ತುಮಕೂರು-ಚಕ್ರವರ್ತಿ ಗೆಳೆಯರ ಬಳಗ ತುಮಕೂರು ಇವರ ಆಶ್ರಯದಲ್ಲಿ,ತುಮಕೂರಿನ ಕ್ರೀಡಾಪಟು ಹಾಗೂ ಕ್ರೀಡಾ ಸಂಘಟಕ ಪ್ರಕಾಶ್ ಟಿ.ಸಿ ಸಾರಥ್ಯದಲ್ಲಿ,ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರ ಸವಿನೆನಪಿಗಾಗಿ,ತುಮಕೂರಿನಲ್ಲಿ ಆಯೋಜಿಸಲಾದ 5 ನೇ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಬೆಂಗಳೂರು ಮತ್ತು ಮೈಟಿ ಸ್ಮೈಲ್ ಸೆಮಿಫೈನಲ್ ಪ್ರವೇಶಿಸಿದೆ.
32 ತಂಡಗಳು ಭಾಗವಹಿಸಿದ ಈ ಪಂದ್ಯಾಟದ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ರಾಕರ್ಸ್ ನವೀನ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಜಾನ್ಸನ್ ಕುಂದಾಪುರ ತಂಡವನ್ನು ಸೋಲಿಸಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
ದ್ವಿತೀಯ ಕ್ವಾರ್ಟರ್ ಫೈನಲ್ ನಲ್ಲಿ ಮೈಟಿ ಸ್ಮೈಲ್ ನ ಆರಂಭಿಕ ಆಟಗಾರ ಮುರಳಿ ಬ್ಯಾಟಿಂಗ್ ಅಬ್ಬರದ ಮುಂದೆ ಎದುರಾಳಿ ರಾಕ್ 2 ತುಮಕೂರಿನ ತಂಡ ಗೆಲುವಿನ ಕನಸು ನುಚ್ಚು ನೂರಾಯಿತು.
ಎರಡನೇ ತಂಡವಾಗಿ ಮೈಟಿ ಸ್ಮೈಲ್ ಸೆಮಿಫೈನಲ್ ಪ್ರವೇಶಿಸಿದೆ.
ಮೂರನೇ ಕ್ವಾರ್ಟರ್ ಫೈನಲ್ ಇದೀಗ ಚಕ್ರವರ್ತಿ ತುಮಕೂರು ಮತ್ತು ಪವರ್ ಆಫ್ ಯೂತ್ ನಡುವೆ ಹಾಗೂ ಅಂತಿಮ ಕ್ವಾರ್ಟರ್ ಫೈನಲ್ ನಲ್ಲಿ ನ್ಯಾಶ್ ಬೆಂಗಳೂರು- ಹಾಸನಾಂಬಾ ತಂಡವನ್ನು ಎದುರಿಸಲಿದೆ.
ಈ ರಾಷ್ಟ್ರೀಯ ಮಟ್ಟದ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 3 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ 1.5 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.