ರಾಜೀವ್ ಹನು ಕನ್ನಡ ಚಿತ್ರರಂಗದ ಪ್ರಮುಖ ನಟ. ಬಾಲ್ಯದಲ್ಲಿ, ಅವರು ಅನೇಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಶಾಲಾ ಕ್ರೀಡಾ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ರಾಜೀವ್ ಫಿಟ್ನೆಸ್ ಉತ್ಸಾಹಿ. ಅವರು ತನ್ನ ದಿನವನ್ನು ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಮೂಲಕ ಪ್ರಾರಂಭಿಸುತ್ತಿದ್ದರು. 2006 ರಲ್ಲಿ ಶ್ರೀ ರೇಣು ಗೌಡರು ಬೆಂಗಳೂರಿನ ಟೀಮ್ ಫ್ರೆಂಡ್ಸ್ ಬೆಂಗಳೂರಿನಲ್ಲಿ ಅವರನ್ನು ಕ್ರಿಕೆಟ್‌ಗೆ ಪರಿಚಯಿಸಿ ಅಂದಿನಿಂದ ರಾಜೀವ್ ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಹಿಂತಿರುಗಲಿಲ್ಲ.
ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ರೇಣು ಗೌಡರ ಮಾಲೀಕತ್ವದ ಬಲಿಷ್ಠ ಫ್ರೆಂಡ್ಸ್ ಬೆಂಗಳೂರು ತಂಡದ ಬಲಾಢ್ಯ ಬ್ಯಾಟಿಂಗ್ ಅಸ್ತ್ರವಾಗಿ ಆ ತಂಡವನ್ನು ಕೂಡ ಪ್ರತಿನಿಧಿಸಿದರು. ಪಡುಬಿದ್ರಿಯಲ್ಲಿ ನಡೆದ ವೆಂಕಟೇಶ್ ಟ್ರೋಫಿ 2016ರಲ್ಲಿ ಶರತ್ ಶೆಟ್ಟಿಯವರು ರಾಜೀವ್ ಗೆ ಅಭಿನಂದನೆ ಸಲ್ಲಿಸಿ ಗೌರವಿಸಿದ್ದರು. ಎಂಪಿಎಲ್ ಮಂಗಳೂರು ಪ್ರೀಮಿಯರ್ ಲೀಗ್ ನಲ್ಲಿ ಬೆದ್ರ ಬುಲ್ಸ್ ಟೀಮ್‌ನ ಪರವಾಗಿ ಆಡಿದ ಸ್ಟಾರ್ ಪ್ಲೇಯರ್ ರಾಜೀವ್ ಹನು.
ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಸುದೀಪ್ ಅವರು ರಾಜೀವ್ ಅವರನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಪರಿಚಯಿಸಿದರು. ಜನಪ್ರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ( CCL)ನ ಭಾಗವಾಗಿದ್ದ ರಾಜೀವ್, ದಕ್ಷಿಣ ಭಾರತದ ಖ್ಯಾತ ನಟ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಆಡಿದ ಆಲ್‌ರೌಂಡರ್ ಕ್ರಿಕೆಟಿಗ. ರಾಜೀವ್ ಲೀಗ್‌ನಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಅವರು ಒಮ್ಮೆ 33 ಎಸೆತಗಳಲ್ಲಿ 111 ರನ್ ಗಳಿಸಿದರು.ಇದು ನಿಜವಾಗಿಯೂ ವಿಶೇಷವಾಗಿತ್ತು ಏಕೆಂದರೆ ಆಗ ಅವರು ಕೇವಲ 24 ದಿನಗಳ ಹಿಂದೆ ಮೊಣಕಾಲಿನ ಆಪರೇಷನ್ ಆಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ವಿವಿಧ ಸೀಸನ್‌ಗಳಲ್ಲಿ ಆಡಿ ರಾಜೀವ್ ಬಹಳ ಪ್ರಸಿದ್ಧರಾದರು.
