ಬೆಂಗಳೂರು-ಇತ್ತೀಚೆಗಷ್ಟೇ ಕುಂದಾಪುರದ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿದ ರಾಜ್ಯದ ಯಶಸ್ವಿ ತಂಡಗಳಲ್ಲೊಂದಾದಚಾಲೆಂಜ್ ಕ್ರಿಕೆಟ್ ಕ್ಲಬ್ ಕುಂದಾಪುರ ಇವರ ವತಿಯಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮತ್ತು ಭೃಷ್ಟಾಚಾರ ನಿರ್ಮೂಲನ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ,ಶ್ರೀ ಬೆಂಗಳೂರು ತಂಡದ ಕಪ್ತಾನರಾದಶ್ರೀಯುತ ಡಾ.ಆರ್.ಪ್ರಸನ್ನ ಕುಮಾರ್ ಇವರನ್ನು ಜಾಲಹಳ್ಳಿ ಕೃಷ್ಣಚಂದ್ರ ಕನ್ವೆನ್ಷನ್ ಸೆಂಟರ್ ನ ಪಿ.ಎನ್.ಕೃಷ್ಣಮೂರ್ತಿ ಇವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ಕ್ರೀಡಾಪಟು ಮತ್ತು ಕ್ರೀಡಾ ಪ್ರೋತ್ಸಾಹಕರಾದ ಶ್ರೀಯುತ ಪಿ.ಎನ್.ಕೃಷ್ಣಮೂರ್ತಿ,
ಚಾಲೆಂಜ್ ಟ್ರೋಫಿ ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷರಾದ ಪ್ರವೀಣ್ ಗಡಿಯಾರ್,ಕಾರ್ಯದರ್ಶಿ ಕೆ.ಪಿ.ಸತೀಶ್,ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಡಿಸೆಂಬರ್ ನಲ್ಲಿ ನಡೆದ ಚಾಲೆಂಜ್ ಟ್ರೋಫಿ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಡಾ.ಆರ್.ಪ್ರಸನ್ನ ಕುಮಾರ್ ಇವರು ತುರ್ತು ಸಭೆಯ ಕಾರಣದಿಂದ ಗೈರು ಹಾಜರಾಗಿದ್ದರು.