರವೀಂದ್ರ ತೋಳಾರ್,
ಕೋಟ ರಾಮಕೃಷ್ಣ ಆಚಾರ್,ಉದಯ್ ಕುಮಾರ್ ಕೆನರಾ ರೆಫ್ರಿಜರೇಟರ್ ಉಡುಪಿ,ಪ್ರದೀಪ್ ವಾಜ್ ಚಕ್ರವರ್ತಿ ಕ್ರಿಕೆಟರ್ಸ್,ಉದ್ಯಮಿ ಸಂತೋಷ್ ಶೆಟ್ಟಿ ನಾಲ್ಕುದ್ರು,ರವೀಂದ್ರ ಹೆಗ್ಡೆ ಜಾನ್ಸನ್ ಕುಂದಾಪುರ,
ರಂಜಿತ್ ಶೆಟ್ಟಿ ಚಕ್ರವರ್ತಿ,ಚಾಲೆಂಜ್ ಚಂದ್ರ ಭಾಗವಹಿಸಿದರು.
ಆದಿತ್ಯವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಯಶಪಾಲ್ ಸುವರ್ಣ,ನ್ಯೂ ಮೆಡಿಕಲ್ ಸೆಂಟರ್ ಡಾ.ರಂಜನ್,ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್, ಜಪ್ತಿ ಪ್ರಥಮ್ ಇನ್ ರೆಸಾರ್ಟ್ ಮರತ್ತೂರು ಸುರೇಶ್ ಶೆಟ್ಟಿ,ಸಿವಿಲ್ ಕಂಟ್ರಾಕ್ಟರ್ ಸಚಿತ್ ಪೈ,ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೃಷ್ಣೇ ಗೌಡ್ರು,ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಸಂಸ್ಥಾಪಕರು ಡಾ.ಗೋವಿಂದ ಬಾಬು ಪೂಜಾರಿ,ಹೈಟೆಕ್ ಹಾಸ್ಪಿಟಲ್ ಉಡುಪಿ ನ್ಯೂರೋ ಸರ್ಜನ್ ಡಾ.ವಿನೋದ್,ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಉಡುಪಿ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಚಾಲೆಂಜ್ ಚಂದ್ರ,ಪಂದ್ಯಾಟ ಸಮಿತಿಯ ಪದಾಧಿಕಾರಿಗಳು,ತಂಡದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಕ್ರೀಡಾ ಪ್ರೋತ್ಸಾಹಕರು,ಹಿರಿಯ ಆಟಗಾರರು ಮತ್ತು ಸಾಧಕರನ್ನು ಗೌರವಿಸಲಾಯಿತು.
M.ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಲಕ್ಷಾಂತರ ಪಂದ್ಯಾಟವನ್ನು ವೀಕ್ಷಿಸಿದರು.
ಶಿವನಾರಾಯಣ ಐತಾಳ್ ಕೋಟ,ವಿನಯ್ ಉದ್ಯಾವರ,ಪ್ರಶಾಂತ್ ಅಂಬಲಪಾಡಿ,ಅಜಯ್ ರಾಜ್ ಮತ್ತು ಅರವಿಂದ ಮಣಿಪಾಲ್ ವೀಕ್ಷಕ ವಿವರಣೆ ವಿಭಾಗದಲ್ಲಿ ಸಹಕರಿಸಿದರು.ಕೆ.ಪಿ.ಸತೀಶ್ ವಂದಿಸಿದರು.