ಇದೀಗ ನಟನಾಗಿ ಪರಿವರ್ತಿತ ಕ್ರಿಕೆಟಿಗ ರಾಜೀವ್ ಹನು ಸಿನಿಮಾ ಲೋಕ ದಲ್ಲಿ ಮಿಂಚುತಿದ್ದಾರೆ. ಅವರು ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್ ಕನ್ನಡ ಸೀನ್ 8 ರ ಕನ್ನಡ ಆವೃತ್ತಿಯಲ್ಲಿ ಇತರ ಸ್ಪರ್ಧಿಗಳೊಂದಿಗೆ ಪ್ರಬಲ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ರಾಜೀವ್ ಅವರು 2007 ರಲ್ಲಿ ಸ್ನೇಹನಾ ಪ್ರೀತೀನಾ ಚಿತ್ರದ ಮೂಲಕ ದಕ್ಷಿಣ-ಭಾರತೀಯ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಹಲವಾರು ಜನಪ್ರಿಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಜಿಂದಗಿ, RX ಸೂರಿ, ಅಮವಾಸೆ, ಬೆಂಗಳೂರು 560023 ಇತ್ಯಾದಿ. ‘ಹೆಬ್ಬುಲಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಇದೀಗ ‘ಉಸಿರೇ ಉಸಿರೆ’ ಎಂಬ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಅಫೀಷಿಯಲ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ, ಏತನ್ಮಧ್ಯೆ, ಕಿಚ್ಚ ಸುದೀಪ್, ಪಾಪ್ಯುಲರ್ ಸಿಸಿಎಲ್ ಪ್ಲೇಯರ್ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ, ರಾಜೀವ್ ಅವರ ಚೊಚ್ಚಲ ಚಿತ್ರ ಉಸಿರೇ ಉಸಿರೇಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಜೀವ್ ನಾಯಕನಾಗಿ ನಟಿಸುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ‘ಸ್ತ್ರೀಶಕ್ತಿ’ ಚಿತ್ರದಲ್ಲಿ ನಟಿಸಿದ್ದರು. ಅದರ ನಂತರ ರಾಜೀವ್ ಪೋಷಕ ಪಾತ್ರಗಳಿಗೆ ಸೀಮಿತರಾದರು. ಇದೀಗ ರಾಜೀವ್ ಈ ಚಿತ್ರದ ಮೂಲಕ ನಾಯಕನಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಉಸಿರೇ ಉಸಿರೇ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹೀರೊ. ರಾಜೀವ್ಗೆ ಶ್ರೀಜಿತ ಹೀರೊಯಿನ್. ಇವರೊಂದಿಗೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅಲಿ, ಬ್ರಹ್ಮಾನಂದಂ, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವ, ಸುಶ್ಮಿತಾ ಅವರಂತಹ ನಟರನ್ನು ಒಳಗೊಂಡಿದೆ.
ಚಿತ್ರವನ್ನು ಹೆಚ್ ಆರ್ ರಾಜೇಶ್ ನಿರ್ಮಿಸುತ್ತಿದ್ದು, ಸಿ ಎಂ ವಿಜಯ್ ನಿರ್ದೇಶಿಸುತ್ತಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಕರು.
ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಹಿರಿಯ, ಕಿರಿಯ ಕ್ರಿಕೆಟಿಗರೊಂದಿಗೆ ಜೀವನದ ಅನುಭವಗಳನ್ನು ಹಂಚಿಕೊಂಡು,ಮಕ್ಕಳು ಹಾಗೂ ಪೋಷಕರಿಗೆ ಕ್ರೀಡೆಯ ಮಹತ್ವವನ್ನು ವಿವರಿಸಿದ ಚಲನಚಿತ್ರ ನಟ,ಸಿ.ಸಿ.ಎಲ್ ಖ್ಯಾತಿಯ ರಾಜೀವ್ ಹನುಗೆ ಅಭಿನಂದನೆಗಳು.
ರಾಜೀವ್ ಹನು ಮತ್ತು ‘ಉಸಿರೇ ಉಸಿರೆ’ ಚಿತ್ರಕ್ಕೆ ರಾಜ್ಯ ಟೆನ್ನಿಸ್ ಕ್ರಿಕೆಟ್ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್, ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ವತಿಯಿಂದ ಶುಭಾಶಯಗಳು…