ಚಾಲೆಂಜ್ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಅದ್ಧೂರಿಯ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಚಾಲೆಂಜ್ ಕಪ್-2022 ಆಯೋಜಿಸಲಾಗಿದೆ.
ಡಿಸೆಂಬರ್ 9,10 ಮತ್ತು 11 ರಂದು ಕುಂದಾಪುರದ
ಗಾಂಧಿಮೈದಾನದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಮುಂಬಯಿ,ಗೋವಾ, ಕೇರಳ,ಚೆನ್ನೈ ಮತ್ತು ಕರ್ನಾಟಕ ಸೇರಿದಂತೆ ಒಟ್ಟು 24 ತಂಡಗಳು ಭಾಗವಹಿಸಲಿದೆ,ಈ ರಾಷ್ಟ್ರೀಯ ಮಟ್ಟದ ಪಂದ್ಯಾಟದ ಪ್ರಥಮ ಬಹುಮಾನ 3,03,333 ರೂ ನಗದು ಮತ್ತು ದ್ವಿತೀಯ ಬಹುಮಾನ 2,02,222 ರೂ ನಗದು ಸಹಿತ ಮಿನುಗುವ ಟ್ರೋಫಿಗಳು ಮತ್ತು ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ
ಎಂದು ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಚಾಲೆಂಜ್ ಚಂದ್ರ ಮತ್ತು ಕೆ.ಪಿ.ಸತೀಶ್ ಸ್ಪೋರ್ಟ್ಸ್ ಕನ್ನಡ ಸುದ್ದಿವಾಹಿನಿಗೆ ತಿಳಿಸಿದ್ದಾರೆ.